- ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್' ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್
- ಯಶ್ ಚಿತ್ರಕ್ಕೆ ಒಬ್ಬರಲ್ಲ, ಇಬ್ಬರಲ್ಲ ಒಟ್ಟು ಐವರು ಸ್ಟಾರ್ ಹೀರೋಯಿನ್ಗಳು
- ಗೀತು ಮೋಹನ್ದಾಸ್ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರವು ಇದೇ ಆಗಸ್ಟ್ 26ರಂದು ಪ್ಯಾನ್ ವರ್ಲ್ಡ್ ರಿಲೀಸ್
- ಯಶ್ ಸೇರಿ ಯಾವ ನಟಿಯರಿಗೆ ಎಷ್ಟು ಸಂಭಾವನೆ? ಇಲ್ಲಿದೆ ನೋಡಿ ಕಂಪ್ಲೀಟ್ ವಿವರ
Toxic Beauties: ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್, ನಟ ಯಶ್ ಅಭಿನಯದ ಹಾಗೂ ಮಾಲಿವುಡ್ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್' ಚಿತ್ರದ ಹವಾ ಸದ್ಯ ಭಾರತೀಯ ಚಿತ್ರೋದ್ಯಮದಲ್ಲಿ ಬಲು ಜೋರಾಗಿದೆ. ಇದೇ ಆಗಸ್ಟ್ 26ರಂದು ಏಕಕಾಲಕ್ಕೆ ಬಹುತೇಕ ಚಿತ್ರಮಂದಿರಗಳಲ್ಲಿ ಪ್ಯಾನ್ ವರ್ಲ್ಡ್ ರಿಲೀಸ್ ಆಗಲು ಸಜ್ಜಾಗಿರುವ ಸಿನಿಮಾದ ಟ್ರೇಲರ್ ನಿನ್ನೆಯಷ್ಟೇ (ಆ.07) ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಂಡಿದ್ದು, ಸಿನಿಪ್ರಿಯರ ಕುತೂಹಲವನ್ನು ದುಪ್ಪಟ್ಟಾಗಿಸಿದೆ.
ಆರಂಭದಲ್ಲಿ ಸಿನಿಮಾದ ಟೀಸರ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದ್ದ ಟಾಕ್ಸಿಕ್, ಒಂದಷ್ಟು ಹಸಿಬಿಸಿ ದೃಶ್ಯಗಳಿಂದ ಭಾರಿ ಟೀಕೆ, ಅಸಮಾಧಾನಕ್ಕೆ ಗುರಿಯಾಗಿತ್ತು. ಚಿತ್ರವನ್ನು ಹಾಲಿವುಡ್ ರೇಂಜಿಗೆ ತೋರಿಸಲಾಗಿದ್ದು, ಮುಜುಗರಕ್ಕೀಡು ಮಾಡುವ ಸೀನ್ಗಳನ್ನು ಚಿತ್ರೀಕರಿಸಲಾಗಿದೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಬಿಡುಗಡೆಗೊಂಡ ಟ್ರೇಲರ್ನಲ್ಲಿ ಕಂಪ್ಲೀಟ್ ಹೊಡೆದಾಟ, ಬಡಿದಾಟ, ರಕ್ತಸಿಕ್ತಹಾಗೂ ಐವರು ನಟಿಮಣಿಯರ ಝುಲಕ್ ಮತ್ತು ಯಶ್ ಅವರ ದ್ವಿಪಾತ್ರ ದೃಶ್ಯಗಳೇ ತುಂಬಿದೆ. ಇದರೊಟ್ಟಿಗೆ ಸ್ವತಃ ನಟನೇ ಹೇಳಿರುವಂತೆ, ತಮ್ಮ ಸಿನಿಮಾವನ್ನು ಹೆಮ್ಮೆಯಿಂದಲೇ ನೋಡಿ, ನೋಡಬಹುದು ಎಂಬ ಮಾತುಗಳು ಫ್ಯಾನ್ಸ್ಗಳಲ್ಲಿ ಚಿತ್ರದ ಅಸಲಿ ಕಥೆ ಬಗ್ಗೆ ಕುತೂಹಲ ಕೆರಳಿಸಿದೆ.
