ಬೆಂಗಳೂರು :
"ರಾಘು', "ಶೆಫ್ ಚಿದಂಬರ'ದಂತಹ ವಿಭಿನ್ನ ಕಥೆಗಳಿಗೆ ಆ್ಯಕ್ಷನ್-ಕಟ್ ಹೇಳಿದ್ದ ಆನಂದ್ ರಾಜ್ ಇದೀಗ ಹೊಸ ಕಥೆಯೊಂದಿಗೆ ವಾಪಸ್ಸಾಗಿದ್ದಾರೆ. ಹೆಸರು "ಕದ್ರಿ'. ಬಿಗ್ಬಾಸ್ ಕನ್ನಡ ಸೀಸನ್ 8, ಲಕ್ಷ್ಮೀ ಬಾರಮ್ಮ, ಅಗ್ನಿಸಾಕ್ಷಿ ಧಾರಾವಾಹಿಗಳ ಖ್ಯಾತಿಯ ಶಮಂತ್ (ಬ್ರೋ ಗೌಡ) ಈ ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದು, ಅವರಿಗೆ "ಕಂಗ್ರಾಜುಲೇಷನ್ಸ್ ಬ್ರದರ್' ನಟಿ ಅನುಷಾ ಆಂಜನಪ್ಪ ನಾಯಕಿಯಾಗಿದ್ದಾರೆ. ಇದು ಸ್ವಾತಂತ್ರ್ಯಪೂರ್ವ ನಡೆಯುವ ಜಾನಪದ ಹಿನ್ನೆಲೆಯ ಹಾರರ್ ಚಿತ್ರವಾಗಿದ್ದು, "ಕದ್ರಿ' ಶೀರ್ಷಿಕೆಗೆ "ಕಲ್ಪನೆಗೂ ಮೀರಿದ ಕತ್ತಲೆ, ಕಾಲದಿಂದ ಅಚ್ಚಳಿಯದೆ ಉಳಿದಿರುವ ಭಯ' ಎಂಬ ಕುತೂಹಲಕಾರಿ ಅಡಿಬರಹ ನೀಡಲಾಗಿದೆ. ಕಥೆ, ಚಿತ್ರಕಥೆ ಬರೆದು, ನಿರ್ದೇಶನದ ಜತೆಗೆ ಮೊದಲ ಬಾರಿಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿರುವ ಆನಂದ್ ರಾಜ್, "ಕದ್ರಿ ಪ್ರಾಂತ್ಯಕ್ಕೂ ಸಿನಿಮಾಗೂ ಸಂಬಂಧವಿಲ್ಲ. ಇಲ್ಲಿ ಕದ್ರಿ ನಾಯಕನ ಹೆಸರು. ಚಿತ್ರದಲ್ಲಿ ಶಿವನ ಅಂಶಗಳಿರುವ ಕಾರಣ ಆ ಹೆಸರಿಟ್ಟಿದ್ದೇವೆ. ಈಗಾಗಲೇ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಮುಗಿದಿದ್ದು, ಫಸ್ಟ್ ಪ್ರಿಂಟ್ ಕೂಡ ರೆಡಿಯಿದೆ. ಒಂದು ಪ್ರಾಂತ್ಯದಲ್ಲಿ ನಡೆಯುವ ಕಾಲ್ಪನಿಕ ಕಥೆಯಾದರೂ, ಎಲ್ಲ ಪ್ರಾಂತ್ಯಗಳಿಗೂ ಸಲ್ಲುವ ವಿಷಯಗಳಿವೆ. ಸ್ವಾತಂತ್ರ$್ಯಪೂರ್ವ ಕಥೆಯಾದ ಕಾರಣ ಬೆಂಗಳೂರು, ಮಂಡ್ಯದಲ್ಲಿ ಸೆಟ್ಗಳನ್ನು ನಿರ್ಮಿಸಿ ಚಿತ್ರೀಕರಿಸಿದ್ದೇವೆ. ಚಿತ್ರದಲ್ಲಿ ಫ್ಯಾಂಟಸಿ ಅಂಶಗಳಿವೆ, ಫ್ಲ್ಯಾಶ್ಬ್ಯಾಕ್ಗಳಿವೆ, ತಾಂತ್ರಿಕವಾಗಿ ಸಶಕ್ತವಾಗಿ ಮೂಡಿಬಂದಿದ್ದು, ಉತ್ತಮ ಥಿಯೇಟ್ರಿಕಲ್ ಅನುಭವ ನೀಡುವ ಸಿನಿಮಾ' ಎಂದು ಮಾಹಿತಿ ನೀಡುತ್ತಾರೆ. 2027ರ ಮಾರ್ಚ್ನಲ್ಲಿ ಮೊದಲು ಕನ್ನಡದಲ್ಲಿ ಸಿನಿಮಾ ತೆರೆಗೆ ಬರಲಿದ್ದು, ನಂತರ ಬೇರೆ ಭಾಷೆಗಳಲ್ಲಿ ಡಬ್ ಮಾಡುವ ಆಲೋಚನೆ ಚಿತ್ರತಂಡದ್ದು.
ಕನ್ನಡದಲ್ಲಿ ಹಾರರ್ ಕಾಮಿಡಿಗಳು ತುಂಬ ಬಂದಿವೆ. ಆದರೆ, ಔಟ್ ಆ್ಯಂಡ್ ಔಟ್ ಹಾರರ್ ಚಿತ್ರಗಳು ಕಡಿಮೆ. ಹೀಗಾಗಿ "ದುರ್ಗಾಶಕ್ತಿ', "ಶ್!' ಸಿನಿಮಾಗಳಂತೆ ಕಂಟೆಂಟ್ ಪ್ರಧಾನ ಕಂಪ್ಲೀಟ್ ಹಾರರ್ ಸಿನಿಮಾ ಮಾಡಬೇಕು ಅಂತ ಯೋಚಿಸುತ್ತಿರುವಾಗ ಹೊಳೆದ ಕಥೆಯಿದು.ಆನಂದ್ ರಾಜ್, ನಿರ್ದೇಶಕ