bigg boss kannada13 soundarya shetty vs asia firdos fight far task: 
ಸ್ಯಾಂಡಲ್‌ವುಡ್

ಕೊನೆಗೂ ಕಣಕ್ಕಿಳಿದ​​ ಸೌಂದರ್ಯ ಶೆಟ್ಟಿ; ಬಿಗ್​ಬಾಸ್ ಕೊಟ್ಟ ಟಾಸ್ಕ್​ ವಿಚಾರಕ್ಕೆಆಸಿಯಾ ಜೊತೆ ನಾನಾ-ನೀನಾ ಜಗಳ, ಗೆಲ್ಲೋದ್ಯಾರು?

ಪ್ರಮುಖ ಮುಖ್ಯಾಂಶಗಳು

  • ಟಾಸ್ಕ್​ ಆಡುವ ವಿಚಾರಕ್ಕೆ ಸೌಂದರ್ಯ ಮತ್ತು ಆಸಿಯಾ ನಡುವೆ ನಾನಾ ನೀನಾ? ಫೈಟ್​​.
  • ಬಿಗ್​ಬಾಸ್​ ಮನೆಯಲ್ಲಿ ಕೊನೆಗೂ ಕಣಕ್ಕಿಳಿದ ಸೌಂದರ್ಯಾ ಶೆಟ್ಟಿ ಅಸಲಿ ಆಟ ಶುರು.
  • ಆಸಿಯಾ ಫಿರ್ದೋಸ್​​​ರನ್ನು ವ್ಯಂಗ್ಯ ಮಾಡಿದ ಪ್ರೋಮೋ ರಿಲೀಸ್.
bigg boss kannada13 soundarya shetty vs asia firdos fight far task: ಸ್ಪಿಟ್​ ಸ್ವಿಲ್ಲಾದಲ್ಲಿ ತಮ್ಮದೇ ಆದ ವಿಚಿತ್ರ ಆಕ್ಟಿಂಗ್, ವ್ಯಂಗ್ಯ ಭಾವದ​ ಮೂಲಕ ಮನರಂಜನೆ ಕೊಟ್ಟಿದ್ದ ಸೌಂದರ್ಯಾ ಶೆಟ್ಟಿ ಬಿಗ್​ಬಾಸ್ ಕನ್ನಡದಲ್ಲಿ ಕಳೆದು ಹೋದ್ರಾ. ಯಾವುದೇ ವಿಚಾರವಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿದ್ದರು. ಆದರೆ ಇಂದು ರಿಲೀಸ್​ ಆದ ಪ್ರೋಮೋ ಭಾರಿ ವೈರಲ್ ಆಗ್ತಿದೆ. ಏಕೆಂದರೆ ಸೌಂದರ್ಯಾ ಶೆಟ್ಟಿ ಕಣಕ್ಕಿಳಿದಿದ್ದಾರೆ. ಆಸಿಯಾ ಫಿರ್ದೋಸ್‌ ಜೊತೆಗೆ ಸೌಂದರ್ಯ ವಾಗ್ವಾದ ಮಾಡಿರುವದು, ಜೊತೆಗೆ ಟಾಸ್ಕ್ ಕೊಡಿ ಎಂದು ಅಳುತ್ತಿರುವಂತೆ ವ್ಯಂಗ್ಯ ಮಾಡಿರುವುದು ವೈರಲ್ ಆಗಿದೆ.

ನಾನಾ-ನೀನಾ?

