ಬೆಂಗಳೂರು: ಕನ್ನಡ ಬಿಗ್ಬಾಸ್ ಸೀಸನ್ 11 ರಲ್ಲಿ ಭಾಗವಹಿಸಿದ್ದ ಕಿರುತೆರೆ ನಟ ಶಿಶಿರ್ ಶಾಸ್ತ್ರಿ ಹಾಗೂ ನಟಿ ಐಶ್ವರ್ಯಾ ಸಿಂದೋಗಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಬಿಗ್ ಬಾಸ್ ಬಳಿಕ ಇಬ್ಬರು ಒಟ್ಟಾಗಿ ಸೋಷಿಯಲ್ ಮೀಡಿಯಾನಲ್ಲಿ ರೀಲ್ಸನ್ ಮಾಡಿಕೊಂಡಿದ್ದ ಈ ಜೋಡಿ, ಇಷ್ಟು ದಿನಗಳ ತಮ್ಮ ಸ್ನೇಹಕ್ಕೆ ಹೊಸ ರೂಪ ಕೊಡಲು ಮುಂದಾಗಿದ್ದು, ತಾವಿಬ್ಬರೂ ಮದುವೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.
“ಊಹೆಗಳ ಹಿಂದೆ ಒಂದು ಕಥೆಯಿತ್ತು…
ನಗುವಿನ ಹಿಂದೆ ಒಂದು ಪ್ರೀತಿಯಿತ್ತು…
ಕಮೆಂಟ್ಗಳ ಹಿಂದೆ ನಿಮ್ಮ ಕುತೂಹಲವಿತ್ತು…
ಇಂದು ಆ ಕಥೆಗೆ ಒಂದು ಸುಂದರವಾದ ಹೆಸರಿದೆ — AISHIR!
ಇಷ್ಟು ದಿನ ನಮ್ಮ ಕಥೆಯನ್ನು ನಿಮ್ಮದೇ ಕಥೆಯಂತೆ ಪ್ರೀತಿಸಿದ ಎಲ್ಲರಿಗೂ ಧನ್ಯವಾದಗಳು.
From all the speculations to a lifetime of celebrations.
Not just a rumour anymore. It’s our forever beginning. ಎಂದು ತಮ್ಮ ಇತ್ತೀಚಿನ ವಿಡಿಯೋಗೆ ಅವರು ಬರೆದುಕೊಂಡಿದ್ದಾರೆ.
ತಾವಿಬ್ಬರು ಮದುವೆ ಆಗುತ್ತಿರುವ ಸಂಗತಿಯನ್ನು ಶಿಶಿರ್ ಹಾಗೂ ಐಶ್ವರ್ಯಾ ವಿಶಿಷ್ಟವಾಗಿ ವಿಡಿಯೋ ಮಾಡುವ ಮೂಲಕ ರೀವಿಲ್ ಮಾಡಿದ್ದಾರೆ. ಜನರು ತಮ್ಮಿಬ್ಬರ ಸಂಬಂಧದ ಬಗ್ಗೆ ಮಾಡುತ್ತಿದ್ದ ಕಮೆಂಟ್ಗಳನ್ನೇ ಕೆಂಟೆಂಟ್ ಮಾಡಿಕೊಂಡು, ತಾವಿಬ್ಬರು ಆದಷ್ಟು ಬೇಗ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದೇವೆಂದು ಅವರು ತಿಳಿಸಿದ್ದಾರೆ.
ಶಿಶಿರ್ ಮತ್ತು ಐಶ್ವರ್ಯಾ ಅವರ ಹಳೆಯದೊಂದು ಸಂದರ್ಶದಲ್ಲಿ ಶಿಶಿರ್ ಶಾಸ್ತ್ರಿ, ಐಶ್ವರ್ಯಾ ತಮ್ಮ ತಂಗಿ ಎಂದು ಹೇಳಿದ್ದರು. ಆದರೆ, ಆ ಹೇಳಿಕೆಗೆ ಸ್ಪಷ್ಟನೆ ನೀಡಿರುವ ನಟ, ಆ ಸಂದರ್ಶಕಿ ತಮಗೆ ಕೇವಲ ತಪ್ಪು ಉತ್ತರಗಳನ್ನು ಮಾತ್ರ ಹೇಳಲು ಹೇಳಿದ್ದರು. ಆಗ ಅವರು ನನಗೆ ಐಶ್ವರ್ಯಾ ನಿಮಗೇನಾಗಬೇಕೆಂದು ಕೇಳಿದಕ್ಕೆ ನಾನು ತಂಗಿ ಆಗಬೇಕೆಂದು ಹೇಳಿದ್ದಾಗಿ ಸ್ಟಷ್ಟನೆ ನೀಡಿದ್ದಾರೆ.
ತಾವಿಬ್ಬರು ಮದುವೆ ಆಗುತ್ತಿದ್ದೆವೆಂದು ಹೇಳಿಕೊಂಡಿರುವ ಶಿಶಿರ್ ಹಾಗೂ ಐಶ್ವರ್ಯಾ, ಯಾವಾಗ? ಎಲ್ಲಿ? ತಾವು ಮದುವೆಯಾಗಲಿದ್ದೆವೆಂದು ತಿಳಿಸಿಲ್ಲ. ಮದುವೆ ದಿನಾಂಕದ ಯಾವಾಗ ಎಂದು ಜನ ಕೇಳ್ತಾರೆ, ಎಲ್ಲದಕ್ಕೂ ಒಂದೊಂದಾಗೇ ಉತ್ತರ ಹೇಳೋಣ, ನಿಮ್ಮ ಅಶೀರ್ ಪ್ರಯಾಣ ಇಲ್ಲಿಗೆ ಮುಗಿದಿಲ್ಲ, ಇಲ್ಲಿಂದ ಆರಂಭ ಎಂದು ತಿಳಿಸಿದ್ದಾರೆ.