ಹರ್ಷಿಕಾ ಪೂಣಚ್ಚ 
ಸ್ಯಾಂಡಲ್‌ವುಡ್

ಹರ್ಷಿಕಾ-ಭುವನ್ ಮನೆಗೆ ಮುದ್ದು ಕೃಷ್ಣನ ಆಗಮನ : ಗಂಡುಮಗುವಿಗೆ ಜನ್ಮ ನೀಡಿದ ಸ್ಯಾಂಡಲ್‌ವುಡ್ ನಟಿ, ಕೃಷ್ಣಜನ್ಮಾಷ್ಟಮಿಗೆ ಡಬಲ್ ಸಂಭ್ರಮ

ಶಿವಮಲ್ಲಯ್ಯ ಸ್ಥಾವರಮಠ

ಪ್ರಮುಖ ಮುಖ್ಯಾಂಶಗಳು

  • ಎರಡನೇ ಬಾರಿಗೆ ತಾಯಿಯಾದ ನಟಿ ಹರ್ಷಿಕಾ ಪೂಣಚ್ಚ
  • ಶ್ರೀಕೃಷ್ಣ ಜನ್ಮಾಷ್ಠಮಿ ದಿನದಂದೇ ಬಾಲಕೃಷ್ಣನ ಆಗಮನ
  • 2023ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ ಹರ್ಷಿಕಾ- ಭುವನ್ ಪೊನ್ನಣ್ಣ ಜೋಡಿ
ಬೆಂಗಳೂರು : ಸ್ಯಾಂಡಲ್‌ವುಡ್ ತಾರಾ ದಂಪತಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಮನೆಗೆ ಬಾಲಕೃಷ್ಣನ ಆಗಮನವಾಗಿದೆ. ಅಂದರೆ, ಶ್ರೀಕೃಷ್ಣಾನ್ಮಾಷ್ಟಮಿ ದಿನದಂದೇ ಹರ್ಷಿಕಾ ಪೂಣಚ್ಚ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆ ಮೂಲಕ ಕುಟುಂಬದ ಹಬ್ಬದ ಖುಷಿಯನ್ನು ಇಮ್ಮಡಿಗೊಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಸಿಹಿ ಸುದ್ದಿಯನ್ನು ದಂಪತಿ ಜಂಟಿಯಾಗಿ ಘೋಷಿಸಿದ್ದು, ‘ನಮ್ಮ ಮನೆಗೆ ಚೋಟು ಕೃಷ್ಣ ಬಂದ’ ಎಂದು ಖುಷಿ ಹಂಚಿಕೊಂಡಿದ್ದಾರೆ. ‘ನಮ್ಮ ಪ್ರಾರ್ಥನೆಗೆ ಶ್ರೀಕೃಷ್ಣ ತನ್ನ ಜನ್ಮದಿನದಂದೇ ಉತ್ತರ ನೀಡಿದ್ದಾನೆ. ಜನ್ಮಾಷ್ಟಮಿ ದಿನದಂದೇ ನಾವು ಮುದ್ದಾದ ಗಂಡು ಮಗುವನ್ನು ಜಗತ್ತಿಗೆ ಸ್ವಾಗತಿಸುತ್ತಿರುವುದಕ್ಕೆ ಅತೀವ ಸಂತೋಷವಾಗುತ್ತಿದೆ. ನಮ್ಮ ಪರವಾಗಿ ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಿಮ್ಮ ಪ್ರೀತಿಯೇ ನಮಗೆ ಆಧಾರಸ್ತಂಭ’ ಎಂದು ಸಂಭ್ರಮ ಹಂಚಿಕೊಂಡಿದ್ದಾರೆ. ತಾರಾ ದಂಪತಿಗೆ ಇದು ಎರಡನೇ ಮಗು. ಕಳೆದ ಮಾರ್ಚ್‌ನಲ್ಲಿ ಪ್ಯಾರಿಸ್ ಐೆಲ್ ಟವರ್ ಮುಂದೆ ನಟಿ ಹರ್ಷಿಕಾ ಪೂಣಚ್ಚ ಎರಡನೇ ಬಾರಿಗೆ ತಾಯಿಯಾಗುತ್ತಿರುವ ಬಗ್ಗೆ ಘೋಷಿಸಿದ್ದರು. ಬಳಿಕ ರೆಟ್ರೋ ಸೇರಿ ವಿವಿಧ ಅವತಾರಗಳಲ್ಲಿ ನಟಿಯು ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದರು. ನಟಿಯರಾದ ಪ್ರಿಯಾಂಕಾ ಉಪೇಂದ್ರ, ಅಮೂಲ್ಯಗೌಡ, ಶ್ವೇತಾ ಚಂಗಪ್ಪ, ನಿರ್ಮಾಪಕಿ ಶಿಲ್ಪಾ ಗಣೇಶ್ ಸೇರಿದಂತೆ ಅಭಿಮಾನಿಗಳು ಅಭಿನಂದಿಸಿದ್ದಾರೆ. ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ತಾರಾ ಜೋಡಿಯು 2023ರ ಆಗಸ್ಟ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿಗೆ ‘ತ್ರಿದೇವಿ ಪೊನ್ನಕ್ಕ’ ಎಂಬ ಪುತ್ರಿ ಇದ್ದಾಳೆ.