ಸ್ಯಾಂಡಲ್‌ವುಡ್

ಲಂಡನ್​ ಬೀದಿಯಲ್ಲಿ ಕಾಂತಾರದ 'ಕನಕವತಿ'! Rukmini Vasanth

Rukmini Vasanth: ರುಕ್ಮಿಣಿ ವಸಂತ್ ಕನ್ನಡ ಚಿತ್ರರಂಗದ ಪ್ರತಿಭಾವಂತ ಹಾಗೂ ಜನಪ್ರಿಯ ನಟಿಯಾಗಿದ್ದು, ಲಂಡನ್‌ನ ಪ್ರತಿಷ್ಠಿತ ರಾಯಲ್ ಅಕಾಡೆಮಿ ಆಫ್ ಡ್ರಾಮಾಟಿಕ್ ಆರ್ಟ್ಸ್ (RADA) ಸಂಸ್ಥೆಯಲ್ಲಿ ನಟನಾ ಪದವಿ ಪಡೆದಿರುವ ಇವರು ಶಾಸ್ತ್ರೀಯ ನೃತ್ಯಗಾರ್ತಿಯೂ ಹೌದು. 2019ರಲ್ಲಿ ತೆರೆಕಂಡ ಬೀರಬಲ್ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ರುಕ್ಮಿಣಿ, 2023ರ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ 'ಪ್ರಿಯಾ' ಪಾತ್ರದ ಅದ್ಭುತ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಹಾಗೂ ಸೈಮಾ (SIIMA) ವಿಮರ್ಶಕರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು. ನಂತರ 'ಬಾನ ದಾರಿಯಲ್ಲಿ', 'ಬಘೀರ', 'ಭೈರತಿ ರಣಗಲ್' ಹಾಗೂ ಬ್ಲಾಕ್‌ಬಸ್ಟರ್ 'ಕಾಂತಾರ: ಚಾಪ್ಟರ್ 1' ಚಿತ್ರಗಳ ಮೂಲಕ ಭಾರಿ ಜನಪ್ರಿಯತೆ ಗಳಿಸಿದ್ದಾರೆ.

ವಿಜಯವಾಣಿ ಸುದ್ದಿ ಜಾಲ