ಟಾಕ್ಸಿಕ್ ಸಿನಿಮಾ ಬಿಡುಗಡೆಗೂ ಮುನ್ನವೇ ಮುಡಿ ಕೊಟ್ರಾ ನಯನತಾರಾ? ವೈರಲ್ ಫೋಟೋ ಹಿಂದಿನ ಅಸಲಿಯತ್ತೇನು? Nayanthara
- ದೇವಸ್ಥಾನದ ಹೊರಗೆ ಬೋಳು ತಲೆಯಲ್ಲಿ ನಟಿ ನಯನತಾರಾ ಕಾಣಿಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್
- ವೈರಲ್ ಆಗಿರುವ ಬೋಳು ತಲೆಯ ಫೋಟೋಗಳು ಅಸಲಿಯಲ್ಲ ಬದಲಿಗೆ ಕೃತಕ ಬುದ್ಧಿಮತ್ತೆ ಎಐ ಸಹಾಯದಿಂದ ಸೃಷ್ಟಿಸಿದ ನಕಲಿ ಚಿತ್ರಗಳು
- ತಿರುಮಲ ದೇವಸ್ಥಾನಕ್ಕೆ ನಟಿ ಭೇಟಿ ನೀಡಿದ್ದ ಹಳೆಯ ಫೋಟೋಗಳನ್ನು ಬಳಸಿ ಕಿಡಿಗೇಡಿಗಳು ಈ ನಕಲಿ ಫೋಟೋಗಳನ್ನು ಕ್ರಿಯೇಟ್ ಮಾಡಿದ್ದಾರೆ
- ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾದಲ್ಲಿ ನಯನತಾರಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು ಚಿತ್ರವು ಆಗಸ್ಟ್ 26 ರಂದು ಬಿಡುಗಡೆಯಾಗಲಿದೆ
ಚೆನ್ನೈ: ದಕ್ಷಿಣ ಭಾರತದ ಸ್ಟಾರ್ ನಟಿ ನಯನತಾರಾ ( Nayanthara ) ಅವರು ದೇವಸ್ಥಾನದ ಹೊರಗೆ ಬೋಳು ತಲೆಯಲ್ಲಿ ಕಾಣಿಸಿಕೊಂಡಿರುವ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಟಾಕ್ಸಿಕ್ ಸಿನಿಮಾದ ಬಿಡುಗಡೆಗೂ ಮುನ್ನವೇ ನಟಿ ಮುಡಿ ಕೊಟ್ಟಿದ್ದಾರೆ ಎಂಬ ಅಡಿಬರಹದೊಂದಿಗೆ ಫೋಟೋಗಳನ್ನು ವೈರಲ್ ಮಾಡಲಾಗಿದೆ. ಆದರೆ, ಈ ಫೋಟೋಗಳ ಹಿಂದಿನ ಅಸಲಿಯತ್ತೇ ಬೇರೆ ಇದೆ.
ವಾಸ್ತವ ಏನೆಂದರೆ, ವೈರಲ್ ಆಗಿರುವ ಫೋಟೋಗಳು ಅಸಲಿಯಲ್ಲ, ಬದಲಿಗೆ ಕೃತಕ ಬುದ್ಧಿಮತ್ತೆ ಸಹಾಯದಿಂದ ಕ್ರಿಯೇಟ್ ಮಾಡಿರುವ ನಕಲಿ ಚಿತ್ರಗಳಾಗಿವೆ. ಕೆಲ ಕಿಡಿಗೇಡಿಗಳು ಎಐ ಮೂಲಕ ಎಡಿಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಇನ್ನೂ ನಯನತಾರಾ ಅವರ ಬೋಳು ತಲೆಯ ಚಿತ್ರಗಳ ಬಗ್ಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ಗಳನ್ನು ಮಾಡಿದ್ದಾರೆ. ಫೋಟೋ ಏನೋ ಚೆನ್ನಾಗಿದೆ ಆದರೆ, ಮುಂದಿನ ಬಾರಿ ದಯವಿಟ್ಟು AI ವಾಟರ್‌ಮಾರ್ಕ್ ತೆಗೆದುಹಾಕಿ ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಡಿದರ, "ಖಂಡಿತವಾಗಿಯೂ ಇದು AI ನಿಂದ ಸೃಷ್ಟಿಸಲ್ಪಟ್ಟಿದ್ದು, ನಾಯಕಿಯರು ಯಾವುದಕ್ಕೂ ತಲೆ ಬೋಳಿಸಿಕೊಳ್ಳುವುದಿಲ್ಲ ಎಂದು ಮತ್ತೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ, ಈ ವೈರಲ್ ಚಿತ್ರಗಳು ಕಳೆದ ಏಪ್ರಿಲ್‌ನಲ್ಲಿ ನಯನತಾರಾ ಅವರು ತಮ್ಮ ಪತಿ ವಿಘ್ನೇಶ್ ಶಿವನ್ ಅವರೊಂದಿಗೆ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದ ಫೋಟೋಗಳನ್ನು ಆಧರಿಸಿ ಕೃತಕ ಬುದ್ಧಿಮತ್ತೆಯ (AI) ಮೂಲಕ ಸೃಷ್ಟಿಸಲಾದ ನಕಲಿ ಚಿತ್ರಗಳಾಗಿವೆ.
