ದೈಜಿ ಚಿತ್ರದ ಪೋಸ್ಟರ್ 
ಸ್ಯಾಂಡಲ್‌ವುಡ್

Daiji - ರಮೇಶ್ ಅರವಿಂದ್, ಆಕಾಶ್ ಶ್ರೀವತ್ಸ ಕಾಂಬಿನೇಷನ್​ ಚಿತ್ರ ದೈಜಿ ರಿಲೀಸ್​ ಡೇಟ್ ಫಿಕ್ಸ್

ರಮೇಶ್​ ಅರವಿಂದ್​ ನಟಿಸುತ್ತಿರುವ 106ನೇ ಸಿನಿಮಾ "ದೈಜಿ'. ಇದೊಂದು ಸೈಕಲಾಜಿಕಲ್​ ಮಿಸ್ಟರಿ ಹಾರರ್​ ಥ್ರಿಲ್ಲರ್​ ಚಿತ್ರವಾಗಿದ್ದು, ಟೈಟಲ್​, ಪೋಸ್ಟರ್​ ಮೂಲಕವೇ ಕುತೂಹಲ ಮೂಡಿಸಿದೆ. ಜತೆಗೆ "ಶಿವಾಜಿ ಸುರತ್ಕಲ್​' ಸರಣಿಯ ಯಶಸ್ಸಿನ ಬಳಿಕ ನಿರ್ದೇಶಕ ಆಕಾಶ್​ ಶ್ರೀವತ್ಸ ಜತೆ ರಮೇಶ್​ ಅರವಿಂದ್​ ಮೂರನೇ ಬಾರಿಗೆ ಕೈಜೋಡಿಸಿದ್ದು, ನಿರೀಕ್ಷೆ ಹೆಚ್ಚಿಸಿದೆ. ಇದೀಗ ಚಿತ್ರತಂಡ ರಿಲೀಸ್​ ದಿನಾಂಕ ಘೋಷಿಸಿದ್ದು, 2027ರ ಜ.14ರಂದು ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ.

