ವಿಡಿಯೋ ಚಿತ್ರತಂಡ 
ಸ್ಯಾಂಡಲ್‌ವುಡ್

11ಕ್ಕೆ ‘ವಿಡಿಯೋ’ ಬಿಡುಗಡೆ : ‘ಬ್ಲಿಂಕ್’ ಖ್ಯಾತಿಯ ಶ್ರೀನಿಧಿ ಬೆಂಗಳೂರು ನಿರ್ದೇಶನ ಹಾರರ್ ಚಿತ್ರ

ಪ್ರಮುಖ ಮುಖ್ಯಾಂಶಗಳು

  • ಬ್ಲಿಂಕ್ ಬಳಿಕ ಶ್ರೀನಿಧಿ ನಿರ್ದೇಶಿಸುತ್ತಿರುವ ಚಿತ್ರ ವಿಡಿಯೋ
  • ಕನ್ನಡದಲ್ಲಿ ಬರುತ್ತಿದೆ ಮತ್ತೊಂದು ಫೌಂಡ್ ಫುಟೇಜ್​ ಚಿತ್ರ
  • ಇದೇ ಸೆ. 11ಕ್ಕೆ ಸಿನಿಮಾ ರಾಜ್ಯಾದ್ಯಂತ ರಿಲೀಸ್, ಪ್ರೀಮಿಯರ್ ಗೆ ಉತ್ತಮ ಸ್ಪಂದನೆ
ಬೆಂಗಳೂರು: ‘ಬ್ಲಿಂಕ್’ ಖ್ಯಾತಿಯ ಶ್ರೀನಿಧಿ ಬೆಂಗಳೂರು ನಿರ್ದೇಶಿಸುತ್ತಿರುವ ಹಾರರ್ ಚಿತ್ರವೇ ‘ವಿಡಿಯೋ’. ಟೈಟಲ್ ಮೂಲಕವೇ ಗಮನಸೆಳೆದಿರುವ ಈ ಚಿತ್ರಕ್ಕೆ ‘ದಿಯಾ’ ನಟ ದೀಕ್ಷಿತ್ ಶೆಟ್ಟಿ ಬಂಡವಾಳ ಹೂಡುವ ಮೂಲಕ ಮೊದಲ ಬಾರಿಗೆ ನಿರ್ಮಾಪಕರಾಗಿದ್ದಾರೆ. ಇದೇ ಸೆ.11ಕ್ಕೆ ಸಿನಿಮಾ ರಿಲೀಸ್ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಟ್ರೇಲರ್ ರಿಲೀಸ್ ಮಾಡಲಾಗಿದೆ. ದೀಕ್ಷಿತ್ ಶೆಟ್ಟಿ, ‘ಇದೊಂದು ವಿಭಿನ್ನ ಕಾನ್ಸೆಪ್ಟ್‌ಯುಳ್ಳ ಫೌಂಡ್ ಫುಟೇಜ್ ಹಾರರ್ ಸಿನಿಮಾ. ಯಾವುದೇ ಹಿನ್ನೆಲೆ ಸಂಗೀತ ಬಳಸಿಲ್ಲ. 12 ಕ್ಯಾಮರಾ ಉಪಯೋಗಿಸಿ ಚಿತ್ರೀಕರಣ ನಡೆಸಲಾಗಿದೆ. ಬೇರೆ ಭಾಷೆಯ ಚಿತ್ರದಲ್ಲಿ ನಟಿಸಿ, ಅಲ್ಲಿ ದುಡಿದ ದುಡ್ಡನ್ನು ತಂದು ಈ ಚಿತ್ರಕ್ಕೆ ಬಂಡವಾಳ ಹಾಕಿದ್ದೇನೆ. ಕಳೆದ ವಾರವಷ್ಟೇ ಪ್ರೀಮಿಯರ್ ಶೋ ನಡೆಸಲಾಗಿದ್ದು, ಉತ್ತಮ ಪ್ರತಿಕ್ರಿಯೆವ್ಯಕ್ತವಾಗಿದೆ’ ಎಂದರು. ಶ್ರೀನಿಧಿ ಬೆಂಗಳೂರು, ‘‘ಬ್ಲಿಂಕ್’, ‘ಜೆರಾಕ್ಸ್’ ಬಳಿಕ ನಿರ್ದೇಶನದ ಮೂರನೇ ಸಿನಿಮಾ ಇದು. ಹಾರರ್ ಸಿನಿಮಾವನ್ನು ಆದಷ್ಟು ನೈಜವಾಗಿ ತರಬೇಕು ಎಂದು ಯೋಜಿಸಿದಾಗ ಈ ಕಥೆ ಹೊಳೆಯಿತು. ಇದು ಬ್ಲಾಗರ್‌ಗಳ ಕಥೆ. ಅದಕ್ಕಾಗಿ ಆರಂಭದಲ್ಲಿ ‘ಬ್ಲಾಗ್’ ಎಂದು ಟೈಟಲ್ ಫಿಕ್ಸ್ ಮಾಡಿದ್ದೆವು. ಬಳಿಕ ‘ವಿಡಿಯೋ’ ಎಂದು ಬದಲಾಯಿಸಿದೆವು. ಮೊದಲ 20 ನಿಮಿಷ ನಗಿಸುತ್ತೆ, ಅನಂತರ ಸೀಟ್‌ಎಡ್ಜ್‌ನಲ್ಲಿ ಕೂರಿಸುತ್ತದೆ’ ಎಂದು ಭರವಸೆ ವ್ಯಕ್ತಪಡಿಸಿದರು. ಭರತ್, ಜೀವನ್ ಶಿವಕುಮಾರ್, ತೇಜಸ್ ಎಸ್.ಎಂ., ಪ್ರಿಯಾ ಜೆ. ಆಚಾರ್, ನಲ್ಮೆ ನಾಚಿಯಾರ್ ತಾರಾಗಣದಲ್ಲಿದ್ದಾರೆ. ಪ್ರಸನ್ನಕುಮಾರ ಸಂಗೀತ, ಅವಿನಾಶ್ ಶಾಸಿ ಛಾಯಾಗ್ರಹಣ ಚಿತ್ರಕ್ಕಿದೆ.