- ಬಿಲ್ಲ ರಂಗ ಭಾಷಾ ಚಿತ್ರದ ಪೋಸ್ಟರ್ ರಿಲೀಸ್
- ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನ ಮಾಡುತ್ತಿರುವ ಸಿನಿಮಾ
- ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ನಿರ್ದೇಶಕ ಅನೂಪ್ ಭಂಡಾರಿ ಅವರಿಂದ ಪೋಸ್ಟರ್ ರಿಲೀಸ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜನ್ಮದಿನದ ಪ್ರಯುಕ್ತ 'ಬಿಲ್ಲ ರಂಗ ಬಾಷಾ' ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಪೋಸ್ಟರ್‌ನಲ್ಲಿ ಕಿಚ್ಚ ಸುದೀಪ್ ಅವರು ಹಿಂದೆಂದೂ ಕಾಣಿಸಿಕೊಂಡಿರದ ರೀತಿಯಲ್ಲಿ ಮಿಂಚಿದ್ದಾರೆ. ಸುದೀಪ್ ಅವರ 53ನೇ ಜನ್ಮದಿನದ ಸಂದರ್ಭದಲ್ಲಿ’ಬಿಲ್ಲ ರಂಗ ಬಾಷಾ’ ಸಿನಿಮಾದ ಭರ್ಜರಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.
ಇದೇ ಪೋಸ್ಟರ್‌ನಲ್ಲಿ ಹಿಮಚ್ಛಾದಿತ ಪ್ರದೇಶ ಇದೆ. ಇಲ್ಲಿ ಸುದೀಪ್ ಬೈಕ್ ಏರಿದ್ದಾರೆ. ಅಷ್ಟೆ ವೇಗವಾಗಿಯೇ ಹೊರಟ್ಟಿದ್ದಾರೆ. ಕಿಚ್ಚ ಸುದೀಪ್ ಹೊಸ ಲುಕ್ ಅಭಿಮಾನಿಗಳ ಹುಬ್ಬೇರಿಸಿದೆ. ಬ್ಲಾಕ್‌ಬಸ್ಟರ್ 'ವಿಕ್ರಾಂತ್ ರೋಣ' ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಸುದೀಪ್ ಮತ್ತು ನಿರ್ದೇಶಕ ಅನೂಪ್ ಭಂಡಾರಿ ಮತ್ತೆ ಈ ಚಿತ್ರಕ್ಕಾಗಿ ಕೈಜೋಡಿಸಿದ್ದಾರೆ.
ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದ್ದು, ಈ ಬಿಗ್ ಬಜೆಟ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಮುಂದಿನ ವರ್ಷ (2027) ಅದ್ಧೂರಿಯಾಗಿ ತರರೆಗಪ್ಪಳಿಸಲಿದೆ. ತೆಲುಗಿನ ಪ್ಯಾನ್-ಇಂಡಿಯಾ ಹಿಟ್ ಸಿನಿಮಾ 'ಹನುಮಾನ್' ಖ್ಯಾತಿಯ ಕೆ. ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ಈ ಬಿಗ್ ಬಜೆಟ್ ಸಿನಿಮಾವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. 2027ರ ಮಾರ್ಚ್ ಒಳಗೆ ಟೀಸರ್ ಬಿಡುಗಡೆ ಆಗಲಿದ್ದು, 2027ರ ಜುಲೈ-ಸೆಪ್ಟೆಂಬರ್ ನಡುವೆ ಟ್ರೇಲರ್ & ಹಾಡುಗಳು ಅನಾವರಣಗೊಳ್ಳಲಿವೆ.
2027ರ ವರ್ಷಾಂತ್ಯದಲ್ಲಿ ವಿಶ್ವದಾದ್ಯಂತ ಅದ್ಧೂರಿಯಾಗಿ 'ಬಿಲ್ಲ ರಂಗ ಬಾಷಾ' ತೆರೆಗೆ ಬರಲಿದೆ. ಬಿಲ್ಲ ರಂಗ ಭಾಷಾ ಸಿನಿಮಾ ಚಿತ್ರೀಕರಣದ ಜೊತೆಯಲ್ಲಿ ಸುದೀಪ್, ಈ ಬಾರಿಯ ಬಿಗ್‌ಬಾಸ್ ಕನ್ನಡ ಸೀಸನ್ 13 ರಿಯಾಲಿಟಿ ಶೋ ನಿರೂಪಣೆ ಮಾಡಲಿದ್ದಾರೆ. ಇದೇ ಸೆಪ್ಟೆಂಬರ್ 6ರಿಂದ ಬಿಗ್‌ಬಾಸ್ ಶೋ ಆರಂಭಗೊಳ್ಳಲಿದೆ.