ಸಿನಿವಾಣಿ

ನಟನೆಂಬ ಕಾರಣಕ್ಕೆ ಹೆಣ್ಣು ಕೊಡ್ತಿಲ್ಲ: ಗಾಂಧಿನಗರದಲ್ಲೊಂದು ಗೋಳಿನ ಕತೆ...!

ಬೆಂಗಳೂರು: ಮಾದಕ ಜಾಲದಲ್ಲಿ ಸ್ಯಾಂಡಲ್​ವುಡ್​ ನಂಟಿದೆ ಎಂಬ ವಿಷಯ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಗಾಂಧಿನಗರದಲ್ಲೊಂದು ಗೋಳಿನ ಕತೆ ಕೇಳಿಬಂದಿದೆ.

ಮಾದಕ ನಂಟಿನಿಂದ ಇದೀಗ ಸಂಬಂಧಗಳನ್ನೇ ಅನುಮಾನಿಸುವಂತಾಗಿದೆ. ಸಿನಿಮಾದವರೆಂದರೆ ಮೊದಲೇ ಭಯ ಬೀಳ್ತಿದ್ರೂ, ಇದೀಗ ಹೆಣ್ಣು ಕೊಡುವುದಕ್ಕೂ ಅನುಮಾನದಿಂದ ನೋಡ್ತಿದ್ದಾರೆ. ನಮ್ಮನ್ನು ನಂಬೋದಾದ್ರು ಹೇಗೆ ಅನ್ನೋ ವಾತಾವರಣ‌ ನಿರ್ಮಾಣ ಆಗಿದೆ ಎನ್ನುತ್ತಾರೆ ಯುವನಟ ಪವನ್ ಶೌರ್ಯ​.

ಮುಂದಿನ ತಿಂಗಳು ಮದವೆಗೆ ಎಲ್ಲ ತಯಾರಿ ನಡೆಯುತ್ತಿದೆ. ಸದ್ಯ ಡ್ರಗ್ಸ್ ಜಾಲದ ಕಥೆ ಕೇಳಿ ಕುಟುಂಬಗಳಲ್ಲಿ ಆತಂಕ ಶುರುವಾಗಿದೆ. ನಟ ಅನ್ನೋ ಕಾರಣಕ್ಕೆ ಹುಡುಗಿ ಕುಟುಂಬದವರಿಗೆ ಆತಂಕ ಮೂಡಿದೆ. ಶೂಟಿಂಗ್​ಗೆ ಹೋಗೋದು ಬೇಡ, ಸಿನಿಮಾನೂ ಬೇಡ ಎಂದು ಕುಟುಂಬದವರು ಹೇಳುತ್ತಿದ್ದಾರೆಂದು ವೈವಾಹಿಕ ಜೀವನಕ್ಕೆ ಕಾಲಿಡಲು ತಯಾರಾಗಿರೋ ನಟ ಪವನ್ ಕಳವಳ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ಪವನ್​, ಗೂಳಿಹಟ್ಟಿ ಹಾಗೂ ಉಡುಂಬ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಓಂ ಪ್ರಕಾಶ್ ರಾವ್ ಆಕ್ಷನ್ ಕಟ್ ಹೇಳ್ತಿರೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)