ರವಿತೇಜ- ಮಾಧವ 
ಸ್ಯಾಂಡಲ್‌ವುಡ್

ಟಾಲಿವುಡ್‌ಗೆ ರವಿತೇಜ ಕುಡಿ : ‘ಮಾರೆಮ್ಮ’ ಮೂಲಕ ತೆಲುಗು ಚಿತ್ರರಂಗಕ್ಕೆ ಬಂದ ಮಾಧವ್ ಭೂಪತಿರಾಜು

ಪ್ರಮುಖ ಮುಖ್ಯಾಂಶಗಳು

  • ರವಿತೇಜ ಕುಟುಂಬ ಕೂಡ ತೆಲುಗು ಚಿತ್ರರಂಗದಲ್ಲಿ ಸಕ್ರಿಯ
  • ರವಿತೇಜ ಸಹೋದರ ಮಗ ಮಾಧವ್​ ಬೆಳ್ಳಿತೆರೆಗೆ ಎಂಟ್ರಿ
  • ನಟನ ಮಾರೆಮ್ಮ ಸಿನಿಮಾ ಇದೇ 10ಕ್ಕೆ ರಿಲೀಸ್
ನಟ ರವಿತೇಜ ಕುಟುಂಬ ಕೂಡ ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿದೆ. ಪುತ್ರ ಮಹಾಧನ್ ಭೂಪತಿರಾಜು ಈಗಾಗಲೇ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಟೀಂನಲ್ಲಿ ಸಹಾಯಕ ನಿರ್ದೇಶಕನಾಗಿ ಪಳಗುತ್ತಿದ್ದಾರೆ. ಈ ಮಧ್ಯೆ ರವಿತೇ ಕುಟುಂಬದ ಮತ್ತೊಂದು ಕುಡಿ ಟಾಲಿವುಡ್‌ಗೆ ಎಂಟ್ರಿ ನೀಡಿದೆ. ನಟನ ಹಿರಿಯ ಸಹೋದರ ರಘು ಪುತ್ರ ಮಾಧವ್ ಭೂಪತಿರಾಜು ತೆಲುಗಿನ ‘ಮಾರೆಮ್ಮ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ನಾಯಕನಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಹಳ್ಳಿ ಹಿನ್ನೆಲೆಯಲ್ಲಿ ಸಾಗುವ ಈ ಕಥೆಗೆ ಮಂಚಾಲಾ ನಾಗರಾಜ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇಲ್ಲಿ ಮಾಧವ್‌ಗೆ ದೀಪಾ ಬಾಲು ಜೋಡಿಯಾಗಿದ್ದಾರೆ. ಇದೇ ಸೆ.10ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿತ್ರದ ಟ್ರೇಲರ್ ರಿಲೀಸ್ ಮಾಡಲಾಯಿತು. 2.47 ನಿಮಿಷದ ಈ ಟ್ರೇಲರ್‌ನಲ್ಲಿ ದೇವರ ಮೇಲಿನ ನಂಬಿಕೆ, ಯುವ ಪ್ರೇಮಿಗಳ ಆಟ ಹಾಗೂ ಸೇಡಿನ ಅಂಶಗಳನ್ನು ಕಾಣಬಹುದು. ಮಾರಿ ಎಂಬ ಎಮ್ಮೆ ಕಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಅದರ ರಕ್ಷಣೆಗೆ ನಾಯಕ ಪಣತೊಡುವ ಸುತ್ತ ಕಥೆ ಸಾಗುತ್ತದೆ. ಮಾಧವ್ ಆ್ಯಕ್ಷನ್ ಅವತಾರದಲ್ಲಿ ಮಿಂಚಿದ್ದಾರೆ. ಸದ್ಯ ‘ಇರುಮುಡಿ’ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರವಿತೇಜ, ಅಣ್ಣನ ಮಗನಿಗೆ ಬೆಂಬಲವಾಗಿ ನಿಂತಿದ್ದು, ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುತ್ರನಿಗೆ ಶುಭಕೋರಿದ್ದಾರೆ. -ಏಜೆನ್ಸೀಸ್