- ‘ಕರಾವಳಿ’ ಮೂಲಕ ಸ್ಯಾಂಡಲ್‌ವುಡ್‌ಗೆ ವಾಪಸ್ಸಾದ ಸುಶ್ಮಿತಾ ಭಟ್
- ಭೂಮಿ ಎಂಬ ಪಾತ್ರದಲ್ಲಿ ಮಿಂಚಲಿದ್ದಾರೆ ನಟಿ
- ಪಾತ್ರ ಸಣ್ಣಾದಾದರೂ, ಮಹತ್ವದವಿದೆ ಎಂದ ನಟಿ
SUSHMITHA BHAT ಬೆಂಗಳೂರು: ಕನ್ನಡದ ‘ಕಾವ್ಯಾಂಜಲಿ’ ಧಾರಾವಾಹಿ ಮೂಲಕ ಬಣ್ಣದ ಬದುಕಿಗೆ ಬಂದ ಸುಶ್ಮಿತಾ ಭಟ್ ಬಳಿಕ ‘ಚೌಚೌ ಬಾತ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸ್ಯಾಂಡಲ್‌ವುಡ್‌ನಲ್ಲಿ ಕಣ್ಣುಬಿಡುವ ಮುನ್ನವೇ ಮಾಲಿವುಡ್, ಕಾಲಿವುಡ್‌ಗೆ ಜಂಪ್ ಆದ ಅವರು ಮಮ್ಮೂಟ್ಟಿ ನಟನೆಯ ‘ಡೊಮಿನಿಕ್ ಆ್ಯಂಡ್ ಲೇಡಿಸ್ ಪರ್ಸ್’, ಪ್ರಣವ್ ಮೋಹನ್‌ಲಾಲ್ ಜತೆ ‘ಡೈಸ್ ಇರೇ’ ಹಾಗೂ ತಮಿಳಿನ ‘ಲವ್ ಮ್ಯಾರೇಜ್’ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇಂತಹ ಅಪ್ಪಟ ದೇಸಿ ಪ್ರತಿಭೆ ಇದೀಗ ಗುರುದತ್ ಗಾಣಿಗ ನಿರ್ದೇಶಿಸುತ್ತಿರುವ ‘ಕರಾವಳಿ’ ಮೂಲಕ ಸ್ಯಾಂಡಲ್‌ವುಡ್‌ಗೆ ವಾಪಸ್ಸಾಗುತ್ತಿದ್ದಾರೆ. ಇಲ್ಲಿ ರಾಜ್ ಬಿ. ಶೆಟ್ಟಿಗೆ ಅವರು ಜೋಡಿಯಾಗಿದ್ದು, ‘ಭೂಮಿ’ ಎಂಬ ಪಾತ್ರದಲ್ಲಿದ್ದಾರೆ. ನಟಿಯ ಸ್ಟ್ ಲುಕ್ ರಿಲೀಸ್ ಮಾಡಲಾಗಿದೆ.
