BEST FILMS DIRECTED BY WOMEN
- ಕನ್ನಡದಲ್ಲಿ ಮಹಿಳೆಯರು ನಿರ್ದೇಶಿಸಿರುವ ಹಿಟ್ ಸಿನಿಮಾಗಳು ಯಾವುದು ಗೊತ್ತಾ?
- ಫಣಿಯಮ್ಮ, ಎದೆಗಾರಿಕೆ, ಕಿರಗೂರಿನ ಗಯ್ಯಾಳಿಗಳು ಮತ್ತಷ್ಟು ನೋಡಬೇಕೆನಿಸುವ ಚಿತ್ರ
- ಇತ್ತೀಚಿನ ಆಚಾರ್ ಆಂಡ್ ಕೋ, ಟಾಕ್ಸಿಕ್ ಸಿನಿಮಾಗಳು ಸಾಕಷ್ಟು ಹೆಸರು ಮಾಡಿವೆ.
- ಸಿಂಧೂ ಶ್ರೀನಿವಾಸ್ ಮೂರ್ತಿ, ರೂಪಾ ರಾವ್, ಸುಮನಾ ಕಿತ್ತೂರು ಸೇರಿದಂತೆ ಹಲವರ ಕೊಡುಗೆ ಸ್ಯಾಂಡಲ್ವುಡ್ಗಿದೆ.
BEST FILMS DIRECTED BY WOMEN:
ಸಿನಿಮಾ ನಿರ್ದೇಶನದ ವಿಚಾರದಲ್ಲಿ ಪುರುಷರ ಪ್ರಾಬಲ್ಯವೇ ಹಿಂದೆ ಹೆಚ್ಚಿತ್ತು.. ಆದರೆ ಇಂದು ಹಾಗೇನಿಲ್ಲ. ಕ್ಯಾಮೆರಾ, ಅಸಿಸ್ಟೆಂಟ್ ಡೈರೆಕ್ಟರ್, ಮೇಕಪ್ ಆರ್ಟಿಸ್ಟ್ನಿಂದ ಹಿಡಿದು ಎಲ್ಲ ವರ್ಗದಲ್ಲಿಯೂ ಮಹಿಳೆಯರ ಪಾರುಪತ್ಯವುಂಟು. 8-90ರ ಕಾಲದಲ್ಲಿದ್ದ ಬೆರಳೆಣಿಕೆಯಷ್ಟು ಮಹಿಳಾ ಡೈರೆಕ್ಟರ್ಸ್ ಸಂಖ್ಯೆ ಈಗ ಹೆಚ್ಚಾಗಿದೆ.
ಪುರುಷರ ಸಿನಿಮಾಗಳಷ್ಟೇ ಮಹಿಳೆಯರು ರಚಿಸಿದ ಕತೆಗಳು ಸಾಕಷ್ಟು ಹಿಟ್ ಕಂಡಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ, ಆಚಾರ್ ಆಂಡ್ ಕೋ, ಟಾಕ್ಸಿಕ್, ಗಂಟುಮೂಟೆ, ಅಮ್ಮಾಚಿ ಎಂಬ ನೆನಪು, ವಿಂಡೋ ಸೀಟ್ ಸಿನಿಮಾಗಳು ಇದಕ್ಕೆ ಸಾಕ್ಷಿ. ಸಿನಿಮಾದಲ್ಲಿ ನಟಿಸೋದರ ಜೊತೆಗೆ ನಿರ್ದೇಶನ ಯಾರು ಮಾಡುತ್ತಾರೆ ಎನ್ನುವುದು ಮುಖ್ಯವಾಗುತ್ತದೆ. ಮಹಿಳೆಯರು ಮತ್ತು ಪುರುಷರ ಕತೆ ಮತ್ತು ಡೈರೆಕ್ಷನ್ ದೃಷ್ಟಿಕೋನವನ್ನು ಎರಡು ಪ್ರತ್ಯೇಕ ರೀತಿಯಲ್ಲಿ ನಾವು ಕಾಣಬಹುದು. ಇಬ್ಬರ ಹಾದಿಯಲ್ಲಿ ಮಹಿಳೆಯರಿಗಿರುವ ಪ್ರಾಧಾನ್ಯವನ್ನು ನಾವು ಕಾಣಬಹುದಾಗಿದೆ.
ಇಲ್ಲಿಯವರೆಗೂ ಮಹಿಳೆಯರಿಂದ ನಿರ್ದೇಶಿಸಲಾದ ಸಿನಿಮಾಗಳು... ಅದರ ಕತೆ ಏನು ಹಾಗೂ ಪ್ರೇಕ್ಷಕರು ಅದನ್ನು ನೆಚ್ಚಿಕೊಂಡಿದ್ದೆಷ್ಟು ಅನ್ನುವುದನ್ನು ತಿಳಿದುಕೊಳ್ಳೋಣ.
ಆಚಾರ್ ಆಂಡ್ ಕೋ
ಸಿಂಧು ಶ್ರೀನಿವಾಸ ಮೂರ್ತಿ ಅವರು ಬರೆದು ನಿರ್ದೇಶಿಸಿರುವ ಸಿನಿಮಾವಾದ ಆಚಾರ್ ಆಂಡ್ ಕೋ ಸಿನಿಮಾ 2023 ಜುಲೈನಲ್ಲಿ ರಿಲೀಸ್ ಆಗಿತ್ತು. ಪಿಆರ್ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ಬಿಡುಗಡೆಯಾದ ಈ ಸಿನಿಮಾ ಸಾಕಷ್ಟು ಹಿಟ್ ಕಂಡಿತ್ತು 1960ರ ದಶಕದ ಬೆಂಗಳೂರಿನ ಚಿತ್ರಣ ಹಾಗೂ ಸಾಂಪ್ರದಾಯಿಕ ಕುಟುಂಬದ ಆಚರಣೆಗಳು, ಮದುವೆ ಕನಸುಗಳು, ಹಿರಿ ಮಕ್ಕಳ ಜವಾಬ್ದಾರಿಯನ್ನು ಈ ಸಿನಿಮಾದ ಕತೆ ಹೇಳುತ್ತದೆ.
ಬೆಳ್ಳಿ ಪರದೆ ಮೇಲೆ ಅನಾವರಣಗೊಂಡ ಈ ಸಿನಿಮಾ ಎಷ್ಟು ಗಳಿಕೆ ಮಾಡಿದೆ ಎನ್ನುವ ಮಾಹಿತಿ ಇಲ್ಲಿಯವರೆಗೂ ಸಿಕ್ಕಿಲ್ಲ, ಆದರೆ, ಯಶಸ್ಸು ಕಂಡಿದ್ದು ಹೌದು. ಜೊತೆಗೆ ಇದನ್ನು ಒಟಿಟಿಯಲ್ಲಿ ಕಂಡ ಸಿನಿ ಪ್ರಿಯರು ಹೆಚ್ಚಾಗಿಯೇ ನೆಚ್ಚಿಕೊಂಡಿದ್ದಾರೆ. ಸುಪ್ರಭಾತ ಹಾಡು, ಮಾವಿನ ತೋಪಲಿ ನೂರು ಕಾಯಿ ಹಾಡುಗಳು ಇಂದಿಗೂ ಹಿಟ್ಲಿಸ್ಟ್ನಲ್ಲಿವೆ.
