ಸಾನ್ವಿ ಸುದೀಪ್ 
ಸ್ಯಾಂಡಲ್‌ವುಡ್

ಸಾನ್ವಿ ‘ಸುಲೋಚನಾ’: ತಮಿಳಿನ ‘ಸಿಗ್ಮಾ’ ಚಿತ್ರದ ಹಾಡಿಗೆ ಧ್ವನಿಯಾದ ಕಿಚ್ಚ ಸುದೀಪ್ ಪುತ್ರಿ sanvi sudeep

ಸಾನ್ವಿ ಕೂಡ ಚಿತ್ರರಂಗದಲ್ಲಿ ವಿಭಿನ್ನ ಹಾದಿ ತುಳಿದಿದ್ದು, ಗಾಯನ ಕ್ಷೇತ್ರದಲ್ಲಿ ಛಾಪು ಮೂಡಿಸುತ್ತಿದ್ದಾರೆ. ಈಗಾಗಲೇ ಕೆಲ ಅಲ್ಬಂ ಸಾಂಗ್‌ಗಳನ್ನು ಹಾಡಿರುವ ಅವರು ಕಳೆದ ವರ್ಷ ತಂದೆಯ ‘ಮಾರ್ಕ್’ ಚಿತ್ರದ ‘ಮಸ್ತ್ ಮಲೈಕಾ’ ಹಾಡಿಗೆ ಧ್ವನಿಯಾಗಿದ್ದರು.

ನಟ ಸುದೀಪ್ ಕುಟುಂಬ ಚಿತ್ರರಂಗದಲ್ಲಿ ಸಕ್ರಿಯವಾಗಿದೆ. ಪತ್ನಿ ಪ್ರಿಯಾ ಸುದೀಪ್ ‘ಸುಪ್ರಿಯಾನ್ವಿ ಪ್ರೊಡಕ್ಷನ್’ ಮೂಲಕ ನಿರ್ಮಾಪಕಿಯಾಗಿದ್ದರೆ, ಅಳಿಯ ಸಂಚಿತ್ ಸಂಜೀವ್ ಬೆಳ್ಳಿತೆರೆಯಲ್ಲಿ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಆ ಮಧ್ಯೆಯೇ ಪುತ್ರಿ ಸಾನ್ವಿ ಕೂಡ ಚಿತ್ರರಂಗದಲ್ಲಿ ವಿಭಿನ್ನ ಹಾದಿ ತುಳಿದಿದ್ದು, ಗಾಯನ ಕ್ಷೇತ್ರದಲ್ಲಿ ಛಾಪು ಮೂಡಿಸುತ್ತಿದ್ದಾರೆ. ಈಗಾಗಲೇ ಕೆಲ ಅಲ್ಬಂ ಸಾಂಗ್‌ಗಳನ್ನು ಹಾಡಿರುವ ಅವರು ಕಳೆದ ವರ್ಷ ತಂದೆಯ ‘ಮಾರ್ಕ್’ ಚಿತ್ರದ ‘ಮಸ್ತ್ ಮಲೈಕಾ’ ಹಾಡಿಗೆ ಧ್ವನಿಯಾಗಿದ್ದರು. ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದಲ್ಲದೇ, ಸಾನ್ವಿ ಗಾಯನಕ್ಕೂ ಮೆಚ್ಚುಗೆ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೇ ಅವರು ಮತ್ತೆ ಮೈಕ್ ಹಿಡಿದಿದ್ದು, ತಮಿಳಿನ ‘ಸಿಗ್ಮಾ’ ಚಿತ್ರದ ‘ಸುಲೋಚನಾ’ ಹಾಡಿಗೆ ಧ್ವನಿಯಾಗುವ ಮೂಲಕ ಕಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ತಮಿಳುನಾಡು ಸಿಎಂ ಜೋಸೆಫ್​ ವಿಜಯ್ ಪುತ್ರ ಜೇಸನ್ ಸಂಜಯ್ ಚೊಚ್ಚಲ ನಿರ್ದೇಶನದ ‘ಸಿಗ್ಮಾ’ ಇದೇ ಅ. 2ಕ್ಕೆ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಧ್ವನಿ ಸುರುಳಿ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ‘ಸುಲೋಚನಾ’ ಸಾಂಗ್ ವೈರಲ್ ಆಗುತ್ತಿದೆ. ಎಸ್.ಎಸ್.ಥಮನ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಸಾನ್ವಿ ಸುದೀಪ್ ಜತೆಗೆ ಸೂಪರ್ ಸುಬು ಧ್ವನಿಯಾಗಿದ್ದಾರೆ. ಇನ್ನು ‘ಸಿಗ್ಮಾ’ ಚಿತ್ರದಲ್ಲಿ ಸಂದೀಪ್ ಕಿಶನ್ ಮತ್ತು ರಿಯಾ ಅಬ್ದುಲ್ಲಾ ಮುಖ್ಯಭೂಮಿಕೆಯಲ್ಲಿದ್ದಾರೆ. -ಏಜೆನ್ಸೀಸ್