ಯಶ್, ನಿರ್ದೇಶಕಿ ಗೀತು ಮೋಹನದಾಸ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಮೂಡಿಬಂದಿರುವ ಈ ವರ್ಷದ ಬಹುನಿರೀತ ಸಿನಿಮಾ "ಟಾಕ್ಸಿಕ್'. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ, ನೆಗೆಟಿವ್ ಪ್ರಚಾರದ ನಡುವೆಯೂ ಸಿನಿಮಾ ರಿಲೀಸ್ ಆದ ಐದು ದಿನಗಳಲ್ಲಿ ಭಾರತದ ಬಾಕ್ಸಾಫೀಸಿನಲ್ಲಿ ₹255.95 ಕೋಟಿ ಹಾಗೂ ಓವರ್ಸೀಸ್ನಲ್ಲಿ ₹29.25 ಕೋಟಿ ಸೇರಿ ಒಟ್ಟು ₹285. 20 ಕೋಟಿ ಗಳಿಕೆ ಮಾಡಿಕೊಂಡಿದ್ದು, ₹300 ಕೋಟಿ ಕ್ಲಬ್ನತ್ತ ಸಾಗಿದೆ. ಒಂದೆಡೆ ಹಿಂದಿ ಮತ್ತು ತೆಲುಗು ಚಿತ್ರರಂಗಗಳಲ್ಲಿ "ಟಾಕ್ಸಿಕ್' ವಿರುದ್ಧ ದೊಡ್ಡ ಮಟ್ಟದಲ್ಲಿ ನೆಗಟಿವ್ ಪ್ರಚಾರ ನಡೆಸಲಾಗುತ್ತಿದ್ದು, ವ್ಯವಸ್ಥಿತ ಷಡ್ಯಂತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದು ಸಾಲದು ಎಂಬಂತೆ "ಟಾಕ್ಸಿಕ್'ಗೆ ಪೈರಸಿ ಕೂಡ ಕಂಟಕವಾಗಿ ಕಾಡುತ್ತಿದೆ. ಮೂಲಗಳ ಪ್ರಕಾರ ಸಿನಿಮಾ ರಿಲೀಸ್ ಆದ ಕೇವಲ ನಾಲ್ಕು ದಿನಗಳಲ್ಲಿ ಬರೋಬ್ಬರಿ ಒಂದು ಲಕ್ಷಕ್ಕೂ ಅಧಿಕ ಲಿಂಕ್ಗಳನ್ನು ಡಿಲೀಟ್ ಮಾಡಲಾಗಿದೆ. ಭಾರತೀಯ ಸಿನಿಮಾ ಇತಿಹಾಸದಲ್ಲೇ ಕೇವಲ ನಾಲ್ಕು ದಿನಗಳಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಪೈರಸಿ ಲಿಂಕ್ಗಳನ್ನು ಡಿಲೀಟ್ ಮಾಡಿರುವುದು ಇದೇ ಮೊದಲು ಎನ್ನಲಾಗಿದೆ. ಹಾಗೇ ಆರು ದಿನಗಳಲ್ಲಿ 1.37 ಲಕ್ಷಕ್ಕೂ ಅಧಿಕ ಪೈರಸಿ ಲಿಂಕ್ಗಳನ್ನು ಡಿಲೀಟ್ ಮಾಡಲಾಗಿದೆ. "ಈ ಹಿಂದೆ "ಅನಿಮಲ್', "ಧುರಂಧರ್' ಮತ್ತು "ಪುಷ್ಪ' ಸರಣಿ ಸೇರಿ ಕೆಲ ಪ್ಯಾನ್ ಇಂಡಿಯಾ ಚಿತ್ರಗಳು ಪೈರಸಿಯಾಗಿದ್ದರೂ, ಅತಿ ಕಡಿಮೆ ಸಮಯದಲ್ಲಿ ಲಾಂತರ ಲಿಂಕ್ಗಳು ಜಾಲತಾಣ ಸೇರಿರಲಿಲ್ಲ. ಆದರೆ, ನಟ ಯಶ್ ಮತ್ತು "ಟಾಕ್ಸಿಕ್' ಚಿತ್ರವನ್ನು ಮಟ್ಟ ಹಾಕಲೇಬೇಕೆಂದು ಕೆಲ ಕಾಣದ ಕೈಗಳು ಪಣ ತೊಟ್ಟಂತಿದೆ ಎಂಬ ಮಾತುಗಳು ಸ್ಯಾಂಡಲ್ವುಡ್ನಲ್ಲಿ ಕೇಳಿಬರುತ್ತಿವೆ.