ಆಗಸ್ಟ್ 26ರಂದು ರಿಲೀಸ್ ಆಗಲು ರೆಡಿಯಾಗಿರುವ ಟಾಕ್ಸಿಕ್ ಸಿನಿಮಾ
ಟಾಕ್ಸಿಕ್ ಸಿನಿಮಾ ಮೂಲಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ಟೀಯ ಮಟ್ಟದಲ್ಲಿ ನಿರ್ದೇಶಕಿಯಾಗಿ ಮಿಂಚಲು ರೆಡಿಯಾಗಿದ್ದಾರೆ. ಈಗಾಗಲೇ ಟಾಕ್ಸಿಕ್ ಸಿನಿಮಾಗೆ ಟಿಕೆಟ್ಗಳು ಮುಂಗಡವಾಗಿ ಬುಕ್ ಮಾಡಲಾಗುತ್ತಿದ್ದು, ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ರೂಪಾ ರಾವ್ ನಿರ್ದೇಶನದ ಗಂಟುಮೂಟೆ ಸಿನಿಮಾ
ನಿರ್ಮಾಪಕಿಯಾಗಿಯೂ ಹೆಸರು ಮಾಡಿರುವ ರೂಪಾ ರಾವ್ ಅವರು 2019ರಲ್ಲಿ ಗಂಟುಮೂಟೆ ಸಿನಿಮಾವನ್ನು ಸ್ಯಾಂಡಲ್ವುಡ್ಗೆ ಕೊಟ್ಟರು. ಈ ಸಿನಿಮಾವು ಸಿನಿ ಪ್ರೇಮಿಗಳು ಹಾಗೂ ವಿಮರ್ಶಕರಿಂದ ಭಾರಿ ಮೆಚ್ಚುಗೆ ಪಡೆದುಕೊಂಡಿದೆ. 90ರ ದಶಕದ ಬೆಂಗಳೂರಿನಲ್ಲಿ ನಡೆಯುವ ಪ್ರೇಮಕತೆ ಸಿನಿಮಾದ ಕಥಾ ಹಂದರ. ಮೀರಾ ಎನ್ನುವ ಮುಗ್ಧ ಹುಡುಗಿಯ ಸುತ್ತ ಈ ಸಿನಿಮಾದ ಕತೆ ಸುತ್ತುತ್ತದೆ. ಹುಡುಗನತ್ತ ಆಕರ್ಷಿತಳಾಗುವ ಆಕೆ, ಶಾಲೆಯಲ್ಲಿ ರ್ಯಾಗಿಂಗ್ ಕ್ಷಣ, ಪರೀಕ್ಷೆಯಲ್ಲಿ ಅಂಕ ಗಳಿಸಲು ಹೋರಾಡುವ ಬಗ್ಗೆ ಸಿನಿಮಾವು ಹೇಳುತ್ತದೆ.
ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಸುಮನಾ
ಸುಮನಾ ಕಿತ್ತೂರು ನಿರ್ದೇಶನದ ಸ್ಲಂ ಬಾಲ, ಎದೆಗಾರಿಕೆ, ಕಿರಗೂರಿನ ಗಯ್ಯಾಳಿಗಳು, ಕಳ್ಳರ ಸಂತೆ ಸಿನಿಮಾಗಳು ಹೆಚ್ಚು ನೋಡುಗರನ್ನು ಗಳಿಸಿದೆ. ಮೊದಲು ಪತ್ರಕರ್ತೆಯಾಗಿದ್ದ ಅವರು ಅಗ್ನಿ ಶ್ರೀಧರ ಅವರ ಒಡನಾಟದೊಂದಿಗೆ ಸಿನಿಮಾ ರಂಗಕ್ಕೆ ಕಾಲಿಟ್ಟರು.
ಅಮ್ಮಚ್ಚಿ ಎಂಬ ನೆನಪು
ಇತ್ತೀಚೆಗೆ ರಿಲೀಸ್ ಆಗಿದ್ದ ಅಮ್ಮಚಿ ಎಂಬ ನೆನಪು ಸಿನಿಮಾವು ಪ್ರೈಂ ನಲ್ಲಿ ನೋಡಬಹುದಾಗಿದೆ. ಸುದ್ದಿ ವಾಹಿನಿಯ ನಿರೂಪಕಿಯಾಗಿ ಕೆಲಸ ಮಾಡಿದ್ದ ಚಂಪಾ ಪಿ ಶೆಟ್ಟಿ ನಿರ್ದೇಶನದ ಸಿನಿಮಾ ಇದಾಗಿದೆ. ವೈದೇಹಿ ಅವರ ಮೂರು ಸಣ್ಣ ಕತೆಗಳನ್ನು ಆಧರಿಸಿ ಸಿನಿಮಾದ ಕತೆಯನ್ನು ನಿರ್ದೇಶಿಲಾಗಿದೆ. ಕುಂದಾಪುರ ಭಾಗದ ಮೂರು ಹೆಣ್ಣು ಮಕ್ಕಳ ಕತೆಯನ್ನು ಈ ಸಿನಿಮಾ ಹೇಳುತ್ತದೆ.
