ಸ್ಯಾಂಡಲ್‌ವುಡ್

"ಡೆವಿಲ್" ಬ್ಯೂಟಿ ಶರ್ಮಿಳಾ ಮಾಂಡ್ರೆ! Sharmila Mandre

Sharmila Mandre: ಕನ್ನಡದ ಖ್ಯಾತ ನಟಿ ಶರ್ಮಿಳಾ ಮಾಂಡ್ರೆ, 2007ರಲ್ಲಿ ಧ್ಯಾನ್ ಜೊತೆ ಸಜನಿ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಅದೇ ವರ್ಷ ಗಣೇಶ್ ಜೊತೆಗಿನ ಕೃಷ್ಣ ಚಿತ್ರದಿಂದ ದೊಡ್ಡ ಯಶಸ್ಸು ಪಡೆದರು. ನಂತರ ನವಗ್ರಹ (2008), ವೆಂಕಟ ಇನ್ ಸಂಕಟ (2009), ಸ್ವಯಂವರ (2010), ಮುಮ್ತಾಜ್ (2015), ಆಕೆ (2017), ಗಾಳಿಪಟ 2 (2022), ಪೌಡರ್ (2024), ಡೆವಿಲ್​ (2025) ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಶರ್ಮಿಳಾ, ತಮಿಳು ಚಿತ್ರರಂಗದ ಖ್ಯಾತ ಯುವ ನಿರ್ಮಾಪಕ ಸುಧನ್ ಸುಂದರಂ ಜೊತೆ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ನಟಿ ಕೆಲ ಇನ್​ಸ್ಟಾಗ್ರಾಮ್​ನಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದು, ವೈರಲ್​ ಆಗುತ್ತಿವೆ.

ವಿಜಯವಾಣಿ ಸುದ್ದಿ ಜಾಲ