ಎಲ್ಲೆಲ್ಲಿ ಪೈರಸಿ?
ಸಾಮಾನ್ಯವಾಗಿ ಸಿನಿಮಾ ಥಿಯೇಟರ್ನಲ್ಲಿ ರಿಲೀಸ್ ಆದ ಎರಡು ಅಥವಾ ಮೂರನೇ ದಿನದಿಂದ ಪೈರಸಿ ಕಾಪಿಗಳು ಜಾಲತಾಣ ಸೇರುತ್ತವೆ. ಆದರೆ, ಬುಧವಾರ ಬೆಳಗ್ಗೆ 10 ಗಂಟೆಯಿಂದಲೇ ಅರ್ಥಾತ್ ಮುಂಜಾನೆ ಶೋ ಮುಗಿದ ಕೆಲವೇ ನಿಮಿಷಗಳಲ್ಲೇ "ಟಾಕ್ಸಿಕ್' ಪೈರಸಿ ಕಾಪಿಗಳು ವೈರಲ್ ಆಗುತ್ತಿವೆ. ಮೊದಲು ಟಾರೆಂಟ್ ವೆಬ್ಸೈಟ್ನಲ್ಲಿ ಪೈರಸಿ ಸಿನಿಮಾಗಳನ್ನು ಅಪ್ಲೋಡ್ ಮಾಡಲಾಗುತ್ತಿತ್ತು. ಅಲ್ಲಿಂದ ಟೆಲಿಗ್ರಾಂ, ಫೇಸ್ಬುಕ್, ಇನ್ಸ್ಟಾಗ್ರಾಂ, ಯೂಟ್ಯೂಬ್ ಸೇರಿ ಇತರೆ ಜಾಲತಾಣಗಳಲ್ಲಿ ಲಿಂಕ್ ಹಂಚಿಕೆಯಾಗುತ್ತಿತ್ತು. ಆದರೆ, ಇತ್ತೀಚೆಗೆ ಟಾರೆಂಟ್ಗಿಂತ ಹೆಚ್ಚಾಗಿ ಟೆಲಿಗ್ರಾಂನಲ್ಲಿ ಸಿನಿಮಾ ಲಿಂಕ್ಗಳನ್ನು ಶೇರ್ ಮಾಡಲಾಗುತ್ತಿದೆ. ಹಾಗೇ ಫೇಸ್ಬುಕ್, ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಂನಲ್ಲೂ ನಕಲಿ ಖಾತೆಗಳ ಮೂಲಕ ಇಡೀ ಸಿನಿಮಾನೇ ಅಪ್ಲೋಡ್ ಮಾಡಲಾಗಿದೆ. ಅಂತಹ ಲಿಂಕ್ಗಳನ್ನು ಹುಡುಕಿ ಡಿಲೀಟ್ ಮಾಡುವ ಹೊತ್ತಿಗೆ ಕೆಲವೇ ನಿಮಿಷಗಳಲ್ಲಿ ಚಿತ್ರವನ್ನು ಸಾವಿರಾರು ಮಂದಿ ವೀಸುತ್ತಿದ್ದು, "ಟಾಕ್ಸಿಕ್' ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಇದುವರೆಗಿನ ಗಳಿಕೆ
