ಪ್ರೇಮದ ಊರಲಿ ಚಿತ್ರತಂಡ 
ಸ್ಯಾಂಡಲ್‌ವುಡ್

‘ಪ್ರೇಮದ ಊರಲಿ’ ಗೆಲುವಿನ ಖುಷಿಯಲಿ: ನಾಡಿನ ಪ್ರೇಕ್ಷಕರಿಗೆ ವಿಜಯೋತ್ಸವ ಅರ್ಪಿಸಿದ ಚಿತ್ರತಂಡ

ಸಣ್ಣ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಚಿತ್ರವು ಈಗಾಗಲೇ 15 ಕೋಟಿಗೂ ಅಧಿಕ ಗಳಿಕೆ ಮಾಡಿದೆ ಎಂದು ಬಾಕ್ಸಾಫೀಸ್ ಮೂಲಗಳು ವರದಿ ಮಾಡಿವೆ. ಕಲಾವಿದರಾದ ಶ್ರೀರಾಮ್, ರಂಗಾಯಣ ರಘು, ತಪಸ್ವಿನಿ ಪೂಣಚ್ಚ, ರಮಿಕಾ ಶಿವು ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಯಶಸ್ಸಿನ ಬೆನ್ನಲ್ಲೇ ಚಿತ್ರತಂಡವು ನಾಡಿನ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿತು.

ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮನೋಜ್ ಕುಮಾರ್ ಆ್ಯಕ್ಷನ್-ಕಟ್ ಹೇಳಿರುವ ‘ಪ್ರೇಮದ ಊರಲಿ’ ಚಿತ್ರಕ್ಕೆ ದೊಡ್ಡಮಟ್ಟದ ಸಕ್ಸಸ್ ದೊರೆತಿದೆ. ಬಾಕ್ಸಾಫೀಸ್ ಕಲೆಕ್ಷನ್ ಮತ್ತು ಆನ್‌ಲೈನ್ ಟಿಕೆಟ್ ಮಾರಾಟದಲ್ಲೂ ಸಿನಿಮಾ ದಾಖಲೆ ಬರೆಯುತ್ತಿದೆ. ಕಳೆದ ಸೆ. 25ರಂದು ರಿಲೀಸ್ ಆಗಿತ್ತು. ಈ ಚಿತ್ರ ತೆಲುಗಿಗೆ ‘ಪ್ರೇಮನೆ ಊರಿಲೊ’ ಎಂಬ ಟೈಟಲ್‌ನಲ್ಲಿ ಡಬ್ ಆಗಿ ಇದೇ 2ರಂದು ರಿಲೀಸ್ ಆಗಿದೆ. ಇನ್ನು ಸಣ್ಣ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಚಿತ್ರವು ಈಗಾಗಲೇ 15 ಕೋಟಿಗೂ ಅಧಿಕ ಗಳಿಕೆ ಮಾಡಿದೆ ಎಂದು ಬಾಕ್ಸಾಫೀಸ್ ಮೂಲಗಳು ವರದಿ ಮಾಡಿವೆ. ಕಲಾವಿದರಾದ ಶ್ರೀರಾಮ್, ರಂಗಾಯಣ ರಘು, ತಪಸ್ವಿನಿ ಪೂಣಚ್ಚ, ರಮಿಕಾ ಶಿವು ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಯಶಸ್ಸಿನ ಬೆನ್ನಲ್ಲೇ ಚಿತ್ರತಂಡವು ನಾಡಿನ ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸಿತು. ನಟ ಶ್ರೀರಾಮ್ ಮಾತನಾಡಿ, ‘ಈ ಸ್ಕ್ರಿಪ್ಟ್ ಮತ್ತು ತಂಡದ ಕೆಲಸಕ್ಕೆ ಮೂರು ವರ್ಷ ಸಮಯ ನೀಡಬೇಕಿತ್ತು. ಅದನ್ನೇ ಕೆಲವರು ಹಂಗಿಸಿದ್ದರು. ಆ ಮೂರು ವರ್ಷದ ಶ್ರಮಕ್ಕೆ ಇಂದು ಉತ್ತರ ದೊರೆತಿದೆ. ಇದು ನಿರ್ದೇಶಕರ 18 ವರ್ಷಗಳ ತಪಸ್ಸಿನ ಲ. ಕೆಲಸಗಳನ್ನು ನಂಬಿದಾಗ ಗೆಲುವು ನಮ್ಮದಾಗುತ್ತದೆ. ಆನ್‌ಲೈನ್ ಬುಕಿಂಗ್ ನೋಡಿದಾಗ ಕನಸೋ, ನನಸೋ ಅನಿಸುತ್ತದೆ. ಆ ಕನಸು, ನನಸಾಗಿರುವುದು ಪ್ರೇಕಕ್ಷರಿಂದ ಹಾಗಾಗಿ, ಈ ಗೆಲುವು ನಾಡಿನ ಜನತೆಗೆ ಅರ್ಪಣೆ’ ಎಂದರು. ರಂಗಾಯಣ ರಘು, ‘ಕೆಲ ವರ್ಷಗಳ ಹಿಂದೆ ಜನತೆ ಕತ್ತಲಿನ ಸಿನಿಮಾ ಗೆಲ್ಲಿಸಿದ್ದರು, ಇದೀಗ ಬೆಳಕಿನ ಚಿತ್ರವನ್ನು ಗೆಲ್ಲಿಸಿದ್ದಾರೆ. ಹೊಸಬರ, ಸಣ್ಣ ಬಜೆಟ್‌ಗಳಿಗೆ ‘ಪ್ರೇಮದ ಊರಲಿ’ ದೊಡ್ಡ ಮಾದರಿಯಾಗಲಿದೆ’ ಎಂದು ಖುಷಿಹಂಚಿಕೊಂಡರು.