ಫಣಿಯಮ್ಮ
1983ರಲ್ಲಿ ತೆರೆಕಂಡ ಸಿನಿಮಾ ಫಣಿಯಮ್ಮ ಸಿನಿಮಾವನ್ನು ಬಿ.ವಿ ಕಾರಂತರ ಪತ್ನಿಯಾಗಿರುವ ಸುಮಾ ಕಾರಂತ ಅವರು ನಿರ್ದೇಶಿಸಿದ್ದಾರೆ. ಕಾಸ್ಟೂಮ್ ಡಿಸೈನರ್ ಮತ್ತು ಕಲಾ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಫಣಿಯಮ್ಮ ಸಿನಿಮಾ ಕತೆಯು ಸಣ್ಣ ವಯಸ್ಸಲ್ಲೇ ಮದುವೆ ನಿಶ್ಚಯವಾಗಿ ಇನ್ನೂ ಆತನೊಂದಿಗೆ ಮದುವೆಯಾಗುವ ಮುನ್ನವೇ ಹಾವು ಕಡಿದು ಸಾಯುತ್ತಾನೆ. ಆಗಲೇ ವಿಧವೆ ಪಟ್ಟವನ್ನು ಪಡೆದುಕೊಳ್ಳುವ ಫಣಿಯಮ್ಮ ತಲೆ ಬೋಳಿಸಿಕೊಂಡು, ಯಾರಿಗೂ ತಿಳಿಯದೇ ಹೆರಿಗೆಗೆ ಸಹಾಯ ಮಾಡುತ್ತಿದ್ದ ಸುತ್ತ ಈ ಸಿನಿಮಾದ ಕತೆ ಸುತ್ತುತ್ತದೆ.
ದೇವೀರಿ
ಪಿ ಲಂಕೇಶ್ ಅವರು ಬರೆದಿರುವ ಅಕ್ಕ ಕತೆಯನ್ನು ಆಧರಿಸಿ ನಿರ್ದೇಶಿಸಿದ ಸಿನಿಮಾ ದೇವೀರಿ. ಇದನ್ನು ಸ್ವತಃ ಲಂಕೇಶ್ ಅವರ ಪುತ್ರಿ ಕವಿತಾ ಲಂಕೇಶ್ ಅವರು ನಿರ್ದೇಶಿಸಿದ್ದಾರೆ.
ವಿಂಡೋ ಸೀಟ್
ಪತ್ರಕರ್ತೆಯಾಗಿ ಸಾಕಷ್ಟು ಹೆಸರು ಮಾಡಿದ್ದ ಶೀತಲ್ ಶೆಟ್ಟಿ ಉಳಿದವರು ಕಂಡಂತೆ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟರು. ಅವರ ನಿರ್ದೇಶನದ ವಿಂಡೋ ಸೀಟ್ ಸಿನಿಮಾ ಸಾಕಷ್ಟು ಹಿಟ್ ಕಂಡಿದೆ, ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾವಾಗಿರುವ ಇದು, 2022ರಲ್ಲಿ ತೆರೆಕಂಡಿತ್ತು.
ಮುಖಪುಟ
ರೂಪಾ ಅಯ್ಯರ್ ನಿರ್ದೇಶನದ ಮುಖಪುಟ ಸಿನಿಮಾವು 2009ರಲ್ಲಿ ರಿಲೀಸ್ ಆಗಿತ್ತು. ಇದೊಂದು ಸಾಮಾಜಿಕ ಕಳಕಳಿಯುಳ್ಳ ಸಿನಿಮಾ ಎಚ್ಐವಿ ಮತ್ತು ಏಡ್ಸ್ ಬಗ್ಗೆ ಜಾಗೃತಿ ನೀಡುವ ಚಿತ್ರವಾಗಿದೆ, (ಏಜೆನ್ಸೀಸ್).