ಬೆಂಗಳೂರು: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ, ಅಭಿನಯ ಶಾರದೆ ಜಯಂತಿ (76) ಅವರು ಸೋಮವಾರ ಬೆಳಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಜಯಂತಿ ಅವರ ಅಂತಿಮ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಸರ್ಕಾರದ ವತಿಯಿಂದಲೇ ವ್ಯವಸ್ಥೆ ಮಾಡಲಾಗಿದೆ. ಈ ಮಧ್ಯೆ, ಜಯಂತಿ ಅವರ ನಿಧನಕ್ಕೆ ಉಪೇಂದ್ರ, ಸುದೀಪ್, ಧ್ರುವ ಸರ್ಜಾ, ಜಗ್ಗೇಶ್, ಶರಣ್, ರಾಘವೇಂದ್ರ ರಾಜಕುಮಾರ್, ಮಾಲಾಶ್ರೀ, ನಿಖಿಲ್ ಕುಮಾರ್, ಅನು ಪ್ರಭಾಕರ್ ಮುಖರ್ಜಿ, ಸೋನು ಗೌಡ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ.