M.S.Subbulakshmi Biopic -
ಭಾರತ ಕಂಡ ಶ್ರೇಷ್ಠ ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನಾಧಾರಿತ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ ಎಂದು ಕೆಲ ದಿನಗಳ ಹಿಂದಷ್ಟೇ ಸುದ್ದಿಯಾಗಿತ್ತು. ಇದೀಗ ಎಂ.ಎಸ್. ಸುಬ್ಬುಲಕ್ಷ್ಮಿ ಅವರ 110ನೇ ಜಯಂತಿಯಾದ ಬುಧವಾರ (ಸೆ. 16) ಸಿನಿಮಾ ಲಾಂಚ್ ಮಾಡಲಾಗಿದ್ದು, ನಟ ಕಮಲ್ ಹಾಸನ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. "ಮಲ್ಲಿ ರಾವಾ', "ಕಿಂಗ್ಡಮ್' ಸೇರಿ ರಾಷ್ಟ್ರಪ್ರಶಸ್ತಿ ವಿಜೇತ "ಜೆರ್ಸಿ' ನಿರ್ದೇಶಿಸಿರುವ ಗೌತಮ್ ತಿನ್ನನೂರಿ ಈ ಬಯೋಪಿಕ್ಗೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಚಿತ್ರದ ಬಗ್ಗೆ ಗೌತಮ್, "ಈ ಸಿನಿಮಾ ಪ್ರಾರಂಭಿಸಿದಾಗ, ನಾವು ಭಾರತದ ಶ್ರೇಷ್ಠ ಸಂಗೀತ ದಿಗ್ಗಜರೊಬ್ಬರ ಕುರಿತ ಸಿನಿಮಾ ರೂಪಿಸುತ್ತಿದ್ದೇವೆ ಎಂದು ಭಾವಿಸಿದ್ದೆವು. ಆದರೆ, ಅವರ ಜೀವನದ ಕುರಿತು ರೀಸರ್ಚ್ ಮಾಡಿದಾಗ, ಅವರು ಶ್ರೇಷ್ಠ ಗಾಯಕಿ ಮಾತ್ರವಲ್ಲ, ಹಲವು ತ್ಯಾಗಗಳನ್ನು ಮಾಡಿದ್ದಾರೆ ಎಂಬುದು ಗೊತ್ತಾಯಿತು' ಎಂದು ಹೇಳಿಕೊಂಡರು. ಅಲ್ಲು ಅರ್ಜುನ್, ಬನ್ನಿ ವಾಸ್ ಜತೆ ಕನ್ನಡ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಈ ಬಯೋಪಿಕ್ ನಿರ್ಮಾಣವ ಜವಾಬ್ದಾರಿ ಹೊತ್ತಿದ್ದು, "ಈ ಸಿನಿಮಾ ನಮ್ಮೆಲ್ಲರ ಹಲವು ವರ್ಷಗಳ ಕನಸು. ಈ ಯೋಜನೆಯ ಹಿಂದೆ ಏಳೆಂಟು ವರ್ಷಗಳ ಪರಿಶ್ರಮ ಮತ್ತು ರೀಸರ್ಚ್ ಅಡಗಿದೆ' ಎಂದರು.
ಹೃದಯ ತುಂಬಿ ಬರುತ್ತಿತ್ತು
ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ ನಟ ಕಮಲ್ ಹಾಸನ್, "ಎಂ.ಎಸ್. ಸುಬ್ಬುಲಕ್ಷ್ಮಿ ತಮ್ಮ ಕಂಠದ ಮೂಲಕ ಭಾರತವನ್ನು, ವಿಶೇಷವಾಗಿ ದಣ ಭಾರತವನ್ನು ಒಗ್ಗೂಡಿಸಿದ ಸಂಗೀತ ಸಾಮ್ರಾಜ್ಞಿಯಾಗಿದ್ದರು. ಅವರು ಸಂಸತ, ಹಿಂದಿ, ತೆಲುಗು, ತಮಿಳು, ಕ್ನನಡ ಸೇರಿ ಹಲವು ಭಾಷೆಗಳಲ್ಲಿ ಹಾಡಿದ್ದಾರೆ. ಯಾವ ಭಾಷೆಯಲ್ಲಿ ಹಾಡಿದರೂ, ತಮ್ಮ ಧ್ವನಿಯ ಮೂಲಕ ಆ ಭಾಷೆಯ ಸೌಂದರ್ಯವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದರು. ಸುಪ್ರಭಾತ, ಲಲಿತಾ ಸಹಸ್ರನಾಮ ಅಥವಾ ರಂಗಪುರ ವಿಹಾರವನ್ನು ಕೇಳಿದಾಗಲೆಲ್ಲ ನನ್ನ ಹೃದಯ ಸಂತೋಷದಿಂದ ತುಂಬುತ್ತದೆ. ಮಹಾತ್ಮಾ ಗಾಂಧೀಜಿ ಕೂಡ ಅವರ ಸಂಗೀತದ ಅಭಿಮಾನಿಯಾಗಿದ್ದರು' ಎನ್ನುತ್ತಾ ತಂಡಕ್ಕೆ ಶುಭಹಾರೈಸಿದರು.
ಕೋಟ್:
ಒಬ್ಬ ಕಲಾವಿದೆಯಾಗಿ ಇಂತಹ ಅದ್ಭುತ ಅವಕಾಶ ದೊರೆತಿರುವುದಕ್ಕೆ ನನ್ನ ಹೃದಯ ತುಂಬಿ ಬಂದಿದೆ. ಎಂ. ಎಸ್. ಸುಬ್ಬುಲಕ್ಷ್ಮಿ ಅವರ ಅಸಾಧಾರಣ ಜೀವನಪಯಣದ ಒಂದು ಸಣ್ಣ ಭಾಗವಾಗಲು ಅವಕಾಶ ಸಿಕ್ಕಿರುವುದಕ್ಕೆ ನನಗೆ ಅಪಾರ ಹೆಮ್ಮೆ ಮತ್ತು ಗೌರವವಿದೆ. ಈ ಪಾತ್ರವನ್ನು ಎಲ್ಲರೂ ಮೆಚ್ಚುವ ರೀತಿಯಲ್ಲಿ ತೆರೆಯ ಮೇಲೆ ಮೂಡಿಸಲು ಎಲ್ಲ ಪ್ರಯತ್ನ ಮಾಡುತ್ತೇನೆ.