ಟಾಕ್ಸಿಕ್ ಸಿನಿಮಾ ವಿಚಾರಕ್ಕೆ ಬರುವುದಾದರೆ, ಯಶ್, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಷಿ ಮತ್ತು ರುಕ್ಮಿಣಿ ವಸಂತ್ ಮುಂತಾದ ತಾರೆಯರು ನಟಿಸುತ್ತಿರುವ ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದಲ್ಲಿ ನಯನತಾರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡದಲ್ಲಿ ನಿರ್ಮಾಣವಾಗಿರುವ ಈ ಚಿತ್ರವು ವಿವಿಧ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಗೊಳ್ಳಲಿದ್ದು, 2026ರ ಆಗಸ್ಟ್ 26ರಂದು ತೆರೆಕಾಣಲು ಸಜ್ಜಾಗಿದೆ.
ಸಾಮಾನ್ಯವಾಗಿ ತಮ್ಮ ಸಿನಿಮಾಗಳ ಪ್ರಚಾರ ಕಾರ್ಯಕ್ರಮಗಳಿಂದ ದೂರ ಉಳಿಯುವ ನಯನತಾರಾ, 'ಟಾಕ್ಸಿಕ್' ಚಿತ್ರದ ವಿಚಾರದಲ್ಲಿ ಆ ನಿಯಮವನ್ನು ಬದಲಿಸಿ ಬೆಂಗಳೂರಿನಲ್ಲಿ ನಡೆದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಯಶ್ ಅವರು ಸ್ವತಃ ತಮಗೆ ಕರೆ ಮಾಡಿ ಆಹ್ವಾನಿಸಿದ್ದರಿಂದ ನಾನು ಟ್ರೈಲರ್ ಲಾಂಚ್‌ಗೆ ಬಂದಿರುವುದಾಗಿ ನಟಿ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದರು.
'ಟಾಕ್ಸಿಕ್' ಚಿತ್ರದ ಜೊತೆಗೆ ನಯನತಾರಾ ಅವರ ಕೈಯಲ್ಲಿ 'ಹಾಯ್', 'ಮೂಕುತಿ ಅಮ್ಮನ್ 2, 'ಮಣ್ಣಂಗಟ್ಟಿ ಸಿನ್ಸ್ 1960', 'ಡಿಯರ್ ಸ್ಟೂಡೆಂಟ್ಸ್', 'ರಕ್ಕಾಯಿ' ಮತ್ತು 'SVC63' ಮುಂತಾದ ಸಿನಿಮಾಗಳಿವೆ. ವಿಶೇಷವಾಗಿ 'ಜವಾನ್' ಬಳಿಕ ಸಲ್ಮಾನ್ ಖಾನ್ ಜೊತೆ ನಟಿಸುತ್ತಿರುವ 'SVC63' ಅವರ ಎರಡನೇ ಹಿಂದಿ ಸಿನಿಮಾವಾಗಿದ್ದು, ವಂಶಿ ಪೈಡಿಪಲ್ಲಿ ನಿರ್ದೇಶನದ ಈ ಚಿತ್ರವು ಮುಂದಿನ ವರ್ಷದ ಈದ್ ಹಬ್ಬದಂದು ಬಿಡುಗಡೆಯಾಗಲಿದೆ, (ಏಜೆನ್ಸೀಸ್).