ಸಿನಿವಾಣಿ

ಲುಡೋ ಆಡೋಣ ಬಾರಾ! ಸ್ಯಾಂಡಲ್​ವುಡ್​ ತಾರೆಯರ ಹೊಸ ಆಟಕ್ಕೆ ಮುಹೂರ್ತ...

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ರಿಯಾಲಿಟಿ ಶೋಗಳಾಯಿತು, ಕ್ರಿಕೆಟ್​, ಬ್ಯಾಡ್ಮಿಂಟನ್​, ಕಬಡ್ಡಿ, ಬೌಲಿಂಗ್​ ಮಾಡಿದ್ದೂ ಆಯ್ತು... ಇದೀಗ ಸ್ಯಾಂಡಲ್​ವುಡ್​ ತಾರೆಯರು ಲುಡೋ ಸ್ಪರ್ಧಾವಳಿಗೆ ರೆಡಿಯಾಗುತ್ತಿದ್ದಾರೆ. ಇದೇ ಮೊದಲ ಬಾರಿಗೆ ಸ್ಯಾಂಡಲ್​ವುಡ್​ನಲ್ಲಿ ಪ್ರೋ ಲುಡೋ ಸ್ಟಾರ್​ ಲೀಗ್​ ಆಯೋಜಿಸಲಾಗುತ್ತಿದೆ. 40x40 ಚದರ ಅಡಿಯ ವರ್ಣರಂಜಿತ ಒಳಾಂಗಣ ಅಖಾಡದಲ್ಲಿ ಲುಡೋ ಆಟ ಅಷ್ಟೇ ಆಕರ್ಷಕವಾಗಿರಲಿದೆ. ಈ ಲೀಗ್ ನಲ್ಲಿ ಒಟ್ಟು ಎಂಟು ತಂಡಗಳಿದ್ದು, ಸಿನಿಮಾ ಮತ್ತು ಕಿರುತೆರೆಯಲ್ಲಿ ಮಿಂಚುತ್ತಿರುವ 16 ತಾರೆಯರು ಈ ಎಂಟು ತಂಡಗಳಲ್ಲಿ ಇಬ್ಬರಂತೆ ಇರುತ್ತಾರೆ. ಇವರಲ್ಲದೆ 16 ಜನ ಮಾಡಲ್​ಗಳು ಕೂಡ ಈ ಸ್ಪರ್ಧಾವಳಿಯ ಭಾಗವಾಗಲಿದ್ದಾರೆ.

ಅರುಣ್ ಹರಿಹರನ್ ಮತ್ತು ಜಾಹ್ನವಿ ಈ ಲುಡೋ ಸ್ಟಾರ್‌ ಲೀಗ್‌ನ ನಿರೂಪಣೆ ಮಾಡಲಿದ್ದಾರೆ. ಪ್ರತಿ ಪಂದ್ಯಕ್ಕೂ ಮೊದಲು ಮತ್ತು ನಂತರ ಆಟಗಾರರೊಂದಿಗೆ ಆಕರ್ಷಕವಾದ ಕಾಮೆಂಟರಿ, ಉತ್ಸಾಹಭರಿತ ಸಂವಾದಗಳೊಂದಿಗೆ ವೀಕ್ಷಕರನ್ನು ಈ ಜೋಡಿ ಆಕರ್ಷಿಸಲಿದೆ. ಡೈಸ್ ಹಾಕಿದಾಗ ಕಾಯಿನ್ ಬದಲು ಕಾಯಿನ್ ಗರ್ಲ್ಸ್ ಮೂವ್ ಆಗಲಿರುವುದು ಈ ಸ್ಪರ್ಧೆಯ ವಿಶೇಷ. ಸಿನಿಮಾ ತಾರೆಯರಿರುವ ಮನರಂಜನಾತ್ಮಕ ಲುಡೋ ಸ್ಪರ್ಧೆಗಳಾದ ಕಾರಣ ಮಾಮೂಲಿ ಲುಡೋ ಆಟದ ನಿಯಮ ಬದಲಿಸಲಾಗಿದೆ.

ಎಂಟು ತಂಡಗಳ ವಿವರ ಹಾಗೂ ಅದರಲ್ಲಿ ಆಡುವ ಸ್ಟಾರ್ ಆಟಗಾರರ ಹೆಸರುಗಳು ಹೀಗಿದೆ.

1.ಪ್ರೌಡ್‌ ತುಳುವರು - ನವೀನ್ ಡಿ ಪಡೀಲ್ ಮತ್ತು ಸುಂದರ್ ರೈ ಮಂದಾರ

2. ಮಿಮಿಕ್ರಿ ಮ್ಯಾಜಿಕ್ - ಮಿಮಿಕ್ರಿ ಗೋಪಿ ಮತ್ತು ವಿನುತ

3. ಟ್ವಿನ್‌ ಸ್ಟಾರ್ಸ್‌- ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿ

4. ದಿ ಪವರ್ ಕಪಲ್ - ತುಕಾಲಿ ಸಂತೋಷ್ ಮತ್ತು ಮಾನಸ ಸಂತೋಷ್

5. ಲಾಫ್ಟರ್ ಲೆಜೆಂಡ್ಸ್ - ಮಂಜು ಪಾವಗಡ ಮತ್ತು ಹುಲಿ ಕಾರ್ತಿಕ್

6. ಮಲೆನಾಡು ಕ್ವೀನ್ಸ್ - ಚಂದನ ಗೌಡ ಮತ್ತು ಅಮೃತ

7. ಗೌಡ ವಾರಿಯರ್ಸ್ - ಕೆಂಪೇಗೌಡ ಮತ್ತು ಮಾನ್ಯ ಗೌಡ

8. ದಿ ಡ್ರೀಮರ್ಸ್ - ಸೀತಾರಾಮ್ ಮತ್ತು ಸಾಕ್ಷಿ ಮೇಘನ