2026ರ ಮಾರ್ಚ್ 19ರಂದೇ ಜಾಗತಿಕವಾಗಿ ತೆರೆ ಕಾಣಲು ಸಿದ್ಧವಾಗಿದ್ದ 'ಟಾಕ್ಸಿಕ್' ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಆ್ಯಕ್ಷನ್-ಥ್ರಿಲ್ಲರ್ ಸಿನಿಮಾದಲ್ಲಿ ಭಾರತೀಯ ಚಿತ್ರೋದ್ಯಮದ ಟಾಪ್ ನಟಿಯರಾದ ಕಿಯಾರಾ ಅಡ್ವಾಣಿ (ಬಾಲಿವುಡ್), ನಯನತಾರಾ (ಕಾಲಿವುಡ್), ರುಕ್ಮಿಣಿ ವಸಂತ್ (ಸ್ಯಾಂಡಲ್‌ವುಡ್), ಹುಮಾ ಖುರೇಷಿ (ಬಾಲಿವುಡ್) ಮತ್ತು ತಾರಾ ಸುತಾರಿಯಾ (ಬಾಲಿವುಡ್) ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಈ ಸ್ಟಾರ್ ನಟಿಮಣಿಯರಿಗೆ ಎಷ್ಟು ದುಬಾರಿ ಮೊತ್ತದ ಸಂಭಾವನೆ ಸಿಕ್ಕಿರಬಹುದು ಎಂಬ ಪ್ರಶ್ನೆಗಳು ಸದ್ಯ ಸಿನಿರಸಿಕರಲ್ಲಿ ತೀವ್ರವಾಗಿ ಕಾಡುತ್ತಿತ್ತು. ಕಡೆಗೂ ಯಾರಿಗೆ ಎಷ್ಟು ಸಂಭಾವನೆ ದೊರೆತಿದೆ ಎಂಬುದರ ವಿವರ ಹೀಗಿದೆ ನೋಡಿ.
ಯಶ್
'ಟಾಕ್ಸಿಕ್'ನ ರೂವಾರಿ ಆಗಿರುವ ಯಶ್, 'ರಾಯ' ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಈಗಾಗಲೇ ಪೋಸ್ಟರ್, ಟೀಸರ್, ಟ್ರೇಲರ್ನಲ್ಲಿ ಕಪ್ಪು ಬಣ್ಣದ ಉಡುಗೆ ಮತ್ತು ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿರುವ ಯಶ್, ಸಿನಿಪ್ರಿಯರಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದ್ದಾರೆ. ಈ ಚಿತ್ರದಲ್ಲಿ ನಟನೆ ಮಾತ್ರವಲ್ಲದೇ, ಕಥೆ, ನಿರ್ಮಾಣದಲ್ಲೂ ಯಶ್ ಪ್ರಮುಖ ಪಾತ್ರ ವಹಿಸಿದ್ದಾರೆ. ಕೇವಲ ನಟನೆಗೆ ಅವರು ಬರೋಬ್ಬರಿ 50 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ನಯನತಾರಾ (ಗಂಗಾ)
ಬಹುನಿರೀಕ್ಷಿತ ಚಿತ್ರದಲ್ಲಿ 'ಗಂಗಾ' ಪಾತ್ರವನ್ನು ನಿಭಾಯಿಸಿರುವ ಬಹುಭಾಷಾ ನಟಿ ನಯನತಾರ, ಮೊದಲ ಲುಕ್, ಟ್ರೇಲರ್ನಲ್ಲಿ ಯಶ್ರ ಸಹೋದರಿ ಪಾತ್ರದಲ್ಲಿ ನೋಡುಗರ ಹುಬ್ಬೇರಿಸಿದ್ದಾರೆ. ಈ ಚಿತ್ರದಲ್ಲಿ ನಟಿಸಲು ಅವರು 12 ಕೋಟಿ ರೂ. ಸಂಭಾವನೆ ಸ್ವೀಕರಿಸಿದ್ದಾರೆ ಎನ್ನಲಾಗಿದೆ.
