ರಂಗಭೂಮಿ ಹಿನ್ನೆಲೆಯ ಸುಮುಖ "ಫಿಸಿಕ್ಸ್ ಟೀಚರ್' (2022) ಮೂಲಕ ನಾಯಕ, ನಿರ್ದೇಶಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ ಕಳೆದ ವರ್ಷ ಯೋಗರಾಜ್ ಭಟ್ ನಿರ್ದೇಶನದ "ಮನದ ಕಡಲು' ಚಿತ್ರದಲ್ಲಿ ಮಿಂಚಿದ್ದ ಅವರು ಸದ್ಯ ಮಲಯಾಳಂ ಮತ್ತು ಕನ್ನಡ ದ್ವಿಭಾಷೆಯಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಅದರ ನಡುವೆಯೇ ಪ್ರೀತಂ ಗುಬ್ಬಿ ಆ್ಯಕ್ಷನ್-ಕಟ್ ಹೇಳಲಿರುವ ಹೊಸ ಸಿನಿಮಾ ಟೀಮ್ ಸೇರಿಕೊಂಡಿದ್ದಾರೆ. "ಕೆಲ ದಿನಗಳ ಹಿಂದಷ್ಟೇ ಪ್ರೀತಂ ಸರ್ ಕರೆ ಮಾಡಿ, ಕಥೆ ಹೇಳಿದರು. ತುಂಬ ಇಷ್ಟವಾಯಿತು. ಈಗಿನ ಜನರೇಷನ್ಗೆ ಕನೆಕ್ಟ್ ಆಗುವ ಕಥೆ. ಇದು ಎಲ್ಲ ಲವ್ಸ್ಟೋರಿಗಳಂತಲ್ಲ. ಟ್ವಿಸ್ಟ್ ಮತ್ತು ರ್ಟನ್ಗಳಿವೆ' ಎನ್ನುತ್ತಾರೆ. ಪ್ರೀತಂ ಗುಬ್ಬಿ ನಿರ್ದೇಶಿಸುತ್ತಿರುವ ಈ ಚಿತ್ರದ ಮೂಲಕ ಪತ್ರಕರ್ತ ಪಿ. ಲಂಕೇಶ್ ಮೊಮ್ಮಗಳು, ನಿರ್ದೇಶಕಿ ಕವಿತಾ ಲಂಕೇಶ್ ಪುತ್ರಿ ಇಶಾ ಲಂಕೇಶ್ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ನಾಯಕ ಮತ್ತು ನಾಯಕಿಗೆ ವರ್ಕ್ಶಾಪ್ ನಡೆಯುತ್ತಿದ್ದು, ಸುಮುಖ ಕೂಡ ಪಾತ್ರಕ್ಕಾಗಿ ತಯಾರಿ ನಡೆಸಿದ್ದಾರೆ. ಸುಮುಖ, ಇಶಾ ಹೊರತುಪಡಿಸಿ ಉಳಿದ ತಾರಾಗಣ, ಶೀರ್ಷಿಕೆ, ತಂತ್ರಜ್ಞರ ಕುರಿತು ಚಿತ್ರತಂಡ ಇನ್ನಷ್ಟೇ ಮಾಹಿತಿ ನೀಡಬೇಕಿದೆ. "ಬಾನದಾರಿಯಲ್ಲಿ' (2023) ಬಳಿಕ ಪ್ರೀತಂ ಗುಬ್ಬಿ ಹೊಸ ಕಥೆಯೊಂದಿಗೆ ವಾಪಸ್ಸಾಗಿದ್ದು, ಇದೇ ವರ್ಷ ಈ ಸಿನಿಮಾ ರಿಲೀಸ್ ಆಗುವ ನಿರೀೆ ಇದೆ.
ಪೊಲಿಟಿಕಲ್ ಥ್ರಿಲ್ಲರ್ನಲ್ಲಿ ಫಿಸಿಕ್ಸ್ ಟೀಚರ್
ಚಿತ್ರದಿಂದ ಚಿತ್ರಕ್ಕೆ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿರುವ ಸುಮುಖ, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಮೂಡಿಬರುತ್ತಿರುವ ಕಥೆಯಲ್ಲೂ ಹೊಸ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. "ನಿರ್ದೇಶಕ ಕೆಕೆ ಸಂಜಯ್ ಮತ್ತು ರಾಯಲ್ ಫ್ಲೈ ಬ್ಯಾನರ್ ಇಬ್ಬರೂ ಮಲಯಾಳಂನವರು. ಬೆಂಗಳೂರಿನಲ್ಲಿ ನಡೆಯುವ ಪೊಲಿಟಿಕಲ್ ಥ್ರಿಲ್ಲರ್ ಕಥೆಯಿದು. "ಮನದ ಕಡಲು' ಸಿನಿಮಾ ನೋಡಿ ನನ್ನನ್ನು ಸಂಪರ್ಕಿಸಿದರು. ದೇಹ ಹುರಿಗೊಳಿಸಿಕೊಳ್ಳಲು ತಿಳಿಸಿದರು. ಪ್ರತಿದಿನ 45 ನಿಮಿಷ ವರ್ಕೌಟ್ ಮಾಡುತ್ತಿದ್ದವನು ಒಂದೂವರೆ ತಾಸು ಜಿಮ್ನಲ್ಲಿ ಬೆವರಿಳಿಸತೊಡಗಿದೆ. ಎರಡು ಪಟ್ಟು ವರ್ಕೌಟ್ ಮಾತ್ರವಲ್ಲ, ಎರಡು ಪಟ್ಟು ಊಟವೂ ಹೆಚ್ಚು ಸೇವಿಸಿ, ತೂಕ ಹೆಚ್ಚಿಸಿಕೊಂಡೆ. ಇನ್ನು ಕೆಲವೇ ದಿನಗಳಲ್ಲಿ ಪ್ರೀತಂ ಸರ್ ಸಿನಿಮಾ ಶೂಟಿಂಗ್ ಪ್ರಾರಂಭವಾಗಲಿದೆ. ಅದಕ್ಕೆ ತೂಕ ಇಳಿಸಿಕೊಳ್ಳುತ್ತಿದ್ದೇನೆ. ಇದರ ಚಿತ್ರೀಕರಣದ ಬಳಿಕ ಮಲಯಾಳಂ ಸಿನಿಮಾಗಾಗಿ ಮತ್ತೆ ತೂಕ ಹೆಚ್ಚಿಸಿಕೊಳ್ಳಬೇಕಿದೆ. ಹೀಗೆ ಎರಡೇ ತಿಂಗಳಲ್ಲಿ ತೂಕ ಇಳಿಸಿಕೊಳ್ಳುವ, ಹೆಚ್ಚಿಸಿಕೊಳ್ಳುವ ಸವಾಲಿದೆ. ಆದರೆ, ಅವಕಾಶ ಮಿಸ್ ಮಾಡಿಕೊಳ್ಳಲು ಇಷ್ಟವಿಲ್ಲ. ಹೀಗಾಗಿ ಎರ್ಟ್ ಹಾಕುತ್ತಿದ್ದೇನೆ' ಎಂದು ಮಾಹಿತಿ ನೀಡುತ್ತಾರೆ.