ಈಗಾಗಲೇ ಬಿಗ್​ಬಾಸ್​ ಮನೆಯಲ್ಲಿ ಕಾಮನ್​ ಮ್ಯಾನ್​ ಹಾಗೂ ಸೆಲಬ್ರೆಟಿಗಳ ಮಧ್ಯೆ ಜಟಾಪಟಿ ನಡೆಯುತ್ತಿದೆ. ಅಲ್ಲದೇ ಎಲ್ಲ ವಿಚಾರಕ್ಕೂ ಕಿತ್ತಾಟ ಶುರುವಾಗ್ತಿದೆ. ಬಿಗ್​ಬಾಸ್ ಇಲ್ಲಿಯವರೆಗೂ ಕೊಟ್ಟ ಎರಡು ಟಾಸ್ಕ್‌ಗಳ ಪೈಕಿ ಒಂದನ್ನು ಮನೆಯ ಸದಸ್ಯರು, ಮತ್ತೊಂದನ್ನು ವಿಮಾನದ ಪ್ರಯಾಣಿಕರು ಗೆದ್ದಿದ್ದಾರೆ. ಈಗ ಮೂರನೇ ಟಾಸ್ಕ್ ನೀಡಲಾಗಿದೆ. ಎರಡೂ ತಂಡಗಳಿಂದ ತಲಾ ಮೂವರು ಸ್ಪರ್ಧಿಗಳಾಡಬೇಕು. ಇದೀಗ ಆಟ ಯಾರು ಆಡಬೇಕು ಎನ್ನುವ ವಿಚಾರಕ್ಕೆ ಆಸಿಯಾ ಮತ್ತು ಸೌಂದರ್ಯ ನಡುವೆ ಕಿತ್ತಾಟ ಶುರುವಾಗಿರುವುದು ಪ್ರೋಮೋದಲ್ಲಿ ಇದೆ.
ಬಿಗ್​ಬಾಸ್ ಟಾಸ್ಕ್​ ನೀಡುತ್ತಲೇ ಮುಂದಾದ ಆಸಿಯಾ ಅವರು ನಾನು ಈ ಹಿಂದೆ ಕೊಟ್ಟ ಎರಡು ಟಾಸ್ಕ್​​ ಅನ್ನು ಆಡಲೇ ಇಲ್ಲ. ಮೂರನೇ ಟಾಸ್ಕ್​ ಆದರೂ ಆಡಬೇಕು ಎಂದರು. ಇದಕ್ಕೆ ಹ್ಯಾ....ಎಂದು ರಾಗ ಎಳೆದ ಸೌಂದರ್ಯಾ ಶೆಟ್ಟಿ ನಾನು ಸಹ ಯಾವ ಟಾಸ್ಕ್​ ಆಡಲಿಲ್ಲ. ಈ ಟಾಸ್ಕ್​ ನಾನು ಆಡ್ತಿನಿ ಎಂದು ಕ್ಯಾತೆ ತೆಗೆಯುತ್ತಾರೆ.

ಸೌಂದರ್ಯಾ ಶೆಟ್ಟಿ ರಾಕಿಂಗ್

ಕಳೆದ ಟಾಸ್ಕ್​ ನಾನು ಬಿಟ್ಕೊಟ್ಟಿಲ್ವಾ ಎಂದು ಸೌಂದರ್ಯಾ ಹೇಳುತ್ತಾರೆ. ಹಾಗಾದ್ರೆ ನಾನು ಬಿಡಲ್ಲ ಎಂದು ಆಸಿಯಾ ಹೇಳುತ್ತಾರೆ. ನಂಗೆ ಟಾಸ್ಕ್​ ಕೊಡಿ ಎಂದು ವ್ಯಂಗ್ಯವಾಗಿ ಅಳುವಂತೆ ಸೌಂದರ್ಯಾ ಕ್ಯಾಮೆರಾ ಮುಂದೆ ನಿಂತಿದ್ದಾರೆ. ನಂಗೆ ಟಾಸ್ಕ್​ ಕೊಡಿ ಬಿಗ್​ಬಾಸ್ ಎಂದು ಅಳುತ್ತಿರುವಂತೆ ನಾಟಕವಾಡಿದ್ದಾರೆ. ಅವರ ಈ ನಡವಳಿಕೆ ಕಂಡ ಬಿಗ್​ಬಾಸ್ ವೀಕ್ಷಕರು ಸ್ಯಾಂಡಿ ರಾಕಿಂಗ್​, ಸೌಂದರ್ಯ ಕಣಕ್ಕಿಳಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಯಾರಿಗೆ ಟಾಸ್ಕ್?

