ನಟಿಯ ಸಹೋದರಿ ದೂರಿನ ಅನ್ವಯ ಅರೆಸ್ಟ್​ ಆದ ರಾಘವೇಂದ್ರ (ಬಲ) 
ಸ್ಯಾಂಡಲ್‌ವುಡ್

ನಟಿಯ ಸಹೋದರಿ ಮೇಲೆ ರೇಪ್ ಆರೋಪ: ಮದುವೆ ಹೆಸರಿನಲ್ಲಿ ನಂಬಿಸಿ ಕೃತ್ಯ ಎಸಗಿದ ದೂರು ಬೆನ್ನಲ್ಲೇ ವ್ಯಕ್ತಿ ಅರೆಸ್ಟ್​

ಪ್ರಮುಖ ಮುಖ್ಯಾಂಶಗಳು

  • ಕನ್ನಡ ಚಿತ್ರನಟಿಯ ಸಹೋದರಿಯನ್ನು ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರ ಎಸಗಿದ ಆರೋಪ
  • ದೂರಿನ ಅನ್ವಯ ರಾಘವೇಂದ್ರ ಎಂಬಾತನನ್ನು ಬಂಧಿಸಿದ ಚಂದ್ರಲೇಔಟ್​ ಪೊಲೀಸರು
  • ಕ್ರೆಡಿಟ್​ ಕಾರ್ಡ್​ ಬಳಸಿ ಸಾಲ ಪಡೆದಿದ್ದಲ್ಲದೇ, ಬ್ಲ್ಯಾಕ್​ಮೇಲ್​ ಮಾಡಿದ್ದಾಗಿ ಆರೋಪ
ಬೆಂಗಳೂರು: ಕನ್ನಡ ಚಿತ್ರನಟಿಯ ಸಹೋದರಿಯನ್ನು ಮದುವೆಯಾಗುವುದಾಗಿ ನಂಬಿಸಿ, ಅತ್ಯಾಚಾರ ಎಸಗಿದ ಆರೋಪ ಹಾಗೂ ದೂರಿನ ಅನ್ವಯ ಇದೀಗ ರಾಘವೇಂದ್ರ ಎಂಬಾತನನ್ನು ಚಂದ್ರಲೇಔಟ್​ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯಿಂದಲೂ ಪ್ರತಿ ದೂರು!

ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ, ತನ್ನ ಇಚ್ಛೆಯ ವಿರುದ್ಧವಾಗಿ ದೈಹಿಕ ಸಂಪರ್ಕ ನಡೆಸಿದ್ದಾನೆ ಮತ್ತು ಕ್ರೆಡಿಟ್​ ಕಾರ್ಡ್​ ಬಳಸಿ ಸಾಲ ಕೂಡ ಪಡೆದಿದ್ದಾನೆ ಎಂದು ನಟಿಯ ಸಹೋದರಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಯಿಂದಲೂ ತಲಘಟ್ಟಪುರ ಠಾಣೆಯಲ್ಲಿ ಪ್ರತಿದೂರು, ಎನ್‌ಸಿಆರ್ ದಾಖಲಾಗಿದೆ. ನಟಿ ಹಾಗೂ ಆಕೆಯ ಸಹೋದರಿ, ನನ್ನ ಹಾಗೂ ನನ್ನ ತಾಯಿಗೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾರೆ.

ಯುವತಿ ಕೊಟ್ಟ ದೂರಿನಲ್ಲಿ ಏನಿದೆ?

ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಟಿಯ ಸಹೋದರಿ ಮತ್ತು ರಾಘವೇಂದ್ರ ನಡುವೆ ಸ್ನೇಹ ಬೆಳೆದು, ಅದು ವಿವಾಹ ಹಂತಕ್ಕೆ ಹೋಗಿತ್ತು. ಈ ವೇಳೆ, ತನ್ನನ್ನು ಮದುವೆಯಾಗುವುದಾಗಿ ರಾಘವೇಂದ್ರ ನಂಬಿಸಿ, ಕಡೆಗೆ ಇಚ್ಛೆಯ ವಿರುದ್ಧವಾಗಿ ದೈಹಿಕ ಸಂಪರ್ಕ ಹೊಂದಿದ್ದಾನೆ ಎಂದು ಯುವತಿ ಕೊಟ್ಟ ದೂರಿನಲ್ಲಿ ಉಲ್ಲೇಖವಾಗಿದೆ. ಪ್ರಸ್ತುತ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆಯನ್ನು ಕೈಗೊಂಡಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).