ಸುಶ್ಮಿತಾ, ‘‘ಕರಾವಳಿ’ ಕಾಸ್ಟಿಂಗ್ ತಂಡ ‘ಭೂಮಿ’ ಪಾತ್ರಕ್ಕಾಗಿ ಹುಡುಕಾಟ ನಡೆಸುತ್ತಿತ್ತಂತೆ. ನೀವು ಚಿತ್ರತಂಡದ ಭಾಗವಾಗುತ್ತೀರಾ ಅಂತ ನನಗೆ ಸಂದೇಶ ಬಂತು. ರಾಜ್ ಬಿ. ಶೆಟ್ಟಿ ಸರ್ ಜತೆ ನಟಿಸುವುದು ಹೆಮ್ಮೆಯ ವಿಷಯ ಅಂತ ಪಾತ್ರ ಒಪ್ಪಿಕೊಂಡೆ. ಹೆಸರು ಹೇಳುವಂತೆಯೇ ‘ಭೂಮಿ’ ತೂಕದಷ್ಟು ಸಹನೆ, ತಾಳ್ಮೆ ಇರುವಂತಹ ಪಾತ್ರ ಅದು. ಸಣ್ಣದಾದರೂ ಪಾತ್ರಕ್ಕೆ ಮಹತ್ವವಿದೆ. ಫ್ಲಾಶ್‌ಬ್ಯಾಕ್‌ನಲ್ಲಿ ಸಾಗುವ ಪಾತ್ರ. ರಾಜ್ ಸರ್ ಈಗಾಗಲೇ ಗುರುತಿಸಿಕೊಂಡಿರುವ ನಟ. ಅವರ ಮಾತು, ಆಲೋಚನೆ ತುಂಬಾ ಸರಳ. ಅವರ ಜತೆ ಕೆಲಸ ಮಾಡಿದ್ದು ಖುಷಿ ನೀಡಿದೆ. ‘ಭೂಮಿ’ ಕಾಸ್ಟ್ಯೂಮ್ ಮೂಲಕವೇ ಗಮನ ಸೆಳೆಯುತ್ತಾಳೆ. ಕೋಣಗಳ ಜತೆಗೆ ಶೂಟಿಂಗ್ ಮಾಡುವಾಗ ಸ್ವಲ್ಪ ಭಯ ಅನಿಸುತ್ತಿತ್ತು. ಆದರೆ, ತಂಡ ಯಾವುದಕ್ಕೂ ರಾಜೀ ಆಗದೆ ಎಲ್ಲವನ್ನೂ ನೈಜವಾಗಿ ತೋರಿಸಿದೆ’ ಎಂದು ಚಿತ್ರದ ಜರ್ನಿ ಬಗ್ಗೆ ಹಂಚಿಕೊಂಡರು.
ಮಾಲಿವುಡ್‌ನಲ್ಲಿ ಬಿಜಿ: ಕನ್ನಡದ ಹುಡುಗಿ ಸುಶ್ಮಿತಾ ಭಟ್ ಸದ್ಯ ಮಲಯಾಳಂನಲ್ಲಿ ಬಿಜಿಯಾಗಿದ್ದಾರೆ. ‘ಡೊಮಿನಿಕ್ ಆ್ಯಂಡ್ ಲೇಡಿಸ್ ಪರ್ಸ್’, ‘ಡೈಸ್ ಇರೇ’ ಬಳಿಕ ಪರಭಾಷೆಯಲ್ಲಿ ಅವಕಾಶ ಹೆಚ್ಚುತ್ತಿವೆ ಎನ್ನುವ ಅವರು, ‘ನನಗೆ ಮೊದಲು ಮಲಯಾಳಂ ಭಾಷೆ ಕಷ್ಟ ಅನಿಸುತ್ತಿತ್ತು. ಆದರೆ, ಅಲ್ಲಿನ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆಗಳು ಬಂದಿವೆ. ಮಮ್ಮೂಟ್ಟಿ, ಪ್ರಣವ್ ಮೋಹಲ್ ಲಾಲ್ ಜತೆ ಈಗಾಗಲೇ ನಟಿಸಿದ್ದು, ಅವರ ಜತೆ ನನ್ನ ಹೆಸರು ಸೇರಿಸಿ ಮಾತನಾಡಿದಾಗ ಖುಷಿ ಆಗುತ್ತಿತ್ತು. ಮುಮ್ಮೂಟ್ಟಿ ಸರ್ ನನ್ನ ನಟನೆ ಮತ್ತು ಪಾತ್ರದ ತಯಾರಿ ಬಗ್ಗೆ ಮೆಚ್ಚುಗೆ ಮಾತನಾಡಿದ್ದರು. ಅದು ನಿಜಕ್ಕೂ ಮರೆಯಲಾರದ ಘಳಿಗೆ’ ಎನ್ನುತ್ತಾರೆ. ಸುಶ್ಮಿತಾ ಸದ್ಯ ತೆಲುಗು ಚಿತ್ರವೊಂದರಲ್ಲಿ ಬಿಜಿಯಾಗಿದ್ದು, ಕನ್ನಡದಲ್ಲೂ ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.