Chikkanna Marriage With Pavana Wedding In Mysore Attended By Sandalwood Celebrities 
ಸ್ಯಾಂಡಲ್‌ವುಡ್

ಪಾವನಾ ಕೊರಳಿಗೆ ತಾಳಿ ಕಟ್ಟಿದ 'ಲಕ್ಷ್ಮೀಪುತ್ರ'; ಮಾಂಗಲ್ಯಧಾರಣೆ ವೇಳೆ ನಾಚಿ ನೀರಾದ ಚಿಕ್ಕು..Chikkanna Marriage

Chikkanna Marriage With Pavana Wedding In Mysore: 

ಕಿರಾತಕ ಸಿನಿಮಾ ಮೂಲಕ ಬೆಳ್ಳಿ ತೆರೆ ಮೇಲೆ ಮಿಂಚಿದ್ದ ಕಾಮಿಡಿ ನಟ ಚಿಕ್ಕಣ್ಣ  ಪಾವನಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಕುಟುಂಬದವರು ಸ್ನೇಹಿತರು ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಪಾವನಾರ ಕೈ ಹಿಡಿದಿದ್ದಾರೆ.

ನಾಚಿ ನೀರಾದ ಚಿಕ್ಕಣ್ಣ

ಬೆಳ್ಳಿಗ್ಗೆ 10.45ರಿಂದ  11.25ರವರೆಗೆ ಶುಭ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ಮಾಡಲಾಗಿದ್ದು, ಒಕ್ಕಲಿಗ ಸಂಪ್ರದಾಯದಂತೆ  ಚಿಕ್ಕಣ್ಣ ಮತ್ತು ಪಾವನಾ ಸಪ್ತಪದಿ ತುಳಿದಿದ್ದಾರೆ. ತಾಳಿ ಕಟ್ಟುವಾಗ ಎಲ್ಲಡೆಯಿಂದ ಬರುತ್ತಿದ್ದ ಹರ್ಷೋದ್ಘಾರಕ್ಕೆ  ಚಿಕ್ಕಣ್ಣ ನಾಚಿ ನೀರಾಗಿರುವ ದೃಶ್ಯಗಳು ಸದ್ಯ ಎಲ್ಲರ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಹೇಗಿದ್ರು ನವ ಜೋಡಿ?

 ಮದುವೆಗೆ  ಚಿಕ್ಕಣ್ಣ ಸ್ಫಟಿಕ ಮಣಿಗಳಿಂದ ಸುತ್ತಲೂ ನಿರ್ಮಿಸಲಾದ ಪೇಟ, ಪೈಜಾಮಾ, ಶರ್ಟ್​ ಧರಿಸಿಮಿಂಚುತ್ತಿದ್ದರೆ. ಅವರ ಪತ್ನಿ ರೇಷ್ಮೆ ಬಣ್ಣದ ಸೀರೆಯುಟ್ಟು, ಅದಕ್ಕೆ ತಕ್ಕಂತೆ ಜುಮುಕಿ, ಹೆಣೆದ ಜಡೆ, ಮಲ್ಲಿಗೆ ಹೂಗಳಿಂದ ಕಂಗೊಳಿಸುತ್ತಿದ್ದರು.
ಚಂದನವನದ ನಟ ಚಿಕ್ಕಣ್ಣ ಅವರ ಮದುವೆ ಸಮಾರಂಭಕ್ಕೆ ಚಿತ್ರರಂಗದ ಸೆಲೆಬ್ರಿಟಿಗಳು, ರಾಜಕೀಯ ಕ್ಷೇತ್ರದ ಗಣ್ಯರು  ಆಗಮಿಸುತ್ತಿದ್ದ ಹಿನ್ನೆಲೆ, ಕಲ್ಯಾಣ ಮಂಟಪದ ಸುತ್ತಮುತ್ತಲೂ ಬಿಗಿ ಭದ್ರತೆ ಒದಗಿಸಲಾಗಿತ್ತು. 

ಆರಕ್ಷತೆಗೆ ನಟರ ದಂಡೇ ಆಗಮನ

ಆ.29ರಂದು ನಡೆದ ಆರಕ್ಷತೆ ಕಾರ್ಯಕ್ರಮದಲ್ಲಿ ಚಿಕ್ಕಣ್ಣ ಬ್ಲೂ ಸೂಟ್​ ಧರಿಸಿದ್ದರೆ, ಪಾವನಾ ಅವರು ಧರಿಸಿದ್ದ ಬ್ಲೂ   ಲೆಹಂಗಾ ಅವರ ಅಂದವನ್ನು ಹೆಚ್ಚಿಸಿತ್ತು. ಇಬ್ಬರು ರೊಮ್ಯಾಂಟಿಕ್​ ಆಗಿ ಮಾಡಿಸಿಕೊಂಡಿದ್ದ ಫೋಟೋ ಶೂಟ್​ಗಳು ಸೋಶಿಯಲ್​  ಮೀಡಿಯಾದಲ್ಲಿ ಹರಿದಾಡುತ್ತಿದೆ. ನಿನ್ನೆ ನಡೆದ ಆರಕ್ಷತೆಗೆ  ಮಂಡ್ಯ ರಮೇಶ್​, ಶ್ರೀ ಮುರುಳಿ,  ನಟ ಡಾಲಿ ಧನಂಜಯ್, ನಿರ್ದೇಶಕ ಎ.ಪಿ. ಅರ್ಜುನ್ ಸೇರಿದಂತೆ ಹಲವರು ಆಗಮಿಸಿದ್ದರು.

ಚಿಕ್ಕಣ್ಣ ಸಿನಿ ಜರ್ನಿ

ಕಿರಾತಕ ಸಿನಿಮಾ ಮೂಲಕ ಸಿನಿಮಾರಂಗ್ಗೆ ಕಾಲಿಟ್ಟ ಚಿಕ್ಕಣ್ಣ, ರಾಜಾಹುಲಿ, ಅಧ್ಯಕ್ಷ, ರಾಜ್​-ವಿಷ್ಣು,ಉಪಾಧ್ಯಕ್ಷ, ಛೂ ಮಂತರ್​,  ಮಾರ್ಟಿನ್​, ಜೇಮ್ಸ್, ರಾಬರ್ಟ್, ಮದಗಜ, ದಂತಕತೆ, ಫಾರೆಸ್ಟ್, ಮಾಯಾ ನಗರಿ, ರಾಜಮಾರ್ತಾಂಡ, ರಾಬರ್ಟ್​​, ಕೃಷ್ಣ ಟಾಕೀಸ್, ಪೊಗರು, ಬಿಲ್​ ಗೇಟ್ಸ್, ಸೀತಾರಾಮ ಕಲ್ಯಾಣ, ನೆ ಮಾರಾಟಕ್ಕಿದೆ, ಒಡೆಯ, ಕಿಸ್​ ಸೇರಿಂದತೆ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ.