Kiccha Sudeep burst into fits of laughter watching the way Kiran did push-ups: 
ಸ್ಯಾಂಡಲ್‌ವುಡ್

ಜಗ್ಗ ಮಮ್ಮಿಗೆ ಹೋಗೆ, ಬಾರೆಯೆಂದ ತಾಂಡವ್​ ರಾಮ್​ಗೆ ಕಿಚ್ಚನ ಕ್ಲಾಸ್; ಕಿರಣ್ ಶಾಸ್ತ್ರಿ ಡಿಪ್ಸ್ ಹೊಡೆಯೋ ಸ್ಟೈಲ್​ ಕಂಡು​​ ನಗುವೋ ನಗು..BBK13

Kiccha Sudeep burst into fits of laughter watching the way Kiran did push-ups:ವಾರದ ಕತೆ ಕಿಚ್ಚನ ಜೊತೆ ನಿನ್ನೆ ನಡೆದ ಎಪಿಸೋಡ್​ನಲ್ಲಿ ಸುದೀಪ್​​ ಗಗನ್​ ಚಿನ್ನಪ್ಪ ಹಾಗೂ ತಾಂಡವ್​ ರಾಮ್​ಗೆ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡರು. ಜಗದೀಶ್​ಗೆ ಹೋಗೆ, ಬಾರೆ, ಬಂದ್ಲು ನೋಡು ಎಂದು ಕರೆದದ್ದಕ್ಕೆ ಹಾಗೂ ತಮ್ಮ ಅನುಕೂಲಕ್ಕೆ ತಕ್ಕಂತೆ ವಿಐಪಿ ನಿಯಮ ಬದಲಾಯಿಸಿಕೊಂಡಿದ್ದಕ್ಕೆ ಗಗನ್​ ಚಿನ್ನಪ್ಪ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಮಧ್ಯೆ ಇಂದು ಪ್ರೊಮೊ ಬಿಡುಗಡೆಯಾಗಿದ್ದು, ಕಿರಣ್​ ಶಾಸ್ತ್ರಿಯವರ ಪುಷಪ್ಸ್​​​ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿರುವುದು ಮನೆ ಮಂದಿಗೆಲ್ಲ ನಗು ತರಿಸುವಂತೆ ಮಾಡಿದೆ.

ವುಮೆನ್ ಕಾರ್ಡ್, ಕಾಮನ್​ ಮ್ಯಾನ್​ ಕಾರ್ಡ್ ಪ್ಲೇಮಾಡ್ಬೇಡಿ

ಶನಿವಾರದ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ ಕೊಂಚ ಖಾರವಾಗಿಯೇ ಇತ್ತು. ಹಲವು ವಿಚಾರದ ಬಗ್ಗೆ ಸುದೀಪ್​ ಅವರು ಕಿಡಿಕಾರಿದರು. ಕಾಮನ್​ ಮ್ಯಾನ್​ ಮತ್ತು ವುಮೆನ್​ ಕಾರ್ಡ್​​ ಪ್ಲೇ ಮಾಡುತ್ತಿರುವ ಬಗ್ಗೆ ಮಾತನಾಡಿದ ಅವರು, ಈ ಮನೆಯಲ್ಲಿ ಕಾಮನ್​ ಮ್ಯಾನ್​ಗಳದ್ದೇ ಒಂದು ಗುಂಪಾಗಿದೆ. ನಿಮ್ಮನ್ನು ಒಳಗೆ ಕಳುಹಿಸಿರುತ್ತಾರೆ ಎಂದರೆ, ಹೆಚ್ಚೇ ಟ್ರೈನ್ ಮಾಡಿರುತ್ತಾರೆ. ಮತ್ತೆ ಮನೆಯಲ್ಲಿ ವುಮೆನ್ ಕಾರ್ಡ್ ಪ್ಲೇ ಮಾಡೋದು ಬೇಡ ಅದನ್ನು ಜನರು ನೋಡುತ್ತಿರುತ್ತಾರೆ ಎಂದು ಹೇಳಿದರು.

