karikaada - ಗಿಲ್ಲಿ ವೆಂಕಟೇಶ್ ಆ್ಯಕ್ಷನ್-ಕಟ್ ಹೇಳುತ್ತಿರುವ ಪ್ಯಾನ್ ಇಂಡಿಯಾ ಮ್ಯೂಸಿಕಲ್ ಅಡ್ವೆಂಚರ್ ಸಿನಿಮಾ ಕರಿಕಾಡ. ಇದೇ ಫೆ. 6ರಂದು ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಮೂಡಿಬರಲಿದ್ದು, ಇತ್ತೀಚೆಗಷ್ಟೆ ಕಬ್ಬಿನ ಜಲ್ಲೆ ಎಂದು ಸಾಗುವ ರೊಮ್ಯಾಂಟಿಕ್ ಸಾಂಗ್ ಬಿಡುಗಡೆ ಮಾಡಲಾಗಿದೆ.
ಕಾಡ ನಟರಾಜ್ ನಾಯಕನಾಗಿ ಅಭಿನಯಿಸಿರುವ ಈ ಸಿನಿಮಾದಲ್ಲಿ ಅವರಿಗೆ ತುಳು ನಟಿ ನಿರೀಕ್ಷಾ ಶೆಟ್ಟಿ ನಾಯಕಿಯಾಗಿದ್ದಾರೆ. ಉಳಿದಂತೆ ಬಲರಾಜವಾಡಿ, ಯಶ್ ಶೆಟ್ಟಿ, ಮಂಜು ಸ್ವಾಮಿ, ಗೋವಿಂದ ಗೌಡ, ದಿವಾಕರ್ , ಕಾಮಿಡಿ ಕಿಲಾಡಿ ಸೂರ್ಯ, ದಿ.ರಾಕೇಶ್ ಪೂಜಾರಿ, ವಿಜಯ್ ಚಂಡೂರು, ಚಂದ್ರಪ್ರಭ, ಕರಿಸುಬ್ಬು, ಗಿರಿ, ಮಾಸ್ಟರ್ ಆರ್ಯನ್, ಬಾಲನಟಿ ರಿದ್ಧಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹೊಸಬರೇ ಸೇರಿ ಮಾಡಿರುವ ಈ ಚಿತ್ರದ ಕಂಟೆಂಟ್ ನೋಡಿ ಮೆಚ್ಚಿರುವ ಪರಭಾಷಾ ವಿತರಕರು ತಾವೇ ಬಿಡುಗಡೆ ಮಾಡಲು ಮುಂದಾಗಿದ್ದು, ಹಿಂದಿಯಲ್ಲಿ ಬಾಲಿವುಡ್ ಫಿಲಂ ಟ್ರೇಡರ್ಸ್ ವಿತರಣಾ ಹಕ್ಕುಗಳನ್ನು ಪಡೆದಿದೆ.
ಮುಂದಿನ ಪ್ರೇಮಿಗಳ ದಿನಕ್ಕೆ ಒಂದು ವಾರ ಮುನ್ನವೇ ಅರ್ಥಾತ್ ಫೆ. 6ರಂದು ಕರಿಕಾಡ ವಿಶ್ವಾದ್ಯಂತ 1200ಕ್ಕೂ ಹೆಚ್ಚು ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ರಿಲೀಸ್ ಆಗಲಿದೆ.