ದೇವಿ ಮಹಾತ್ಮೆ ಚಿತ್ರದ ಪೋಸ್ಟರ್ 
ಸ್ಯಾಂಡಲ್‌ವುಡ್

Devi Mahathme - ನಟ ರಂಗಾಯಣ ರಘು ಮಹಾತ್ಮೆ

ಕರಾವಳಿಯ ಯಕ್ಷಗಾನದ ಹಿನ್ನೆಲೆ, ಕುಂದಾಪುರದ ಭಾಷಾ ಸೊಗಡು ಹಾಗೂ ಮಾನವೀಯ ಸಂಬಂಧಗಳ ಸುತ್ತ ಹೆಣೆಯಲಾಗಿರುವ "ದೇವಿ ಮಹಾತ್ಮೆ' ಸಿನಿಮಾ ಟ್ರೇಲರ್​ ಬಿಡುಗಡೆ ಮಾಡಲಾಗಿದೆ. "ಮರ್ಯಾದೆ ಪ್ರಶ್ನೆ' ಖ್ಯಾತಿಯ ನಾಗರಾಜ್​ ಸೋಮಯಾಜಿ ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದು, "ಪ್ರೇಮದ ಊರಲಿ' ಯಶಸ್ಸಿನ ಅಲೆಯಲ್ಲಿರುವ ಹಿರಿಯ ನಟ ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ಬೆಂಗಳೂರು: ಕರಾವಳಿಯ ಯಕ್ಷಗಾನದ ಹಿನ್ನೆಲೆ, ಕುಂದಾಪುರದ ಭಾಷಾ ಸೊಗಡು ಹಾಗೂ ಮಾನವೀಯ ಸಂಬಂಧಗಳ ಸುತ್ತ ಹೆಣೆಯಲಾಗಿರುವ "ದೇವಿ ಮಹಾತ್ಮೆ' ಸಿನಿಮಾ ಟ್ರೇಲರ್​ ಬಿಡುಗಡೆ ಮಾಡಲಾಗಿದೆ. "ಮರ್ಯಾದೆ ಪ್ರಶ್ನೆ' ಖ್ಯಾತಿಯ ನಾಗರಾಜ್​ ಸೋಮಯಾಜಿ ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದು, "ಪ್ರೇಮದ ಊರಲಿ' ಯಶಸ್ಸಿನ ಅಲೆಯಲ್ಲಿರುವ ಹಿರಿಯ ನಟ ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. "ನಮ್ಮ ಊರಿನಲ್ಲಿ ನನ್ನ ತಂದೆ ದೇವಿ ಪಾತ್ರ ಮಾಡುತ್ತಿದ್ದರು. ಹೀಗಾಗಿ ಸಣ್ಣ ವಯಸ್ಸಿನಿಂದಲೂ ನನಗೆ "ದೇವಿ ಮಹಾತ್ಮೆ' ಜತೆ ಭಾವನಾತ್ಮಕ ನಂಟಿದೆ. ಕುಂದಾಪುರ ಭಾಷೆ ನನಗೆ ಹೊಸದಾಗಿತ್ತು. ಅಲ್ಲಿನ ಸೆಕೆಯ ನಡುವೆ, ಸಮುದ್ರದ ಒಳಗೆ ಐದಾರು ಕಿಲೋಮೀಟರ್​ ಹೋಗಿ ಚಿತ್ರೀಕರಿಸಿದ್ದು ಮರೆಯಲಾಗದ ಅನುಭವ. ಈ ಸಿನಿಮಾದಲ್ಲಿ ಕಲಾವಿದರ ಅಭಿನಯವೇ ನಿಜವಾದ ಅಲಂಕಾರ' ಎಂದು ಹೇಳಿಕೊಂಡರು ರಘು.

ನಿರ್ದೇಶಕ ನಾಗರಾಜ್ ಸೋಮಯಾಜಿ, ನಿರ್ಮಾಪಕ ಗಾಂಧಿರಾಜನ್, ನಟ ರಂಗಾಯಣ ರಘು ಜತೆ ಚಿತ್ರತಂಡ

ನಿರ್ದೇಶಕ ನಾಗರಾಜ್​ ಸೋಮಯಾಜಿ, "ಇದು ಕೇವಲ ದೇವಿ ಮಹಾತ್ಮೆಯ ಕಥೆಯಲ್ಲ. ಬದಲಾಗಿ ದೇವೆ ಮಹಾತ್ಮೆ ಆಡಿಸುವವನ ಕಥೆ. 2000ರ ಕಾಲಟ್ಟದಲ್ಲಿ ನಡೆಯುವ ಈ ಕಥೆಯಲ್ಲಿ ಮನುಷ್ಯ ಸಂಬಂಧಗಳು ಮತ್ತು ವಾಸ್ತವ ಬದುಕಿನ ಭಾವನೆಗಳಿವೆ. ನಂದೀಶ್​ ಜನ್ನಾಡಿ ಯಕ್ಷಗಾನದ ಮಹಿಷಾಸುರನ ಪಾತ್ರ ಮಾಡಿದ್ದು, ಸಂಪ್ರದಾಯಕ್ಕೆ ಯಾವುದೇ ಚ್ಯುತಿ ಬಾರದಂತೆ ತೋರಿಸಿದ್ದೇವೆ. ನನಗೆ ಮಾನವೀಯ ಮೌಲ್ಯಗಳ ಕಥೆಗಳು ಇಷ್ಟ. ಕಮರ್ಷಿಯಲ್​ ಅಂಶ ಬೇಕು ಅಂತ ಅನವಶ್ಯಕ ಫೈಟ್ಸ್​ ಅಥವಾ ಮಸಾಲೆ ಸೇರಿಸಲು ನನ್ನ ಮನಸ್ಸು ಒಪ್ಪಲ್ಲ. ನಾನು ನಂಬಿದ ವಿಷಯಗಳನ್ನೇ ಪ್ರಾಮಾಣಿಕವಾಗಿ ತೆರೆಯ ಮೇಲೆ ತಂದಿದ್ದೇನೆ' ಎಂದರು. ರಂಗಾಯಣ ರು ಜತೆ ಪ್ರತಿಮಾ ನಾಯಕ್​, ಸುಂದರ್​ ವೀಣಾ, ಅರವಿಂದ್​ ಕುಪ್ಳಿಕರ್​, ಬಾಸುಮ ಕೊಡಗು, ನಾಗೇಂದ್ರ ಶಾ, ಪಿ.ಡಿ. ಸತೀಶ್​ಚಂದ್ರ, ಪ್ರಶಾಂತ್​ ಹಿರೇಮಠ, ಆದಿತ್ಯ ರಾಜ್​, ರು ಪಾಂಡೇಶ್ವರ ಸೇರಿ ಬಹುತೇಕ ಎಲ್ಲರೂ ರಂಗಭೂಮಿ ಹಿನ್ನೆಲೆಯ ಕಲಾವಿದರೇ ನಟಿಸಿರುವುದು ವಿಶೇಷ. ಚಿತ್ರದಲ್ಲಿ ಮೂರು ಹಾಡುಗಳಿದ್ದು ಲಿಖಿತ್​ ಪ್ರಸಾದ್​ ಶೆಟ್ಟಿ ಸಂಗೀತ, ಉಜ್ವಲ್​ ಚಂದ್ರ ಸಂಕಲನ ಹಾಗೂ ಎಸ್​.ಕೆ. ರಾವ್​ ಛಾಯಾಗ್ರಹಣದಲ್ಲಿ "ದೇವಿ ಮಹಾತ್ಮೆ' ಮೂಡಿಬಂದಿದೆ. ಸಿನಿಮಾ ಇದೇ ಡಿ. 4ರಂದು ತೆರೆಗೆ ಬರಲಿದೆ.

ದೇವರೇ ನನ್ನ ಮಾತು ಕೇಳುತ್ತಿದ್ದಾನೆ ಅಂತ ನಂಬುವ, ದೇವರ ಜತೆಗೆ ಜಗಳವಾಡಲು ಹೋಗುವ ಶಂಕರನ ಪಾತ್ರ ನನ್ನದು. ನಾನು ಆಸ್ತಿಕ. ದೇವರನ್ನು ನಂಬುತ್ತೇನೆ. ಆದರೆ, ದೇವರ ವಿಗ್ರಹವನ್ನು ಬಿಸಾಕುವ, ಕೆಡವುವ ಸನ್ನಿವೇಶವಿತ್ತು. ನಿಂಬೆಹಣ್ಣು ಮಂತ್ರಿಸಿ ದೇವರ ಮೇಲೆ ಭಾರ ಹಾಕಿಯೇ ಆ ಸೀನ್​ನಲ್ಲಿ ನಟಿಸಿದೆ. ಹೀಗಾಗಿ ವೈಯಕ್ತಿಕವಾಗಿ ನನಗೂ ಈ ಪಾತ್ರ, ಚಿತ್ರ ಸವಾಲಿನಿಂದ ಕೂಡಿತ್ತು.
ರಂಗಾಯಣ ರಘು, ನಟ.
ದೇವಿ ಮಹಾತ್ಮೆ ಪೋಸ್ಟರ್