ರಿಲೀಸ್ ಆದ ಮೊದಲ ದಿನ ಬುಧವಾರ (ಆ. 26) ಭಾರತದಲ್ಲಿ "ಟಾಕ್ಸಿಕ್' ಚಿತ್ರದ 24,479 ಶೋಗಳಿದ್ದವು. ಫಸ್ಟ್ ಡೇ ದೇಶಾದ್ಯಂತ ಬರೋಬ್ಬರಿ ₹130 ಕೋಟಿ ಸೇರಿ ವಿಶ್ವಾದ್ಯಂತ ₹150 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿಕೊಂಡಿತ್ತು. ಆದರೆ, ಎರಡನೇ ದಿನದಿಂದಲೇ ನೆಗೆಟಿವ್ ಪ್ರಚಾರದಿಂದಾಗಿ ಹಿಂದಿ ಮತ್ತು ತೆಲುಗು ರಾಜ್ಯಗಳಲ್ಲಿ ಚಿತ್ರಕ್ಕೆ ದೊಡ್ಡ ಹೊಡೆತ ಬಿತ್ತು. ಹೀಗಾಗಿ ಎರಡನೇ ದಿನ <48.65 ಕೋಟಿಗೆ ಕಲೆಕ್ಷನ್ ಇಳಿದಿತ್ತು. ನಂತರ ಮೂರನೇ ದಿನ <34.5 ಕೋಟಿ, ನಾಲ್ಕನೇ ದಿನ ₹27.15 ಕೋಟಿ ಹಾಗೂ ಐದನೇ ದಿನ ಭಾನುವಾರ (ಆ. 30) ₹23 ಕೋಟಿ ಗಳಿಸಿದೆ. ಹೀಗೆ ದಿನೇ ದಿನೆ ಚಿತ್ರದ ಗಳಿಕೆ ಇಳಿಯುತ್ತಿರುವ ಕಾರಣ, ಭಾರತದಲ್ಲಿ ಮೊದಲ ದಿನ 24,579 ಇದ್ದ "ಟಾಕ್ಸಿಕ್' ಶೋಗಳ ಸಂಖ್ಯೆ, ಐದನೇ ದಿನಕ್ಕೆ 16,241ಕ್ಕೆ ಇಳಿದಿದೆ. ಸೋಮವಾರ (ಆ. 31) ಶೋಗಳ ಸಂಖ್ಯೆಯನ್ನು ಮತ್ತಷ್ಟು ಇಳಿಸಲಾಗಿದ್ದು ಕೇವಲ 4279 ಶೋಗಳಷ್ಟೇ ಪ್ರದರ್ಶನವಾಗಿವೆ ಎನ್ನಲಾಗಿದೆ.
ಮೊದಲು ಮೈನಸ್ ನಂತರ ಪ್ಲಸ್!
"ಟಾಕ್ಸಿಕ್' ರಿಲೀಸ್ ಆದ ಮೊದಲ ದಿನದಿಂದಲೇ ನೆಗೆಟಿವ್ ಪ್ರಚಾರ ಮತ್ತು ಪೈರಸಿ ಹಾವಳಿ ಮಿತಿಮೀರಿತ್ತು. ಎರಡು ಮತ್ತು ಮೂರನೇ ದಿನ ಮುಗಿಲು ಮುಟ್ಟಿತ್ತು. ನಾಲ್ಕನೇ ದಿನದಿಂದ ಸ್ವಲ್ಪ ಮಟ್ಟಿಗೆ ಪಾಸಿಟಿವ್ ಮೌತ್ ಟು ಮೌತ್ ಪಬ್ಲಿಸಿಟಿ ಪ್ರಾರಂಭವಾಗಿದ್ದು, ಸೋಮವಾರದಿಂದ ಪ್ರತಿ ತಾಸು ಸರಾಸರಿ 8ರಿಂದ 10 ಸಾವಿರ ಮಂದಿ ಆನ್ಲೈನ್ ಮೂಲಕ ಟಿಕೆಟ್ ಬುಕ್ ಆಗುತ್ತಿವೆ. ಹೀಗಾಗಿ ವಾರದ ದಿನಗಳಲ್ಲಿ "ಟಾಕ್ಸಿಕ್' ಚೇತರಿಸಿಕೊಳ್ಳುವ ನಿರೀೆಯಿದೆ.