Rakshitha Prem Defends Yash's Toxic
- ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಪರವಾಗಿ ನಿಂತ ನಟಿ ರಕ್ಷಿತಾ ಪ್ರೇಮ್.
- ಹಾಲಿವುಡ್ ಸಿನಿಮಾಗಳನ್ನು ಒಪ್ಪುವ ಪ್ರೇಕ್ಷಕರು ಸೌತ್ ಸಿನಿಮಾವನ್ನು ಸ್ವೀಕರಿಸಲು ಯಾಕೆ ಎಂದ ಸ್ಯಾಂಡಲ್‌ವುಡ್ ಕ್ವೀನ್
- ಚಿತ್ರದ ದ್ವಿತೀಯಾರ್ಧದಲ್ಲಿ ಯಶ್ ನಿರ್ವಹಿಸಿದ ರಾಯ ಪಾತ್ರದ ಬಗ್ಗೆ ಮೆಚ್ಚಿಕೊಂಡ ನಟಿ ರಕ್ಷಿತಾ
Rakshitha Prem Defends Yash's Toxic:
ಆ.26ರಂದು ಬೆಳ್ಳಿತೆರೆಗೆ ಕಾಲಿಟ್ಟ ಟಾಕ್ಸಿಕ್ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ಸಿನಿಮಾ ರಿಲೀಸ್ ಆಗುವ ಮುನ್ನವೇ ಕೋಟಿಗಟ್ಟಲೇ ಕಲೆಕ್ಷನ್ ಕಂಡಿದ್ದ ಈ ಚಿತ್ರದ ಕತೆ ಬಗ್ಗೆ ಸಾಕಷ್ಟು ನೆಗೆಟಿವ್ ಕಾಮೆಂಟ್ಗಳು ಕೇಳಿಬರುತ್ತಿದೆ. ಸದ್ಯ ಸಿನಿಮಾ ಪರ ನಿಂತ ಸ್ಯಾಂಡಲ್‌ವುಡ್ ಕ್ವೀನ್ ರಕ್ಷಿತಾ ಪ್ರೇಮ್, ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಹಾಲಿವುಡ್ ಸಿನಿಮಾಗಳನ್ನು ನೆಚ್ಚಿಕೊಳ್ಳೋ ನಾವು, ಸೌತ್ ಇಂಡಿಯಾ ಸಿನಿಮಾಗಳನ್ನು ಪ್ರೀತಿಸೋಕೆ ಕಷ್ಟವೇ ಎಂದು ಪ್ರಶ್ನೆ ಮಾಡಿ, ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಕತೆ ಡಬ್ಬ ತರ ಇದೆ ಎಂದ ನೆಟ್ಟಿಗರು
ಟಾಕ್ಸಿಕ್ ಸಿನಿಮಾಗೆ ಎಕ್ಸ್ನಲ್ಲಿ ನೆಗೆಟಿವ್ ರಿವ್ಯೂವ್ಗಳು ಕೇಳಿ ಬರುತ್ತಿದೆ. ಮೇಕಿಂಗ್ ಹಾಲಿವುಡ್ ರೀತಿಯಲ್ಲಿದ್ದರೂ ಸಹ ಕತೆ ಕೆಟ್ಟದಾಗಿದೆ, ಹಿಂಸೆ ಧೂಮಪಾನ ಇಷ್ಟೇ ಸಿನಿಮಾದ ದೃಶ್ಯಗಳು ಎಂದ ಕೆಲವು ಪ್ರತಿಕ್ರಿಯೆ ವ್ಯಕ್ರವಾಗುತ್ತಿದ್ದರೆ, ಇನ್ನೂ ಕೆಲವರು ಪ್ಯಾನ್ ಇಂಡಿಯಾ ಮಟ್ಟಕ್ಕೆ ಯಶ್ ಚಿತ್ರ ಸದ್ದು ಮಾಡುತ್ತಿದೆ. ಇದು ನಮ್ಮ ಕನ್ನಡದ ಹೆಮ್ಮೆ ಎಂದು ಬರೆದುಕೊಳ್ಳಲಾಗುತ್ತಿದೆ.
ಯಶ್ ಪರ ನಿಂತ ಸ್ಯಾಂಡಲ್‌ವುಡ್
ಕಳಪೆ ರಿವ್ಯೂಗಳು ಕೇಳಿ ಬರುತ್ತಿರುವ ಹಿನ್ನೆಲೆ, ಅವರ ಬೆಂಬಲಕ್ಕೆ ನಟ ಶಿವರಾಜ್ ಕುಮಾರ್, ಉಪೇಂದ್ರ, ಕಿಚ್ಚ ಸುದೀಪ ಹಾಗೂ ನಟಿ ಹಾಗೂ ನಿರ್ಮಾಪಕ ಪ್ರೇಮ್ ಅವರ ಪತ್ನಿ ರಕ್ಷಿತಾ ಪ್ರೇಮ್ ಅವರು ಸಿನಿಮಾದ ಪರವಾಗಿ ಧ್ವನಿ ಎತ್ತಿದ್ದಾರೆ.
