ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಅಧಿಕಾರಿಗಳು ನಟಿ ಸಂಜನಾ ಗಲ್ರಾನಿ ಮತ್ತು ಬಂಧಿತ ಪೆಡ್ಲೆರ್ ವಿರೇನ್ ಖನ್ನಾ ಮನೆ ಮೇಲೆದಾಳಿ ನಡೆಸಿದ್ದಾರೆ
ಡ್ರಗ್ಸ್ ಮಾಫಿಯಾದಲ್ಲಿ ಕೈವಾಡ ಇರುವ ಹಿನ್ನೆಲೆಯಲ್ಲಿ ಕೋಟ್ 9 ರಿಂದ ಸಚ್೯ ವಾರಂಟ್ ಪಡೆದಿರುವ ಸಿಸಿಬಿ ಅಧಿಕಾರಿಗಳು ಮಂಗಳವಾರ ಮುಂಜಾನೆ ಸಂಜನಾ ಮತ್ತು ವಿರೇನ್ ಮೇಲೆ ದಾಳಿ ನಡೆಸಿ ತೀವ್ರ ಶೋಧ ನಡೆಸಿದ್ದಾರೆ.
ಇಂದಿರಾ ನಗರದಲ್ಲಿರುವ ನಟಿ ಸಂಜನಾ ಅವರ ನಿವಾಸದ ಮೇಲೆ ಸಿಸಿಬಿ ಇನ್ಸ್ಪೆಕ್ಟರ್ ಅಂಜುಮಾಲ, ಪೂರ್ಣಿಮಾ ನೇತೃತ್ವದ ತಂಡದಿಂದ ದಾಳಿ ನಡೆದಿದೆ. ಡ್ರಗ್ಸ್ ದಂಧೆಯಲ್ಲಿ ಸಂಜನಾ ಹೆಸರು ಕೇಳಿಬರುತ್ತಿದ್ದು, ಈಗಾಗಲೇ ಆಪ್ತ ರಾಹುಲ್ ಸಿಸಿಬಿ ಬಲೆಯಲ್ಲಿ ಸಿಕ್ಕಿಬಿದ್ದಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ.
ಸಂಜನಾ ಆಪ್ತ ರಾಹುಲ್ ಹೇಳಿಕೆ ಆಧಾರದ ಮೇಲೆ ದಾಳಿ ಮಾಡಲಾಗಿದೆ. ಸಿಸಿಬಿ ಅಧಿಕಾರಿಗಳು ಮನೆ ಪರಿಶೀಲನೆಯಲ್ಲಿ ತೊಡಗಿದ್ದು, ಸಂಜನಾ ಮನೆಯಲ್ಲಿ ಇದ್ದಾರೆಂದು ಮಾಹಿತಿ ತಿಳಿದುಬಂದಿದೆ. ಮಾದಕ ದ್ರವ ಮತ್ತು ಅದಕ್ಮೆ ಸಂಬಂಧಿಸಿದ ವಸ್ತುಗಳನ್ನು ಹುಡುಕಾಟ ನಡೆಸುತ್ತಿದ್ದಾರೆ. ಸಂಜನಾಳನ್ನು ಚಾಮರಾಜಪೇಟೆ ಸಿಸಿಬಿ ಕಚೇರಿಗೆ ಕರೆಸಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ಈ ಹಿಂದೆ ನಟಿ ರಾಗಿಣಿ ದ್ವಿವೇದಿ ಮನೆ ಮೇಲೆ ದಾಳಿ ನಡೆಸಿ ಸಾಕ್ಷಿ ಸಂಗ್ರಹಿಸಿ ಬಂಧಿಸಿದ್ದರು. ಇದೀಗ ಸಂಜನಾಗೂ ಬಂಧನದ ಭೀತಿ ಎದುರಾಗಿದೆ. ಸಿಸಿಬಿ ಪೊಲೀಸರ ಮುಂದಿನ ಹೆಜ್ಜೆ ಕಾದುನೋಡಬೇಕಾಗಿದೆ. (ದಿಗ್ವಿಜಯ ನ್ಯೂಸ್)