Kannada actor Divya Suresh harassment case 
ಸ್ಯಾಂಡಲ್‌ವುಡ್

ತಡರಾತ್ರಿ ದಿವ್ಯಾ ಸುರೇಶ್​ ಮುಂದೆ ವ್ಯಕ್ತಿಯ ಅಸಭ್ಯ ವರ್ತನೆ; ಸುರಕ್ಷತೆ ಬಗ್ಗೆ ಪ್ರಶ್ನಿಸಿದ ನಟಿ..Divya Suresh

Kannada actor Divya Suresh harassment case: ನಟಿ ಹಾಗೂ ಬಿಗ್​ಬಾಸ್​ ಕನ್ನಡ 8ರ ಮಾಜಿ ಸ್ಪರ್ಧಿ ದಿವ್ಯಾ ಸುರೇಶ್​ ಅವರಿಗೆ ಬೆಂಗಳೂರಿನ ಪ್ರದೇಶವೊಂದರಲ್ಲಾದ ಕಿರುಕುಳ ಹಾಗೂ ಅಸಭ್ಯ ವರ್ತನೆ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ತಪ್ಪಿತಸ್ಥನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಸದ್ಯ ಈ ಘಟನೆಯು ಸುರಕ್ಷತೆ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

ನಡೆದಿದ್ದದೇನು

ನಟಿ ದಿವ್ಯಾ ಸುರೇಶ್​ ಅವರ ಪೋಸ್ಟ್​ನಲ್ಲಿ ಇರುವಂತೆ, ಅವರು ಮತ್ತು ಕಸಿನ್​​ ಭಾನುವಾರ ತಡರಾತ್ರಿ ಸುಮಾರು 11.30ರ ವೇಳೆಗೆ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿನತ್ತ ಬಂದು ಗಮ್ಯಸ್ಥಾನಕ್ಕೆ ಹೊರಟಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಇಬ್ಬರನ್ನು ಹಿಂಬಾಲಿಸಿದ್ದಾನೆ. ಅಷ್ಟೇ ಅಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ಖಾಸಗಿ ಅಂಗಾಗವನ್ನು ಮುಟ್ಟಿಕೊಳ್ಳುತ್ತಿದ್ದ ಎನ್ನುವುದಾಗಿ ದಿವ್ಯಾ ಸುರೇಶ್ ಬರೆದುಕೊಂಡಿದ್ದಾರೆ.
ನಟಿ ದಿವ್ಯಾ ಸುರೇಶ್ ಪೋಸ್ಟ್

ಇದನ್ನು ಗಮನಿಸಿದ ನಟಿ ಮತ್ತು ಅವರ ಸಂಬಂಧಿ ತಕ್ಷಣವೇ ಆ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡು ಬೈದಾಡಿ ವಿಡಿಯೋ ಚಿತ್ರೀಕರಿಸಿದ್ದಾರೆ. ಇಷ್ಟಾಗಿಯೂ ನಿಲ್ಲಿಸದ ಆತ ತನ್ನ ಅದೇ ಅಸಭ್ಯವರ್ತನೆಯನ್ನು ಮುಂದುವರೆಸಿದ್ದ. ಈ ದೃಶ್ಯವೂ ವಿಡಿಯೋದಲ್ಲಿ ಸೆರೆಯಾಗಿದೆ

ವಿಡಿಯೋದಲ್ಲಿ ಏನಿದೆ?

ವ್ಯಕ್ತಿಯ ವಿಡಿಯೋ ಚಿತ್ರೀಕರಿಸಿರುವ ದಿವ್ಯಾ ಸುರೇಶ್​ ಅವರು ಪೊಲೀಸರಿಗೆ ಕರೆ ಮಾಡುತ್ತೇವೆ ಎಂದರೂ ಆತ ಕೈ ಎಲ್ಲಿ ಹಿಡಿದು ನಮ್ಮ ಮುಂದೆ ನಿಂತಿದ್ದಾನೆ ನೋಡಿ. ಆತ ನಮ್ಮನ್ನು ಫಾಲೋ ಮಾಡಿ ಇಲ್ಲಿಯವರೆಗೂ ಬಂದಿದ್ದಾನೆ, ಬೈಕ್​ ಸವಾರನೊಬ್ಬ ನಮ್ಮ ಪರಿಸ್ಥಿತಿ ಗಮನಿಸಿ ಕಿಡಿಕಾರಿದಾಗ ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ ಎಂದು ಹೇಳಿದ್ದಾರೆ.

ದಿವ್ಯಾ ಸುರೇಶ್ ಹೇಳಿದ್ದೇನು?

ರಸ್ತೆಯಲ್ಲಿ ರಾತ್ರಿ ಸಮಯ ಓಡಾಡುವ ಮಹಿಳೆಯರಿಗೆ ಇಂತಹ ಘಟನೆ ಮುಂದೆದೂ ಸಂಭವಿಸಬಾರದು. ಮಹಿಳೆಯರ ಸುರಕ್ಷತೆ ಬಗ್ಗೆ ಭರವಸೆ ನೀಡಲಾಗುತ್ತದೆ. ಆದರೆ, ಎಲ್ಲಿದೆ ಸುರಕ್ಷತೆ ಎಂದು ನಟಿ ದಿವ್ಯಾ ಸುರೇಶ್​​ ಪ್ರಶ್ನಿಸಿದ್ದಾರೆ.

ಯಾರು ಈ ದಿವ್ಯಾ ಸುರೇಶ್​

2017ರಲ್ಲಿ ಮಿಸ್​ ಇಂಡಿಯಾ ಸೌತ್​​ ಕಿರೀಟ ಪಡೆದುಕೊಂಡಿದ್ದರು. ಆನಂತರ ಬಿಗ್​ಬಾಸ್​​8ರಲ್ಲಿ ಸ್ಪರ್ಧಿಯಾಗಿದ್ದರು. ಇವರು ಹಾಗೂ ಹಾಸ್ಯ ನಟ ಮಂಜ ಅವರ ಕಾಂಬಿನೇಷನ್​ ಸಖತ್​ ವೈರಲ್​ ಆಗಿತ್ತು. ಇಂದಿಗೂ ಅವರು ಬರೆದಿದ್ದ ಕವನವೊಂದನ್ನು ಹಲವರು ಬಳಕೆ ಮಾಡುತ್ತಿರುತ್ತಾರೆ. ಹಿರಣ್ಯ, ರೌಡಿಬೇಬಿ ಟೆಮ್ಟ್​ ರಾಜ, ಹಳದಿ ಕೆಂಪು ಹಸಿರು, ಹುಲಿರಾಯ ಸಿನಿಮಾದಲ್ಲಿ ನಟಿಸಿದ್ದು, ತ್ರಿಪುರ ಸುಂದರಿ, ಶಾರದೆ ಎನ್ನುವ ಸೀರಿಯಲ್​​ನಲ್ಲಿ ನಾಯಕಿನಟಿಯಾಗಿದ್ದರು, (ಏಜೆನ್ಸೀಸ್).