ರಕ್ಷಿತಾ ಪ್ರೇಮ್ ಹೇಳಿದ್ದಿಷ್ಟು
'ನಾನು ನನ್ನ ಗೆಳತಿ ಇಂದು ಟಾಕ್ಸಿಕ್ ಸಿನಿಮಾ ನೋಡಿದೆವು. ತುಂಬಾನೆ ಚೆನ್ನಾಗಿದೆ. ಆನ್ಲೈನ್ ಕಾಮೆಂಟ್ಗಳ ಬಗ್ಗೆ ಪಕ್ಕಕ್ಕೆ ಇಟ್ಟು ಸಿನಿಮಾ ನೋಡಿ. ಈ ಸಿನಿಮಾವು ಒಬ್ಬ ವ್ಯಕ್ತಿಯ ಅಹಂಕಾರದಿಂದ ತನ್ನೊಳಗೆ ಉಂಟಾಗುವ ವಿಷಯುಕ್ತತೆಯ ಅಥವಾ ಟಾಕ್ಸಿಸಿಟಿ ಸುತ್ತ ಕತೆ ಹೆಣೆಯಲಾಗಿದೆ. ನಾವು ಮಿಲೇನಿಯಲ್ಸ್ ಆಗಿ 'ದಿ ಮ್ಯಾಟ್ರಿಕ್ಸ್', 'ಎಕ್ಸ್-ಮೆನ್' ಹಾಗೂ ಕ್ರಿಸ್ಟೋಫರ್ ನೊಲನ್ ಅವರ ಸರಣಿ ಚಿತ್ರಗಳನ್ನು ನೋಡಿದ್ದೇವೆ ಮತ್ತು ಅವುಗಳ ಅಭಿಮಾನಿಗಳಾಗಿದ್ದೇವೆ. ಇದನ್ನು ಒಪ್ಪಿಕೊಳ್ಳುವ ನಮಗೆ 'ಟಾಕ್ಸಿಕ್' ಅನ್ನು ಸ್ವೀಕರಿಸಲು ಯಾಕೆ ಸಾಧ್ಯವಾಗುತ್ತಿಲ್ಲ ಎನ್ನುವುದು ನಿಜಕ್ಕೂ ಒಂದು ಅಚ್ಚರಿ ವಿಚಾರ' ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
' ದ್ವಿತೀಯಾರ್ಧದಲ್ಲಿ ಯಶ್ ಅವರ ನಟನೆ ಬಗ್ಗೆ ಶ್ಲಾಘಿಸಿರುವ ಅವರು, ನೀವು ದ್ವಿತೀಯಾರ್ಧದಲ್ಲಿ ನಿಮ್ಮನ್ನು ತೋರಿಸಿಕೊಂಡ ರೀತಿ ಅದ್ಭುತವಾಗಿದೆ. ಯಶ್ ಮತ್ತು ರಾಯ ಪಾತ್ರಗಳನ್ನು ರೂಪಿಸಿದ ರೀತಿ ಸುಂದರವಾಗಿದೆ, ನನಗೆ ತುಂಬಾ ಇಷ್ಟವಾಯಿತು' ಎಂದು ಕೊಂಡಾಡಿದ್ದಾರೆ.
ಟಾಕ್ಸಿಕ್ ಹವಾ
2026 ರ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ 'ಟಾಕ್ಸಿಕ್' ಒಂದಾಗಿತ್ತು. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಯಶ್ ರಾಯ್/ಟಿಕೆಟ್ ಪಾತ್ರದಲ್ಲಿ ನಟಿಸಿದ್ದು, ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಮತ್ತು ಅಕ್ಷಯ್ ಒಬೆರಾಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಲವು ಬಾರಿ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟ ನಂತರ ಆಗಸ್ಟ್ 26 ರಂದು ಜಗತ್ತಿನಾದ್ಯಂತ ಬಿಡುಗಡೆಯಾಯಿತು.
ಬಿಡುಗಡೆಗೂ ಮುನ್ನ ಭಾರೀ ಹೈಪ್ ಸೃಷ್ಟಿಸಿದ್ದರೂ, ಚಿತ್ರದ ಕಥಾವಸ್ತು, ವೇಗ, ಹಿಂಸಾಚಾರ ಮತ್ತು ಲೈಂಗಿಕ ದೃಶ್ಯಗಳ ಕುರಿತು ವಿಮರ್ಶಕರಿಂದ ಹಾಗೂ ಕೆಲ ಪ್ರೇಕ್ಷಕರಿಂದ ಟೀಕೆಗಳು ಮುಂದುವರೆದಿದೆ, (ಏಜೆನ್ಸೀಸ್).