18 ವರ್ಷಗಳ ಶ್ರಮ

ಗೆಲುವಿನ ಸಂಭ್ರಮದಲ್ಲಿ ನಿರ್ದೇಶಕ ಮನೋಜ್ ಕುಮಾರ್ ಭಾವುಕರಾಗಿ, ‘18 ವರ್ಷಗಳ ಹಿಂದೆ ಸಿನಿಮಾ ಕನಸು ಕಟ್ಟಿಕೊಂಡು ಬಂದಿದ್ದ ನಾನು ಮೊದಲು ಸಂತೋಷ್ ಥಿಯೇಟರ್‌ನಲ್ಲಿ ಟಾರ್ಚ್‌ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದೆ. ಇದೀಗ ಅದರ ಪಕ್ಕದ ‘ಊರ್ವಶಿ’ಚಿತ್ರಮಂದಿರದಲ್ಲಿ ನನ್ನ ಸಿನಿಮಾ ಹೌಸ್‌ುಲ್ ಪ್ರದರ್ಶನ ಕಾಣುತ್ತಿದೆ. ಇಡೀ ರಾಜ್ಯ ‘ಪ್ರೇಮದ ಊರಲಿ’ಯನ್ನು ಸಂಭ್ರಮಿಸುತ್ತಿದೆ. ಮೊದಲು ಶ್ರೀರಾಮ್ ಮೂಲಕ ಈ ಕಥೆಯನ್ನು ತೆಗೆದುಕೊಂಡು ರಂಗಾಯಣ ರಘು ಸರ್ ಅವರತ್ರ ಹೋದಾಗ, ಸ್ಕ್ರಿಪ್ಟ್ ಓದಿ, ಮೊದಲು ಸಿನಿಮಾ ಮಾಡಿ ಎಂದು ಆತ್ಮವಿಶ್ವಾಸ ತುಂಬಿದರು. ಅವರ ಮಾತನ್ನು ಇಂದು ಸಂಪೂರ್ಣವಾಗಿ ಉಳಿಸಿಕೊಂಡಿದ್ದೇನೆ’ ಎಂದು ಖುಷಿಪಟ್ಟರು.