ಸಿನಿವಾಣಿ

ನಮ್ಮಲ್ಲಿ ಬರಹಗಾರರಿಗೆ ತುಂಬ ಕೊರತೆಯಾಗಿದೆ: ನಟ ರಾಜ್.ಬಿ.ಶೆಟ್ಟಿ

ಬೆಂಗಳೂರು: ನಮ್ಮ ಕನ್ನಡ ಚಿತ್ರರಂಗದಲ್ಲಿ ಬರಹಗಾರರಿಗೆ ತುಂಬ ಕೊರತೆ ಇದೆ ಎಂದು ನಟ, ನಿರ್ದೇಶಕ ರಾಜ್​.ಬಿ.ಶೆಟ್ಟಿ (Raj B Shetty) ಹೇಳಿದ್ದಾರೆ.

ವಿಜಯವಾಣಿ (Vijayavani) ಸುದ್ದಿಪತ್ರಿಕೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ರಾಜ್.ಬಿ.ಶೆಟ್ಟಿ, "ತುಂಬ ಕಡಿಮೆ ಸಿನಿಮಾಗಳಿಗೆ ನಾವು ನಿರ್ದೇಶಕರೆ ಬರೆದು ಸಿನಿಮಾ ಮಾಡುತ್ತಿದ್ದೇವೆ ಹೊರೆತು ಒಂದು ಸಂಪೂರ್ಣ ಸ್ಕ್ರೀನ್ ಪ್ಲೇಯನ್ನು ಮೊದಲಿನಿಂದ ಕೊನೆಯವರೆಗು ಬರೆದುಕೊಡುವಂತ ಬರಹಗಾರರೆ ಇಲ್ಲ! ನನ್ನ ತಂಡದಲ್ಲೇ ಇಲ್ಲ, ಇರುವ 30 ಜನರಲ್ಲಿ ನಾನೊಬ್ಬನೆ ಬರಹಗಾರ" ಎಂದು ಹೇಳಿದರು.

"ಅನ್ಯ ಚಿತ್ರರಂಗದಲ್ಲಿ ನೋಡುವುದಾದರೆ, ಶ್ಯಾಮ್ ಪುಸ್ಕರನ್ ಎಂಬ ಮಲೆಯಾಳಿ ಬರಹಗಾರರಿದ್ದಾರೆ, ಜಲ್ಲಿಕಟ್ಟು ರೈಟರ್​ ಇದ್ದಾರೆ. ಈ ಎಲ್ಲಾ ಬರಹಗಾರರು ಕಥೆಗಳನ್ನು ಬರೆಯುತ್ತಿರುತ್ತಾರೆ. ಒಬ್ಬ ರೈಟರ್ ವರ್ಷಕ್ಕೆ 2-3 ಸಿನಿಮಾಗಳನ್ನು ಮಾಡಿದರೆ, ಅಲ್ಲಿಗೆ ಆ ಇಂಡಸ್ಟ್ರಿಗೆ ಹಲವು ಒಳ್ಳೆ ಚಿತ್ರಗಳು ಬಂತು! ಆದ್ರೆ, ಇದು ನಮ್ಮಲ್ಲಿ ಇಲ್ಲ. ಹಾಗಾಗಿ ಒಳ್ಳೆ ಸಿನಿಮಾಗಳು ನಮ್ಮ ಚಿತ್ರರಂಗದಲ್ಲಿ ಬರುತ್ತಿಲ್ಲ ಜತೆಗೆ ಪ್ರಚಾರಗಳು ಆಗುತ್ತಿಲ್ಲ" ಎಂದು ಹೇಳಿದರು.

"ಒಳ್ಳೆಯ ಬರಹಗಾರರು ಇಲ್ಲದೆ ಇರುವುದೇ ಕನ್ನಡ ಚಿತ್ರರಂಗಕ್ಕೆ ತುಂಬ ದೊಡ್ಡ ಪೆಟ್ಟು, ಇದಕ್ಕೆ ತುಂಬ ದೊಡ್ಡ ಕಾರಣ ಏನು ಅಂದ್ರೆ, ನನ್ನ ಸ್ನೇಹಿತನ ಚಿತ್ರಕ್ಕೆ ನಾನೇ ಕೆಲಸ ಮಾಡಿದೆ. ಇಡೀ ಸಿನಿಮಾಗೆ ಬರಹ ಮಾಡಿಕೊಟ್ಟೆ, ಅದಕ್ಕೆ ಆತ ನನಗೆ ಕೊಟ್ಟಿದ್ದು 25000 ಮಾತ್ರ!" ಎಂದು ಹೇಳಿದರು. ಮತ್ತಷ್ಟು ಕುತೂಹಲಕಾರಿ ಮಾಹಿತಿ ತಿಳಿಯಲು ಸಂಪೂರ್ಣ ಸಂದರ್ಶನವನ್ನು ವೀಕ್ಷಿಸಿ.

ಕೆಳಗೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ.