Prajna Shyamprasad 
ಸ್ಯಾಂಡಲ್‌ವುಡ್

Prajna Shyamprasad - ಅಯೋಗ್ಯನ ಜತೆ ಮಿಲ್ಕಿ ಬ್ಯೂಟಿ ಪ್ರಜ್ಱ

Prajna Shyamprasad -
"ಬಾಬ', "ಗಣೇಶ ಮತ್ತೆ ಬಂದ', "ಕೆಂಚ', "ಮಳೆಬಿಲ್ಲೆ' ಸೇರಿ ಹಲವು ಚಿತ್ರಗಳಲ್ಲಿ ಮಿಂಚಿದ್ದ ನಟಿ ಪ್ರಜ್ಞಾ ಶ್ಯಾಮಪ್ರಸಾದ್ ಕಳೆದ 10 ವರ್ಷಗಳಿಂದ ಯಾವ ಚಿತ್ರದಲ್ಲೂ ಕಾಣಿಸಿಕೊಂಡಿರಲಿಲ್ಲ. ಹಾಗಂತ ಅವರು ಚಿತ್ರರಂಗಕ್ಕೆ ಗುಡ್​ಬೈ ಹೇಳಿರಲಿಲ್ಲವಾದರೂ, ತಮ್ಮದೇ ಈವೆಂಟ್​ ಮ್ಯಾನೇಜ್ಮೆಂಟ್​ ಕಂಪನಿಯಲ್ಲಿ ಬಿಜಿಯಾಗಿದ್ದರು. ಇದೀಗ ದಶಕದ ಬಳಿಕ ಸತೀಶ್​ ನೀನಾಸಂ, ರಚಿತಾ ರಾಮ್​ ನಟಿಸಿರುವ, ಮಹೇಶ್​ ನಿರ್ದೇಶನದ "ಅಯೋಗ್ಯ 2' ಚಿತ್ರದ "ಮಿಲ್ಕಿ ಬ್ಯೂಟಿ' ಪೆಪ್ಪಿ ಸಾಂಗ್​ ಮೂಲಕ ಪ್ರಜ್ಞಾ ಕಮ್​ಬ್ಯಾಕ್​ ಮಾಡಿದ್ದಾರೆ. ಇತ್ತೀಚೆಗಷ್ಟೆ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದ ಅವರು, ಇಷ್ಟು ವರ್ಷಗಳ ಬ್ರೇಕ್​, ಈಗಿನ ಕಮ್​ಬ್ಯಾಕ್​, ಮುಂದಿನ ಯೋಜನೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. "ಯುವದಸರಾ ಸೇರಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದ ಕಾರಣ ನಾನು ಸಿನಿಮಾಗಳಲ್ಲಿ ನಟಿಸುತ್ತಿರಲಿಲ್ಲವಾದರೂ, ಚಿತ್ರರಂಗದ ನಂಟು ಕಡಿದುಕೊಂಡಿರಲಿಲ್ಲ. ಸಂಪರ್ಕ ಇದ್ದೇ ಇತ್ತು. ಕೆಲ ದಿನಗಳ ಹಿಂದೆ ನಿರ್ದೇಶಕ ಮಹೇಶ್​ ಕರೆ ಮಾಡಿ, ಒಂದು ಹಾಡಿದೆ ಮಾಡುತ್ತೀರಾ? ಅಂತ ಕೇಳಿದರು. ಎನರ್ಜಿಟಿಕ್​ ಸಾಂಗ್​ ಕೇಳಿದೆ. ಖುಷಿಯಾಯಿತು. ತೆರೆಯ ಮೇಲೆ ಕಾಣಿಸಿಕೊಳ್ಳಬೇಕು ಅಂದರೆ ಅದಕ್ಕೊಂದು ಒಳ್ಳೆ ವೇದಿಕೆ ಬೇಕಲ್ಲವೇ? ಈ ಹಾಡು ಒಳ್ಳೆ ಅವಕಾಶ ಅನ್ನಿಸಿತು. ತುಂಬ ಗ್ಯಾಪ್​ ಆಗಿದ್ದ ಕಾರಣ, ನನಗೂ ತರಬೇತಿ ಬೇಕಿತ್ತು. ಹೀಗಾಗಿ ಹರ್ಷ ಮಾಸ್ಟರ್​ ಜತೆ 2, 3 ದಿನ ರಿಹರ್ಸಲ್​ ಮಾಡಿದೆ. ಎರಡೇ ದಿನಗಳಲ್ಲಿ ತುಂಬ ಗ್ಯಾಪ್​ ಆಗಿದ್ದ ಕಾರಣ, ನನಗೂ ತರಬೇತಿ ಬೇಕಿತ್ತು. ಚಿತ್ರೀಕರಣ ಮುಗಿಸಿದೆವು. ಬಳಿಕ ನನಗೆ ಎರಡು ದಿನ ರೆಸ್ಟ್​ ಬೇಕಾಯಿತು. ಅಷ್ಟು ಶ್ರಮ ಕೇಳಿದ ಹಾಡಿದು. ನಾನು ಒಳ್ಳೆ ಡಾನ್ಸರ್​ ಅಂತ ಅಂತ ತುಂಬ ಜನರಿಗೆ ಗೊತ್ತಿರಲಿಲ್ಲ. ಈಗ ಹಲವಾರು ಮಂದಿ ಕರೆ ಮಾಡಿ ತುಂಬ ಚೆನ್ನಾಗಿ ಡಾನ್ಸ್​ ಮಾಡಿದ್ದೀರಾ ಎನ್ನುತ್ತಿದ್ದಾರೆ' ಎಂದು ಸಂತಸ ಹಂಚಿಕೊಳ್ಳುತ್ತಾರೆ.

ಗುಡ್​ಬೈ ಹೇಳಿರಲಿಲ್ಲ, ಆದರೂ...

ಇನ್ನು ಸುದೀರ್ 10 ವರ್ಷಗಳ ಬ್ರೇಕ್​ ಬಗ್ಗೆ ಪ್ರಜ್ಞಾ, "9ನೇ ತರಗತಿಯಲ್ಲಿದ್ದಾಗ ನಾನು ಚಿತ್ರರಂಗಕ್ಕೆ ಬಂದೆ. ಓದು, ಸಿನಿಮಾ ಬ್ಯಾಲೆನ್ಸ್​ ಮಾಡುತ್ತಿದ್ದೆ. ಕೆಲ ವರ್ಷಗಳಲ್ಲೇ ತಂದೆ ತೀರಿಕೊಂಡರು, ವಯಕ್ತಿಕ ಜೀವನದ ಏರುಪೇರಿನಿಂದ ಒಂದು ಬ್ರೇಕ್​ ಬೇಕು ಅಂತನ್ನಿಸಿತು. ಕ್ರಮೇಣ ಪ್ರಜ್ಞಾ ಸಿನಿಮಾನೇ ಮಾಡಲ್ಲ ಅನ್ನೋ ಮಾತು ಹಬ್ಬಿತು. ಆಗೊಮ್ಮೆ ಈಗೊಮ್ಮೆ ಆಫರ್​ ಬಂದರೂ, ನನಗೆ ಇದು ಸರಿಯಾದ ಸಮಯ ಅಲ್ಲ ಅಂತನ್ನಿಸುತ್ತಿತ್ತು. ಎಲ್ಲದಕ್ಕೂ ಅದರದೇ ಆದ ಸಮಯ ಇರುತ್ತದೆ ಅಂತ ನಂಬುತ್ತೇನೆ. ಈಗ ಒಳ್ಳೆ ಟೈಮ್​ ಅನ್ನಿಸಿತು. ಹೀಗಾಗಿ ಈ ಹಾಡಿನಲ್ಲಿ ನಟಿಸಿದೆ. ಕಲಾವಿದರು ಬೇರಾವ ಕ್ಷೇತ್ರದಲ್ಲಿ ಬಿಜಿಯಾಗಿದ್ದರೂ, ಅವರಿಗೆ ಸಿನಿಮಾ ನೀಡುವ ಸಮಾಧಾನವೇ ಬೇರೆ...' ಎನ್ನುತ್ತಾರೆ.

ಫಿಟ್ನೆಸ್​ ಜರ್ನಿ

ಕಳೆದ ಮಾರ್ಚ್​ನಿಂದ ಫಿಟ್ನೆಸ್​ ಪಯಣ ಆರಂಭಿಸಿರುವ ಪ್ರಜ್ಞಾ ಕೇವಲ ನಾಲ್ಕು ತಿಂಗಳಲ್ಲಿ 10 ಕೆಜಿ ತೂಕ ಇಳಿಸಿಕೊಂಡಿದ್ದಾರಂತೆ. "ಸಿನಿಮಾಗೆ ಬರಬೇಕು ಅಂತಲ್ಲ. ಆದರೆ, ಫಿಟ್​ ಆಗಿರಬೇಕು ಅಂತ ಮಾರ್ಚ್​ನಿಂದ ಡಯಟ್​, ವರ್ಕೌಟ್​ ಮಾಡತೊಡಗಿದೆ. ಈಗಲೂ ಫಿಟ್ನೆಸ್​ ಪಯಣ ಮುಂದುವರಿದಿದೆ. ದಪ್ಪ ಇರುವವರಿಗಷ್ಟೇ ಅನಾರೋಗ್ಯ ಕಾಡುತ್ತದೆ ಅಂತಲ್ಲ. ಇವತ್ತಿನ ಕಲುಷಿತ ಆಹಾರ, ಜಂಕ್​ ುಡ್ಸ್​ ಎಲ್ಲರಿಗೂ ಆರೋಗ್ಯ ಸಮಸ್ಯೆ ತರುತ್ತಿವೆ. ಹೀಗಾಗಿ ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಲೇಬೇಕು' ಎನ್ನುತ್ತಾರೆ ಪ್ರಜ್ಞಾ.