ಹುಮಾ ಖುರೇಷಿ (ಎಲಿಜಿಬೆತ್)
ನೆಟ್‌ಫ್ಲಿಕ್ಸ್ ವೀಕ್ಷಕರಿಂದ ಮೆಚ್ಚುಗೆ ಪಡೆದ 'ಡೆಲ್ಲಿ ಕ್ರೈಮ್ ಸೀಸನ್ 3'ರಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿರುವ ನಟಿ ಹುಮಾ ಖುರೇಷಿ, ಟಾಕ್ಸಿಕ್ನಲ್ಲಿ 'ಎಲಿಜಿಬೆತ್' ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ಖುರೇಷಿ 2ರಿಂದ 3 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ.
ರುಕ್ಮಿಣಿ ವಸಂತ್ (ಮೆಲಿಸಾ)
ಕನ್ನಡದ ಬ್ಯೂಟಿ ರುಕ್ಮಿಣಿ ವಸಂತ್, ನಟ ಯಶ್ ಅವರ ಗ್ಯಾಂಗ್‌ಸ್ಟರ್ ಚಿತ್ರದಲ್ಲಿ 'ಮೆಲಿಸಾ' ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿರುವ ರುಕ್ಕು, ಬಹುಮುಖ ಪಾತ್ರವನ್ನೇ ಮಾಡಿದ್ದಾರೆ ಎಂಬುದು ಟ್ರೇಲರ್ನಲ್ಲಿ ಸ್ಪಷ್ಟವಾಗಿದೆ. ವರದಿಗಳ ಪ್ರಕಾರ, ರುಕ್ಮಿಣಿ ಅವರ ಸಂಭಾವನೆ 3 ಕೋಟಿ ರೂ. ಆಗಿದೆ.
ತಾರಾ ಸುತಾರಿಯಾ (ರೆಬೆಕಾ)
ಚಿತ್ರದಲ್ಲಿ 'ರೆಬೆಕಾ' ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ಬೆಡಗಿ ತಾರಾ ಸುತಾರಿಯಾ, ತಮ್ಮ ಪಾತ್ರಕ್ಕೆ 2 ರಿಂದ 3 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಕಿಯಾರಾ ಅಡ್ವಾಣಿ (ನಾಡಿಯಾ)
ಬಾಲಿವುಡ್ ಚೆಲುವೆ ಕಿಯಾರಾ ಅಡ್ವಾಣಿ 'ಟಾಕ್ಸಿಕ್'ನಲ್ಲಿ ನಾಡಿಯಾ ಪಾತ್ರದಲ್ಲಿ ನಟಿಸಿದ್ದಾರೆ. ಐವರು ನಟಿಮಣಿಯರ ಪೈಕಿ ಕಿಯಾರಾ ಅವರ ಲುಕ್ ಮಾತ್ರ ಸಿನಿಪ್ರಿಯರ ಕುತೂಹಲ ದುಪ್ಪಟ್ಟಾಗಿಸಿದೆ. ಟ್ರೇಲರ್ನಲ್ಲಿ ತೋರಿಸಿರುವಂತೆ, ಚಿತ್ರದ ಕಥೆಯಲ್ಲಿ ಅವರ ಪಾತ್ರವೇ ಟ್ವಿಸ್ಟ್ ಅಂಡ್ ಟರ್ನ್ಗಳಿಗೆ ಮುಖ್ಯ ಕಾರಣ ಎನ್ನಲಾಗಿದೆ. ತಮ್ಮ ಪಾತ್ರಕ್ಕಾಗಿ ನಟಿ ಸುಮಾರು 15 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಗಳು ತಿಳಿಸಿದೆ. ಅಷ್ಟಕ್ಕೂ, ಇತರೆ ನಟಿಯರಿಗೆ ಹೋಲಿಸಿದರೆ ಕಿಯಾರಾ ಅವರ ಪೇಮೆಂಟ್ ಎಲ್ಲರಿಗಿಂತ ಹೆಚ್ಚಿದೆ,(ಏಜೆನ್ಸೀಸ್).