ಬೃಂದಾವಿಹಾರಿ ಪೋಸ್ಟರ್ 
ಸ್ಯಾಂಡಲ್‌ವುಡ್

Brindavihari Review : ದ ಟ್ರೂ ಬೃಂದಾವಿಹಾರಿ ಶೋ!

"ಕೃಷ್ಣಂ ಪ್ರಣಯ ಸಖಿ' ಯಶಸ್ಸಿನ ಬಳಿಕ ಗಣೇಶ್​ ಮತ್ತು ಶ್ರೀನಿವಾಸರಾಜು ಒಂದಾಗಿದ್ದ ಕಾರಣ "ಬೃಂದಾವಿಹಾರಿ' ಬಗ್ಗೆ ಮೊದಲಿನಿಂದಲೂ ಕುತೂಹಲವಿತ್ತು. "ಕೃಷ್ಣಂ...'ನಂತೆಯೇ "..ವಿಹಾರಿ'ಯೂ ಸುಂದರ ಹಾಡುಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಕ್ಸಸ್​ ಆಗಿದ್ದ ಕಾರಣ ನಿರೀೆ ಹೆಚ್ಚಿಸಿತ್ತು. ಹಾಗಾದರೆ, ಹೇಗಿದೆ ಹಿಟ್​ ಕಾಂಬಿನೇಷನ್​ನ ಹೊಸ ಸಿನಿಮಾ?

ವಿಜಯವಾಣಿ ಸುದ್ದಿ ಜಾಲ, ಹರ್ಷವರ್ಧನ್ ಬ್ಯಾಡನೂರು

ಚಿತ್ರ: ಬೃಂದಾವಿಹಾರಿ

ನಿರ್ದೇಶಕ: ಶ್ರೀನಿವಾಸರಾಜು

ನಿರ್ಮಾಣ: ಸಮೃದ್ಧಿ ಮಂಜುನಾಥ್​

ತಾರಾಗಣ: ಗಣೇಶ್​, ಮಾಳವಿಕಾ ಶರ್ಮಾ, ದೇವಿಕಾ ಭಟ್​, ರಾಮಕುಮಾರ್​, ಪಾವಗಡ ಮಂಜು, ಜಗಪ್ಪ, ಕುರಿ ಪ್ರತಾಪ್​, ಸಾಧು ಕೋಕಿಲ, ಲಕ್ಷ್ಮೀ ಮತ್ತಿತರರು

"ಕೃಷ್ಣಂ ಪ್ರಣಯ ಸಖಿ' ಯಶಸ್ಸಿನ ಬಳಿಕ ಗಣೇಶ್​ ಮತ್ತು ಶ್ರೀನಿವಾಸರಾಜು ಒಂದಾಗಿದ್ದ ಕಾರಣ "ಬೃಂದಾವಿಹಾರಿ' ಬಗ್ಗೆ ಮೊದಲಿನಿಂದಲೂ ಕುತೂಹಲವಿತ್ತು. "ಕೃಷ್ಣಂ...'ನಂತೆಯೇ "..ವಿಹಾರಿ'ಯೂ ಸುಂದರ ಹಾಡುಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಕ್ಸಸ್​ ಆಗಿದ್ದ ಕಾರಣ ನಿರೀೆ ಹೆಚ್ಚಿಸಿತ್ತು. ಹಾಗಾದರೆ, ಹೇಗಿದೆ ಹಿಟ್​ ಕಾಂಬಿನೇಷನ್​ನ ಹೊಸ ಸಿನಿಮಾ?

ಬೃಂದಾವಿಹಾರಿ ಪೋಸ್ಟರ್

ಸ್ವಾತಂತ್ರ್ಯಪೂರ್ವ ಹಿನ್ನೆಲೆಯಲ್ಲಿ ಪ್ರಾರಂಭವಾಗುವ ಕಥೆಯಿದು. ಹಲವು ವರ್ಷಗಳ ಹಿಂದೆ ಬ್ರಿಟಿಷರ ವಿರುದ್ಧ ಬೃಂದಾವನದ ಜನ ಬಂಡೆದ್ದ ಕಾರಣ, ಊರಿನ ಸುತ್ತ ಗೋಡೆ ನಿರ್ಮಿಸಿರುತ್ತಾರೆ. ಊರಿನ ಜನ ಸಲೀಸಾಗಿ ಹೊರ ಹೋಗುವಂತಿಲ್ಲ, ಹೊರಗಿನ ಜನ ಊರಿಗೆ ಬರುವಂತಿಲ್ಲ. ಎಲ್ಲದಕ್ಕೂ ಕಟ್ಟುನಿಟ್ಟಿನ ಪ್ರಕ್ರಿಯೆ ಇರುತ್ತದೆ. ಆ ಊರಿನಲ್ಲಿ ಬೆಳೆಯುವ ಅಜ್ಜ, ಅಜ್ಜಿಯ ಪ್ರೀತಿಯ ಮೊಮ್ಮಗ ಮಾಧವ (ಗಣೇಶ್​). ಆತ ಹಸು ಮೇಯಿಸುತ್ತಾನೆ, ಕೊಳಲು ನುಡಿಸುತ್ತಾನೆ, ನಿರರ್ಗಳವಾಗಿ ಇಂಗ್ಲೀಷ್​ ಮಾತನಾಡುತ್ತಾನೆ. ಆದರೂ, ಊರು ಬಿಟ್ಟು ಹೋಗಬಾರದೆಂದು ಅಜ್ಜ ಆಣೆ ಮಾಡಿಸಿಕೊಂಡಿರುವ ಕಾರಣ, ಕಾಂಪೌಂಡ್​ ಒಳಗಿನ ಪ್ರಪಂಚದಲ್ಲೇ ಬೆಳೆಯುತ್ತಾನೆ. ಆ ಊರಿಗೆ ರಾಜನರ್ತಕಿ ಮೀರಾ ಬಾಯಿ (ಮಾಳವಿಕಾ) ಬರುತ್ತಾಳೆ. ಆಕೆಗೆ ಮಾಧವನ ಮೇಲೆ ಒಲವು. ಆದರೆ, ಮಾಧವನಿಗೆ ಮೂರು ತಿಂಗಳ ಹಿಂದಷ್ಟೇ ಬಿಟ್ಟು ಹೋದ ಜಮೀನ್ದಾರನ ಮಗಳು ರಾಧಾಳ (ದೇವಿಕಾ) ಮೇಲೆ ಜೀವದಷ್ಟು ಪ್ರೀತಿ. ಅಲ್ಲಿಂದ ಫ್ಲ್ಯಾಶ್​ಬ್ಯಾಕ್​ ತೆರೆದುಕೊಳ್ಳುತ್ತದೆ. ಹಿಂದೇನಾಯಿತು? ಮುಂದೇನಾಗುತ್ತದೆ? ತಿಳಿಯಲು "ಬೃಂದಾವಿಹಾರಿ' ನೋಡಿ.

