ನಿರ್ದೇಶನ: ಸಿದ್ದು ಪೂರ್ಣಚಂದ್ರ
ತಾರಾಗಣ: ಅದ್ವಿತಿ ಶೆಟ್ಟಿ, ಲೋಕೇಂದ್ರ ಸೂರ್ಯ, ಸಿದ್ದು, ಋತು ಚೈತ್ರ, ಬಲರಾಜವಾಡಿ ಮತ್ತಿತರರು.
ಹೆಣ್ಣಮಕ್ಕಳಿಗೆ ಮದುವೆ ಯಾವಾಗ? ಮಕ್ಕಳಾಗದ ಮಹಿಳೆಯರಿಗೆ ಮಗು ಯಾವಾಗ? ಒಂದೇ ಮಗುವಿದ್ದರೆ, ಇನ್ನೊಮ್ಮೆ ಗುಡ್ ನ್ಯೂಸ್ಯಾವಾಗ? ಹೀಗೆ ಹೇಗಿದ್ದರೂ? ಏನು ಮಾಡಿದರೂ? ಜನರ ಪ್ರಶ್ನೆಗಳಿಗೆ ಅಂತ್ಯವೇ ಇರುವುದಿಲ್ಲ. ಇನ್ನು ಮಗು ಆಗದ ದಂಪತಿ ನಾನಾ ಪ್ರಶ್ನೆಗಳನ್ನು ಎದುರಿಸಿ, ಮಾನಸಿಕ ಹಿಂಸೆ ಅನುಭವಿಸುತ್ತಾರೆ. ಹೀಗಾಗಿಯೇ ಬಾಡಿಗೆ ತಾಯಿಯ ಮೂಲಕ ಪಾಲಕರಾಗುವುದು ಇತ್ತೀಚೆಗೆ ಹೆಚ್ಚಾಗಿದೆ. ಅದನ್ನು ಕೆಲವರು ಮುಕ್ತವಾಗಿ ಹೇಳಿಕೊಂಡರೆ, ಕೆಲವರು ಗೌಪ್ಯವಾಗಿ ಇಟ್ಟಿರುತ್ತಾರೆ. ಇದೇ ವಿಷಯದ ಸುತ್ತ "ಬ್ರಹ್ಮಕಮಲ' ಸಾಗುತ್ತದೆ.
ಅಪೇಾ (ಅದ್ವಿತಿ) ಮತ್ತು ರಮಣ್ದು (ಸಿದ್ದು) ಲವ್ ಮ್ಯಾರೇಜ್. ಆದರೆ, ಮದುವೆಯಾಗಿ ಎಂಟು ವರ್ಷಗಳಾದರೂ ಆಕೆಗೆ ಮಕ್ಕಳಾಗುವುದಿಲ್ಲ. ಆದರೆ, ಮೊಮ್ಮಗು ಬೇಕು ಅಂತ ಅತ್ತೆ ಕಾಡುತ್ತಿರುತ್ತಾಳೆ. ಹೀಗಾಗಿ ಅಪೇಾ ಗಂಡನ ಮನೆ ತೊರೆಯುತ್ತಾಳೆ. ಕೆಲ ತಿಂಗಳಲ್ಲೇ ಆಕೆ ಗರ್ಭಿಣಿ ಅನ್ನೋ ವಿಷಯ ರಮಣ್ಗೆ ತಿಳಿಯುತ್ತದೆ. ಪತ್ನಿಯ ಸೀಮಂತಕ್ಕೆ ಅತಿಥಿಯಂತೆ ಬಂದು ಹಿಂದಿನ ಸಾಲಿನಲ್ಲಿ ಕುಳಿತು ಎದ್ದು ಹೋಗುವ ಪರಿಸ್ಥಿತಿ ಆತನದು. ಮತ್ತೊಂದೆಡೆ ವೆಲ್ಡಿಂಗ್ ಶಾಪ್ನಲ್ಲಿ ಕೆಲಸ ಮಾಡುವ ರವಿಚಂದ್ರ (ಲೋಕೇಂದ್ರ ಸೂರ್ಯ) ಮತ್ತು ಮೂಗಿ ಪತ್ನಿ ಗೌರಿ (ಋತು ಚೈತ್ರ) ಕಥೆ ತೆರೆದುಕೊಳ್ಳುತ್ತದೆ. ಗೌರಿಗೆ ಡೆಲಿವರಿ ನೋವು ಕಾಣಿಸಿಕೊಂಡು, ಆಸ್ಪತ್ರೆಗೆ ಕರೆದೊಯ್ಯುತ್ತಾನೆ. ಮೈತುಂಬ ಸಾಲ ಮಾಡಿಕೊಂಡಿರುವ ರವಿ, ಪತ್ನಿಗೆ ವಿಷಯ ತಿಳಿಸದೇ ಮಗುವನ್ನು ಅಪೇಾಗೆ ದತ್ತು ನೀಡಲು ಒಪ್ಪಿ ಹಣ ಪಡೆದಿರುತ್ತಾನೆ. ಔಷಧಿ ತರಲು ಆಸ್ಪತ್ರೆಯಿಂದ ಹೋಗುವ ಆತ ತುಂಬ ಹೊತ್ತಾದರೂ, ವಾಪಸ್ಸಾಗುವುದಿಲ್ಲ. ಆ ಸಮಯದಲ್ಲೇ ಆಸ್ಪತ್ರೆ ಹೊರಗೆ ಅಪಘಾತ ಸಂಭವಿಸಿ, ವಿಷಯ ಗೊತ್ತಾಗಿ, ರವಿಗೆ ಗಾಯವಾಗಿರಬಹುದು ಅಂತ ಆತಂಕದಲ್ಲಿ ತುಂಬು ಗರ್ಭಿಣಿ ಗೌರಿ ಯಾರಿಗೂ ಹೇಳದೇ ಕೇಳದೇ ಆಸ್ಪತ್ರೆಯಿಂದ ಹೊರಡುತ್ತಾಳೆ. ಹಾಗಾದರೆ, ರವಿ ಏನಾದ? ಗೌರಿ ಏನಾಗುತ್ತಾಳೆ? ಅಪೇಾಳ ಮಗುವಿನ ಅಪೇೆ ಈಡೇರುತ್ತದೆಯೇ? ಅಥವಾ ಆಕೆಯ ಗುಟ್ಟು ರಟ್ಟಾಗುತ್ತಾ? "ಬ್ರಹ್ಮಕಮಲ" ನೋಡಿ.
ಸಿದ್ದು ಪೂರ್ಣಚಂದ್ರ ನಿಧಾನವಾಗಿ ಕಥೆ ಪ್ರಾರಂಭಿಸಿದರೂ, ಕ್ರಮೇಣ ಟ್ವಿಸ್ಟ್ಗಳ ಮೂಲಕ ಚಿತ್ರದಾದ್ಯಂತ ಮುಂದೆ ಏನಾಗಬಹುದು ಎಂಬ ಕುತೂಹಲ ಮೂಡಿಸುತ್ತಾರೆ. ತಾಂತ್ರಿಕವಾಗಿ ಮತ್ತಷ್ಟು ಸಶಕ್ತವಾಗಿಸುವ ಅವಕಾಶವಿತ್ತು. ಮಗು ಮತ್ತು ಸಂಸಾರಕ್ಕಾಗಿ ತವಕಿಸುವ ಒಂಟಿ ಮಹಿಳೆಯಾಗಿ ಅದ್ವಿತಿ, ಮೂಗಿ ಗೌರಿ ಪಾತ್ರದಲ್ಲಿ ಋತುಚೈತ್ರ ನಟನೆ ಚಿತ್ರದ ಹೈಲೈಟ್. ಹೆಣ್ಣುಮಕ್ಕಳಿಗೆ ಒಂದಲ್ಲ ಒಂದು ರೀತಿ ಕನೆಕ್ಟ್ ಆಗುವ ಎಮೋಷನಲ್ ಡ್ರಾಮಾ "ಬ್ರಹ್ಮಕಮಲ'.