Gagan Chinnappa and Madran Kavi Manja in bbk 13 
ಸ್ಯಾಂಡಲ್‌ವುಡ್

ಗಗನ್ ಚಿನ್ನಪ್ಪ Vs ಮಂಜು ಮಧ್ಯೆ ಜೋರಾದ ವಾಗ್ವಾದ; ಬಿಗ್ ಬಾಸ್ ಮನೆಯಲ್ಲಿ ಬಾಸಿಸಂ ಮಾಡ್ತಿದ್ದಾರಾ ಗಗನ್?

 Gagan Chinnappa and Madran Kavi Manja in bbk 13: ಬಿಗ್​ಬಾಸ್​ ಮನೆಗೆ ಕಾಮನ್​ ಮ್ಯಾನ್​ ಮತ್ತು ಸೆಲಬ್ರೆಟಿಗಳು ಎಂಟ್ರಿಯಾದ ಮೊದಲನೇ ದಿನದಿಂದಲೂ ಕಿತ್ತಾಟ  ಜೋರಾಗಿಯೇ ಇದೆ. ಮಂಜ-ಕಿರಣ್​ ಶಾಸ್ತ್ರಿ, ಪ್ರಥಮಾ-ಕಿರಣ್​ ಶಾಸ್ತ್ರಿ, ಮಂಜ-ತಾಂಡವ್​​ ರಾಮ್​, ಗಗನ್​ ಚಿನ್ನಪ್ಪ ಮಧ್ಯೆ ಒಂದಿಲ್ಲ ಒಂದು ವಿಚಾರಕ್ಕೆ ಕಿರಿಕ್​ ಆಗುತ್ತಲೇ ಇದೆ. ಸದ್ಯ ಬಿಗ್​ಬಾಸ್​ ಕೊಟ್ಟ ಆಹಾರ ತಿನ್ನುವ ಟಾಸ್ಕ್​​ ಒಂದಕ್ಕೆ ಗಗನ್​ ಚಿನ್ನಪ್ಪ ಮತ್ತು ಮಂಜ ಕಿತ್ತಾಡಿಕೊಂಡ ಪ್ರೋಮೊ ರಿಲೀಸ್ ಆಗಿದೆ.

ಎಲ್ಲ ವಿಚಾರಕ್ಕೂ ಸಿಡುಕು

ಬಿಗ್​ಬಾಸ್​ ಕೊಟ್ಟ ಟಾಸ್ಕ್​ ಪ್ರಕಾರ, ಮನೆಯಲ್ಲಿ ಈಗಾಗಲೇ ಎರಡು ಗುಂಪಿದೆ ಒಂದು ದೊಡ್ಮನೆ ಒಳಗೆ ಪ್ರವೇಶ ಪಡೆದುಕೊಂಡಿರುವವರ ತಂಡ ಮತ್ತೊಂದು  ಫ್ಲೈಟ್​ನಲ್ಲಿ ಉಳಿದುಕೊಂಡಿರುವವರ ತಂಡ. ಆ ಪೈಕಿ ಎರಡು ತಂಡಕ್ಕೂ ಒಂದಷ್ಟು ಆಹಾರ ಕೊಟ್ಟು ಅದನ್ನು ಮೊದಲು ತಿಂದು ಮುಗಿಸುವವರು ಟಾಸ್ಕ್​ ಗೆದ್ದಂತೆ ಎನ್ನಲಾಗಿದೆ. ಇದರಲ್ಲಿ ಮಂಜನನ್ನು ಎಲ್ಲ ತಿನ್ನುವಂತೆ ಟೀಂ ಹುರಿದುಂಬಿಸುವುದು ಕಂಡರೆ, ಇತ್ತ ಜಗ್ಗ ಮಮ್ಮಿ ತಿನ್ನಲು ಅತ್ತಂತೆ ಮಾಡುವುದು ಕಂಡುಬಂದಿದೆ. ಕೊನೆಗೆ ಟಾಸ್ಕ್​ ಗೆದ್ದಿದ್ದು ಯಾರು ಎನ್ನುವ ವಿಚಾರವನ್ನು ಪ್ರಸ್ತಾಪ ಮಾಡುವಾಗ ಗಗನ್​ ಚಿನ್ನಪ್ಪ ಮತ್ತು ಮಾಡ್ರನ್​ ಕವಿ ಮಂಜ ಮಧ್ಯೆ ಕಿತ್ತಾಟ ನಡೆದಿದೆ.
ಗಗನ್​ ಮಾತನಾಡುವಾಗ ಮಧ್ಯೆ ಮಾತನಾಡಿದ ಮಂಜನನ್ನು ತಡೆದು  ಅಧಿಕ ಪ್ರಸಂಗ ಮಾತನಾಡ್ಬೇಡ ಎಂದಿದ್ದಾರೆ. ಇದಕ್ಕೆ ಮಂಜ ಬ್ರೋ ಯಾಕೆ ಆರಾಮಾಗಿ ಮಾತಾನಾಡಿ.. ಹಾ ಆರಾಮಾಗಿ ಎಂದು ಟಾಂಗ್​ ಕೊಟ್ಟಿದ್ದಾರೆ. ಇದರಲ್ಲಿ ಅವರು ಗೆದ್ದ ಭಾವನೆಯನ್ನು ಹೊರಗಿಟ್ಟಿದ್ದಾರೆ. ಈ ಬಗ್ಗೆ ಕಾಮೆಂಟ್ ಮಾಡಿರುವ ಪ್ರೇಕ್ಷಕರು ಗಗನ್ ಯಾಕೆ ಎಲ್ಲ ವಿಚಾರಕ್ಕೂ ಸಿಡುಕುತ್ತಾರೆ ಎಂದು ಕಿಡಿಕಾರಿದ್ದಾರೆ.

ಗಗನ್​ ಬಾಸಿಸಿಂ ಎಂದ ನೆಟ್ಟಿಗರು

ಗಗನ್​ ನಡವಳಿಕೆ ಬಗ್ಗೆ ನೆಟ್ಟಿಗರು ಬೇಸರವ್ಯಕ್ತಪಡಿಸಿದ್ದಾರೆ. ಎಲ್ಲರೂ ತಮ್ಮ ತಮ್ಮ ಆಟವನ್ನು ಆಡುತ್ತಿದ್ದಾರೆ. ಆದರೆ ಗಗನ್ ಮಾತ್ರ  ಬಾಸಿಸಂ ಮಾಡ್ತಿದ್ದಾರೆ, ಅವರಿಗೆ  ಕಾಮನ್​ ಮ್ಯಾನ್​ ಎಂಟ್ರಿಯಾಗಿರುವುದು  ಇಷ್ಟವಾಗಿಲ್ಲ ಎನ್ನುವಂತೆ ತೋರುತ್ತಿದೆ ಎಂದು ಆರೋಪಿಸಿದ್ದಾರೆ. ಗಗನ್ ಯಾಕೆ ಯಾವಾಗ್ಲೂ ಮಂಜು ಮೇಲೆ ಉರ್ಕೋತಾನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು ಸತ್ಯಾಂಶ ಹೇಳಿದ್ದು ಹೀಗೆ

ಟಾಸ್ಕ್​ ಶುರುವಾಗುವ ಮುನ್ನ ಗಗನ್​ ಮಂಜನಿಗೆ ಬೈದಿದ್ದಾನೆ. ಈ ಚಾನೆಲ್​ ಅವರು ಎಡಿಟ್​ ಮಾಡಿದ್ದಾರೆ. ಲೈವ್​ ಅಲ್ಲಿ ಎಲ್ಲ ಗೊತ್ತಾಗತ್ತೆ ಗಗನ್ ಓವರ್​ ಆಗಿ ಆಡ್ತಿದ್ದಾರೆ ಎಂದು ಹೇಳಿದ್ದಾರೆ. ಅಂಜಲಿಶ್ರೀನಿವಾಸ್7532 ಎನ್ನುವವರು ಪ್ರತಿಕ್ರಿಯೆ ಕೊಟ್ಟಿದ್ದು, ಅವ್ರಿಗೆ ಸೆಲೆಬ್ರಿಟಿ ಅನ್ನೋ ಕಬ್ಬು ಜಾಸ್ತಿ ಆಗಿದೆ, ಫ್ಲೈಟ್ ಹುಡುಗರೇ ತುಂಬಾ ಚೆನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.
ಫಿಲ್ಮಿ ಫ್ಯಾಕ್ಟ್ಸ್​​ ಎಕ್ಸ್​​ನಿಂದ  ಪೋಸ್ಟ್​ ಹಂಚಿಕೊಂಡಿದ್ದು, ಲೋ ಚಿನ್ನಪ್ಪ ತಾಳ್ಮೆ ಇಂದಾ ಆಡೋ ಯಾಕೆ ನಿಮ್ಮವ್ರು ಸೋತೋಗ್ತಾರೆ ಅಂತಾನಾ ಎಂದು ಗೇಲಿ ಮಾಡಿದ್ದಾರೆ, (ಏಜೆನ್ಸೀಸ್).