ಬೃಂದಾವಿಹಾರಿ ಪೋಸ್ಟರ್

ನಾಯಕ ನಟ ಗಣೇಶ್​ "ಬೃಂದಾವಿಹಾರಿ' ಚಿತ್ರದ ಹೈಲೈಟ್​. ಕುಣಿದು ಕುಣಿಸುತ್ತಾರೆ, ಹೊಡೆದಾಡಿ ಅಬ್ಬರಿಸುತ್ತಾರೆ, ಅತ್ತು ಅಳಿಸುತ್ತಾರೆ, ನಕ್ಕು ನಲಿಸುತ್ತಾರೆ. ಒನ್​ ಮ್ಯಾನ್​ ಆರ್ಮಿಯಂತೆ ಇಡೀ ಕಥೆಯನ್ನು ಹೊತ್ತೊಯ್ದಿದ್ದಾರೆ. ಅವರ ಸುತ್ತ ಉಳಿದ ಪಾತ್ರಗಳು ಬಂದು ಹೋಗುತ್ತವೆ. ಅವುಗಳಲ್ಲಿ ದೇವಿಕಾ, ಮಾಳವಿಕಾ, ಲಕ್ಷಿ$್ಮ, ರಾಮಕುಮಾರ್​ ಪಾತ್ರಗಳು ಸೆಳೆಯುತ್ತವೆ. ಜತೆಗೆ ಕುರಿ ಪ್ರತಾಪ್​, ಜಗಪ್ಪ, ಮಂಜು ಪಾವಗಡ, ಸಾಧು ಕೋಕಿಲ ನಗುವಿನ ಅಲೆಯಲ್ಲಿ ತೇಲಿಸುತ್ತಾರೆ. ಸಿನಿಮಾ ಪ್ರಾರಂಭವಾದ 50 ನಿಮಿಷಗಳಲ್ಲೇ ನಾಲ್ಕು ಹಾಡುಗಳು ಇಣುಕು ಹಾಕುತ್ತವೆ. "ರಾಮ ರಾಮ', "ರಾಧೆ' ಹಾಡುಗಳು ನೋಡಲು, ಕೇಳಲು ಸುಂದರ. ಮೊದರ್ಲಧ ನಿಧಾನ ಅನ್ನಿಸಿದರೂ, ಇಂರ್ಟವಲ್​ ಟ್ವಿಸ್ಟ್​ ಪ್ರೇಕ್ಷಕರಿಗೆ ಕಿಕ್​ ನೀಡುತ್ತದೆ. ನಂತರ ದ್ವೀತಿಯಾರ್ಧದಲ್ಲಿ ಕಥೆ ಮತ್ತೊಂದು ಹಾದಿ ಹಿಡಿದು, ಸೀಟಂಚಲ್ಲಿ ಕೂರಿಸುತ್ತದೆ. ಹಾಲಿವುಡ್​ನ "ದ ಟ್ರೂಮನ್​ ಶೋ', ಹಿಂದಿಯ "ಲಗಾನ್​', ತೆಲುಗಿನ "ಪೆದ್ದಿ'ಯ ಕೆಲ ಸನ್ನಿವೇಶಗಳನ್ನು ಸಿನಿಮಾ ನೆನಪಿಸುತ್ತದೆ. ಆದರೆ, ಎಲ್ಲವನ್ನೂ ಕಥೆಯೊಳಗೆ ಸೇರಿಸಿ ತಮ್ಮದೇ ರೀತಿಯಲ್ಲಿ ಅಚ್ಚುಕಟ್ಟಾಗಿ ಪ್ರಸ್ತುತಪಡಿಸಿದ್ದಾರೆ ನಿರ್ದೇಶಕ ಶ್ರೀನಿವಾಸರಾಜು.