ಕ್ರೀಡೋತ್ಸವ ಚಿಹ್ನೆ ಅನಾವರಣ ಮಾಡಿದ ನಟ ಉಪೇಂದ್ರ  
ಸ್ಯಾಂಡಲ್‌ವುಡ್

Heroines sports - ನಟಿಮಣಿಯರಿಂದ ನಟಿಮಣಿಯರಿಗಾಗಿ ಆಡು ಆಟ ಆಡು!

Heroines Sports - ಕ್ರಿಕೆಟಿಗರು ವರ್ಷಪೂರ್ತಿ ಐಪಿಎಲ್​, ಆ ಕಪ್​, ಈ ಕಪ್ ಅಂತ ಕ್ರಿಕೆಟ್​ ಆಡುವಂತೆಯೇ, ಸಿನಿಮಾ ತಾರೆಯರೂ ವರ್ಷಪೂರ್ತಿ ಒಂದಲ್ಲಾ ಒಂದು ಕ್ರೀಡಯಲ್ಲಿ ಬಿಜಿಯಾಗುತ್ತಿದ್ದಾರೆ. ಸಿಸಿಎಲ್​, ಅಪ್ಪು ಕಪ್​, ಡಾ. ರಾಜ್​ ಕಪ್​, ಫ್ಯಾನ್ಸ್​ ಕ್ರಿಕೆಟ್​ ಲೀಗ್​, ಸ್ನೇಹಲೋಕ ಕಪ್​, ಬ್ಯಾಡ್ಮಿಂಟನ್​, ಬೌಲಿಂಗ್​, ಕಬಡ್ಡಿ... ಹೀಗೆ ತಿಂಗಳಿಗೊಂದು ಕ್ರೀಡಾಕೂಟ ಅಂತ ಆಡುತ್ತಿರುತ್ತಾರೆ. ಇದೀಗ ನಟಿಮಣಿಯರಿಗಾಗಿಯೇ ಕ್ರೀಡೋತ್ಸವ ಆಯೋಜಿಸಲು ನಟಿಯರಾದ ದಿವ್ಯಾ ಉರುಡುಗ ಮತ್ತು ನಿಕಿತಾ ಸ್ವಾಮಿ ಸಿದ್ಧತೆ ನಡೆಸಿದ್ದಾರೆ.
ಮಹಿಳಾ ಕ್ರೀಡೋತ್ಸಾಹವನ್ನು ಪ್ರೋತ್ಸಾಹಿಸಲು ವಿಂಕ್ ವರ್ಕ್ಸ್ ಮೀಡಿಯಾ ಸಂಸ್ಥೆ 2025-2026ನೇ ಸಾಲಿನ ವಾರ್ಷಿಕ ಕಾರ್ಯಕ್ರಮಗಳ ಅಂಗವಾಗಿ ಮಹಿಳಾ ಕ್ರೀಡೋತ್ಸವವನ್ನು ಘೋಷಿಸಿದೆ. ಈ ಕ್ರೀಡೋತ್ಸವದ ಲೋಗೋವನ್ನು ನಟ ಉಪೇಂದ್ರ ಇತ್ತೀಚೆಗೆ ಅಧಿಕೃತವಾಗಿ ಅನಾವರಣಗೊಳಿಸಿದ್ದಾರೆ.
‘ಮಹಿಳೆಯರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಈ ಕ್ರೀಡಾ ಮಹೋತ್ಸವದ ಪ್ರಮುಖ ಉದ್ದೇಶ ಮಹಿಳಾ ಸಬಲಿಕರಣವನ್ನು ಉತ್ತೇಜಿಸುವುದು ಹಾಗೂ ಮಹಿಳೆಯರ ಸಾಮರ್ಥ್ಯಕ್ಕೆ ಸಮಾನ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ರೂಪುಗೊಂಡಿದೆ. ಈ ಕ್ರೀಡೋತ್ಸವದಲ್ಲಿ ನಟಿಯರು, ಮಾಧ್ಯಮ ವೃತ್ತಿಪರರು, ಮಾಡೆಲ್‌ಗಳು, ಇನ್‌ಫ್ಲೂಯೆನ್ಸರ್‌ಗಳು ಮತ್ತು ವಿವಿಧ ರಿಯಾಲಿಟಿ ಶೋಗಳ ಮಹಿಳಾ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಮುಖ್ಯ ಸಂಘಟಕರಾಗಿ ದಿವ್ಯ ಉರುಡುಗ, ನಿಕಿತಾ ಸ್ವಾಮಿ ಮತ್ತು ಮಂಜುನಾಥ ರಾಧಾಕೃಷ್ಣ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಗಶ್ರೀ ಬಿ.ಜಿ, ಕಾವ್ಯಾ ಆರ್ ಹಾಗೂ ಗೌರವ್ ಉಪ ಸಂಘಟಕರಾಗಿದ್ದಾರೆ.