ಸಿನಿವಾಣಿ

ರವಿಚಂದ್ರನ್​ ಜನ್ಮದಿನ; ಚಂದನವನದ ಯಾವೆಲ್ಲ ಕಲಾವಿದರು ಹೇಗೆಲ್ಲ ವಿಶ್​ ಮಾಡಿದ್ರು...

ಶನಿವಾರ ಸ್ಯಾಂಡಲ್​ವುಡ್​ನ ಕ್ರೇಜಿಸ್ಟಾರ್ ರವಿಚಂದ್ರನ್​ 59ನೇ ವರ್ಷ ಮುಗಿಸಿ 60ಕ್ಕೆ ಕಾಲಿಟ್ಟಿದ್ದಾರೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಬರ್ತ್​ಡೇ ಆಚರಣೆಗೆ ನಿಷೇಧ ವಿಧಿಸಿದ ರವಿಮಾಮ, ಮನೆಯಲ್ಲಿಯೇ ಇರಿ, ಅಲ್ಲಿಂದಲೇ ಆಶೀರ್ವಾದ ನೀಡಿ, ಮನೆ ಬಳಿ ಬರಬೇಡಿ ಎಂದು ಅಭಿಮಾನಿಗಳಿಗೆ ಕೋರಿದ್ದರು. ಅದರಂತೆ ಇಂದು ಯಾರೂ ಅವರ ಮನೆಯತ್ತ ಸುಳಿದಿಲ್ಲ. ಇತ್ತ ಸಾಮಾಜಿಕ ಜಾಲತಾಣದಲ್ಲಿಯೂ ಜನ್ಮದಿನದ ಪ್ರಯುಕ್ತ ಶುಭಾಶಯಗಳ ಸುರಿಮಳೆಯೇ ಸುರಿದಿದೆ. ಚಂದನವನದ ಕಲಾವಿದರು, ತಾಂತ್ರಿಕ ವರ್ಗದವರು ಸೇರಿ ಪ್ರೇಮಲೋಕದ ರಣಧೀರನಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ಯಾವೆಲ್ಲ ಕಲಾವಿದರು ಹೇಗೆಲ್ಲ ವಿಶ್​ ಮಾಡಿದರು ಎಂಬುದಕ್ಕೆ ಇಲ್ಲಿದೆ ಉತ್ತರ.