ಬೆಂಗಳೂರು: ರಮೇಶ್​ ಅರವಿಂದ್​ ನಟಿಸುತ್ತಿರುವ 106ನೇ ಸಿನಿಮಾ "ದೈಜಿ'. ಇದೊಂದು ಸೈಕಲಾಜಿಕಲ್​ ಮಿಸ್ಟರಿ ಹಾರರ್​ ಥ್ರಿಲ್ಲರ್​ ಚಿತ್ರವಾಗಿದ್ದು, ಟೈಟಲ್​, ಪೋಸ್ಟರ್​ ಮೂಲಕವೇ ಕುತೂಹಲ ಮೂಡಿಸಿದೆ. ಜತೆಗೆ "ಶಿವಾಜಿ ಸುರತ್ಕಲ್​' ಸರಣಿಯ ಯಶಸ್ಸಿನ ಬಳಿಕ ನಿರ್ದೇಶಕ ಆಕಾಶ್​ ಶ್ರೀವತ್ಸ ಜತೆ ರಮೇಶ್​ ಅರವಿಂದ್​ ಮೂರನೇ ಬಾರಿಗೆ ಕೈಜೋಡಿಸಿದ್ದು, ನಿರೀಕ್ಷೆ ಹೆಚ್ಚಿಸಿದೆ. ಇದೀಗ ಚಿತ್ರತಂಡ ರಿಲೀಸ್​ ದಿನಾಂಕ ಘೋಷಿಸಿದ್ದು, 2027ರ ಜ.14ರಂದು ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ. ರಮೇಶ್​ ಜತೆ ರಾಧಿಕಾ ನಾರಾಯಣ್​, ದಿಗಂತ್​ ಮಂಚಾಲೆ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು ಅವಿನಾಶ್​, ಬಿಎಂ.ಗಿರಿರಾಜ್​, ಅಲೆಕ್ಸಾಂಡರ್​ ಟೈಲರ್​, ಸ್ಯಾಂಡಿ ಹಿಗಿನ್ಸ್​ ತಾರಾಗಣದಲ್ಲಿದ್ದಾರೆ. ನಿರ್ದೇಶಕ ಆಕಾಶ್​ ಶ್ರೀವತ್ಸ, "ನೈಜ ಟನೆಗಳ ಆಧಾರದಲ್ಲಿ ಕಥೆ ರೂಪಿಸಿದ್ದೇವೆ. ಕಥೆಯಲ್ಲಿ ಸೂರ್ಯಕಾಂತಿ ಹೂವು ಪ್ರಮುಖ ಪಾತ್ರವಹಿಸುತ್ತದೆ. ಸೂರ್ಯನ ಬೆಳಕು, ಜೀವಚೈತನ್ಯ, ಭರವಸೆ ಮತ್ತು ಹೊಸತನದ ಸಂಕೇತವಾಗಿರುವ ಸೂರ್ಯಕಾಂತಿ, ಮಗುವಿನ ಜನನದ ಸುತ್ತಲಿನ ನಿಗೂಢತೆಗಳನ್ನು ಅನಾವರಣಗೊಳಿಸುವ ಈ ಚಿತ್ರದಲ್ಲಿ ಕುತೂಹಲಕಾರಿ ಅರ್ಥ ಪಡೆದುಕೊಂಡಿದೆ. ಪ್ರಮುಖ ಪಾತ್ರಗಳಾದ ಸೂರ್ಯ, ಭೂಮಿ ಮತ್ತು ಗಗನ ಹೆಸರುಗಳೂ ಪ್ರಕೃತಿಯ ಮೂರು ಮೂಲಭೂತ ಅಂಶಗಳನ್ನು ಪ್ರತಿಪಾದಿಸುತ್ತವೆ' ಎಂದು ಮಾಹಿತಿ ನೀಡುತ್ತಾರೆ ಆಕಾಶ್​ ಶ್ರೀವತ್ಸ. ಚಿತ್ರಕ್ಕೆ ಜೂಡಾ ಸ್ಯಾಂಡಿ, ನಕುಲ್​ ಅಭಯಂಕರ್​ ಮತ್ತು ಸಚಿನ್​ ಬಸ್ರೂರ್​ ಸಂಗೀತ, ಶ್ರೀಶ ಕುದುವಳ್ಳಿ ಛಾಯಾಗ್ರಹಣದಲ್ಲಿ ಮೂಡಿಬಂದಿರುವ "ದೈಜಿ'ಯ ಸಂಕಲನದ ಜವಾಬ್ದಾರಿಯನ್ನು ಖುದ್ದು ನಿರ್ದೇಶಕ ಆಕಾರ್ಶ ನಿರ್ವಹಿಸಿದ್ದಾರೆ.

ನಿರ್ದೇಶಕ ಆಕಾಶ್ ಶ್ರೀವತ್ಸ
ಮಕರ ಸಂಕ್ರಾಂತಿಯು ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ದಿನ. ಉತ್ತರಾಯಣದ ಶುಭಾರಂಭವೆಂದು ಪರಿಗಣಿಸಲಾಗುವ ಈ ಹಬ್ಬ ಪ್ರಕೃತಿ, ಸಮೃದ್ಧಿ ಮತ್ತು ಹೊಸ ಜೀವನದ ಸಂಕೇತ. ಸಂಕ್ರಾಂತಿ ಜೀವನದ ಸುಂದರ ಚಕ್ರವನ್ನು ಸಂಭ್ರಮಿಸಿದರೆ, "ದೈಜಿ' ಅದೇ ಜೀವನದ ಸುತ್ತ ಅಡಗಿರುವ ಕತ್ತಲೆಯ ನಿಗೂಢತೆಗಳನ್ನು ತೆರೆದಿಡಲು ಪ್ರಯತ್ನಿಸುತ್ತದೆ. ಹೀಗಾಗಿ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಸಿನಿಮಾ ರಿಲೀಸ್​ ಮಾಡಲು ನಿರ್ಧರಿಸಿದ್ದೇವೆ.
ಆಕಾಶ್​ ಶ್ರೀವತ್ಸ, ನಿರ್ದೇಶಕ.