ಕಿರಣ್​ ಡಿಪ್ಸ್​ ಹೊಡೆಯೋ ಸ್ಟೈಲ್​ಗೆ ನಗುವೋ ನಗು

ಇನ್ನು ಇಂದಿನ ಪ್ರೊಮೋದಲ್ಲಿ ಕಿರಣ್​ ಶಾಸ್ತ್ರಿ ಪುಷಪ್ಸ್​ ಬಗ್ಗೆ ಮಾತನಾಡಿ ಸ್ಪರ್ಧಿಗಳ ಮೊಗದಲ್ಲಿ ನಗು ತರಿಸಿದ್ದಾರೆ. ಕಿರಣ್ ಶಾಸ್ತ್ರಿ ಅವರೇ ಅದು ನೀವು ಯಾವ ರೀತಿಯ ಡಿಪ್ಸ್​ ಹೊಡೆದಿದ್ದು, ಅದನ್ನು ಹೇಳಿ ಕೊಟ್ಟಿದ್ದು ಯಾರು​​​ ಎಂದು ಕಾಲೆಳೆದಿದ್ದಾರೆ.
ಸರ್ ಅದನ್ನು ಯಾವುದೋ ಸಿನಿಮಾ ನೋಡಿ ಲಿಖಿತ್​ ಹೇಳಿಕೊಟ್ಟಿದ್ದು ಎಂದು ಉತ್ತರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಕೊಟ್ಟ ಕಿಚ್ಚ ನಾನೇ ನೋಡ್ದೆ ಇರುವ ಸಿನಿಮಾ ಯವುದದು ಎಂದು ಮನೆಮಂದಿಯನ್ನು ನಗೆಯಲ್ಲಿ ತೇಲಿಸಿದ್ದಾರೆ.

ಕಿಚ್ಚನ ಕ್ಲಾಸ್ ಹೇಗಿತ್ತು?

ಜಗದೀಶ್​ ಅವರೇ ನೀವು ಕಂಟೆಸ್ಟೆಂಟ್​ ಆಗಿ ಬಿಗ್​ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದೀರಿ. ಆದರೆ, ಯಾವುದೇ ರೀತಿ ಬೇರೆಯವರಿಗೆ ಕೆಲಸ ಮಾಡಿಕೊಡಬೇಡಿ. ತಾಂಡವ್​ ಅವರೇ ನೀವು ಜಗದೀಶ್​ ಅವರಿಗೆ ಬಂದ್ಲು, ಹೋಗೆ, ಬಾರೆ ಎನ್ನುವುದ್ಯಾಕೆ. ನನಗೆ ಅನಿಸುತ್ತೆ ಅವರಿಗೆ ನೀವು ಸಾರಿ ಕೇಳಬೇಕು ಎಂದು ಎನ್ನುತ್ತಾರೆ. ಇದಕ್ಕೆ ಸರ್ ತಮಾಷೆ ಮಾಡಿದೆ ಎಂದು ತಾಂಡವ್​ ಹೇಳುತ್ತಾರೆ. ಅದು ತಮಾಷೆನ ಅವರ ಕುಟುಂಬಸ್ಥರು ಈ ಶೋ ನೋಡುತ್ತಿರುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ನಿಮ್ಗಿಂತ ದೊಡ್ಡ ಕಲಾವಿದರಿದ್ದಾರೆ

ಸುದೀಪ್​ ಸರ್ ಇಲ್ಲಿ ನಿಮಗಿಂತ ದೊಡ್ಡ ಕಲಾವಿದರಿದ್ದಾರೆ. ನೀವೇನು ಅಲ್ಲವೇ ಅಲ್ಲ ಎಂದು ಡೈರೆಕ್ಟರ್ ಓಂ ಪ್ರಕಾಶ್ ರಾವ್​ ಅವರು ಹೇಳಿದ್ದಾರೆ. ಈ ವೇಳೆ ಮಾತನಾಡಿದ ಸುದೀಪ್​ ಅವರು ಅದು ನನಗೆ 12 ಎಪಿಸೋಡ್ಗಳಿಂದ ಗೊತ್ತಿದೆ ಸರ್. ಸದ್ಯ ಹುಚ್ಚ ಸಿನಿಮಾ ಮಾಡುವಾಗ ಇವರು ನಿಮಗೆ ಸಿಕ್ಕಿಲ್ಲ ಎಂದು ಸುದೀಪ್​ ವ್ಯಂಗ್ಯ ಮಾಡಿದರು. ಜೊತೆಗೆ ಓಂ ಪ್ರಕಾಶ್​ ರಾವ್​ ಅವರ ಅಬರ್ಸರ್​ವೇಶನ್​ ಬಗ್ಗೆ ಕೊಂಡಾಡಿದರು, (ಏಜೆನ್ಸೀಸ್).