ಕೊನೆಗೆ ಟಾಸ್ಕ್​ ಆಡೋದು ಯಾರು, ಆಸಿಯಾ ಮತ್ತು ಸೌಂದರ್ಯಾ ಇಬ್ಬರಲ್ಲಿ ಯಾರು ಸೋಲುತ್ತಾರೆ ಎನ್ನುವುದು ಇಂದು ತಿಳಿಯಲಿದೆ. ಬಿರುಗಾಳಿಯಾಗಿ ಆಸಿಯಾ ಇದ್ದರೆ, ಸುಂಟರಗಾಳಿಯಂತೆ ಸೌಂದರ್ಯ ಇದ್ದಾರೆ. ಅಂತಿಮವಾಗಿ ಇಬ್ಬರ ಜಗಳ ಮೂರನೇ ವ್ಯಕ್ತಿಗೆ ಲಾಭಾನಾ? ಎಂಬುವುದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಗಗನ್ ವಿರುದ್ಧ ನಾನಾ ಮಾತು

ಗಗನ್​ ಚಿನ್ನಪ್ಪ ಬಗ್ಗೆ ಪ್ರೇಕ್ಷಕರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಸೀರಿಯಲ್​ನಲ್ಲಿ ನಟಿಸಿದಂತೆ ಈ ವ್ಯಕ್ತಿ ಇಲ್ಲ ಗೌರವ ಪಡ್ಕೊತಾರೆ ಆದರೆ ಕೊಡೋದಕ್ಕೆ ಬರೋದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಅವರ ಉಸ್ತುವಾರಿ ಚೆನ್ನಾಗಿತ್ತು ಎನ್ನುತ್ತಿದ್ದಾರೆ. ನಿನ್ನೆಯ ಎಪಿಸೋಡ್‌ನಲ್ಲಿ ಜಗದೀಶ್ ನಾಮಿನೇಷನ್‌ನಿಂದ ಸೇಫ್​ ಆದ್ರೆ ಧನುಷ್​​​​​ ಫ್ಲೈಟ್​​ನಲ್ಲೇ ಉಳಿದುಕೊಳ್ಳುವ ಸ್ಥಿತಿ ಬಂದಿದೆ. ಅಲ್ಲದೇ ಕಾಮನ್​ ಮ್ಯಾನ್​ಗಳನ್ನು ಸೆಲಬ್ರೆಟಿಗಳು ಟಾರ್ಗೆಟ್ ಮಾಡ್ತಿದ್ದಾರೆ ಎನ್ನುವ ಕ್ಯಾತೆಯನ್ನು ಧನುಷ್ ತೆಗೆದಿದ್ರು


ಎಕ್ಸ್​ನಲ್ಲಿ ನೆಟ್ಟಿಗರು ಕಿಡಿ

ತೆಲುಗು, ತಮಿಳು ಬಿಗ್​ಬಾಸ್ ನೋಡಿ ಅವರೆಷ್ಟು ಎಂಟರ್​ಟೇನ್ ಮಾಡ್ತಿದ್ದಾರೆ, ನೀವು ನೋಡಿದ್ರೆ ಇನ್ನೂ ಅವರನ್ನು ಫ್ಲೈಟ್​ನಲ್ಲೇ ಇಟ್ಟಿದ್ದೀರಿ ಎಂದು ಕಿಡಿಕಾರಿದ್ದಾರೆ. ಸ್ಯಾಂಡಿ ಕೊನೆಗೂ ಸ್ಲೋ ಆಗಿ ನಾಗವಲ್ಲಿ ಆಗ್ತಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ, (ಏಜೆನ್ಸೀಸ್)