ಸಿನಿವಾಣಿ

ಪುನೀತ ನೆನಪುಗಳಲ್ಲಿ ಜೀವಂತ: ನೆಚ್ಚಿನ ನಟನಿಗೆ ಗೌರವಯುತ ಧೀಮಂತಿಕೆಯ ಬೀಳ್ಕೊಡುಗೆ

ಬೆಂಗಳೂರು: ಕಳೆದ ಮೂರು ದಿನಗಳಿಂದ ಶೋಕ ಸಾಗರದಲ್ಲಿಯೇ ಮುಳುಗಿದ್ದ ಇಡೀ ರಾಜ್ಯ ಭಾನುವಾರ "ಪವರ್​ಸ್ಟಾರ್​' ಪುನೀತ್​ ರಾಜಕುಮಾರ್​ ಅವರನ್ನು ಗೌರವಯುತವಾಗಿ,ಧೀಮಂತವಾಗಿ ಬೀಳ್ಕೊಟ್ಟಿದೆ. ರಾಜ್ಯದ ವಿವಿಧ ಭಾಗಗಳಿಂದ ಲಾಂತರ ಜನ ಆಗಮಿಸಿ ಶಾಂತಿಯುತವಾಗಿಯೇ ಪುನೀತ್​ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಇದೆಲ್ಲದರ ಹಿಂದೆ ಅಹಿತಕರ ಟನೆ ಸಂಭವಿಸದಂತೆ ಮುತುವರ್ಜಿವಹಿಸಿ, ಗಲಭೆ, ಗಲಾಟೆಗೆ ಆಸ್ಪದ ಕೊಡದೆ ಶ್ರಮಿಸಿದ ಇಲಾಖೆಗಳ ಕಾರ್ಯವೈಖರಿಗೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ರಾಜಕುಮಾರ್​ ಕುಟುಂಬ ಧನ್ಯವಾದ ಅರ್ಪಿಸಿದೆ.

ಕರ್ನಾಟಕವೂ ಸೇರಿ ಬೇರೆ ರಾಜ್ಯಗಳಲ್ಲೂ ಅಪಾರ ಅಭಿಮಾನಿಗಳ ಪಾಲಿನ ಐಕಾನ್​ ಅಪು$್ಪ. ನಟನಾಗಿ ಮಾತ್ರವಲ್ಲ, ಮಾನವೀಯ ಸಂವೇದನೆ, ಸಮಾಜ ಸೇವೆಯ ಮೂಲಕವೂ ತಮ್ಮದೆ ಆದ ಛಾಪು ಮೂಡಿಸಿದ್ದರು. ಅಭಿಮಾನಿಗಳ ಸಾಗರವೇ ಹರಿದು ಬರಲಿದೆ ಎಂಬುದನ್ನು ಇಟ್ಟುಕೊಂಡು ಅಂತಿಮ ದರ್ಶನದ ವ್ಯವಸ್ಥೆ ಮೂರು ದಿನಗಳ ವಿಸ್ತರಿಸಲಾಯಿತು. ಸ್ವಲ್ಪ ರಿಸ್ಕ್​ ಆಗಿದ್ದರೂ ನೋವು, ದು@ಖಪೂರಿತ, ಭಾವುಕ ಸನ್ನಿವೇಶವನ್ನು ಸರ್ಕಾರ ಸಮರ್ಥವಾಗಿ ನಿರ್ವಹಿಸಿದ್ದು, ಡಾ.ರಾಜ್​ ಕುಟುಂಬ ಸದಸ್ಯರು ಹೆಗಲು ಕೊಟ್ಟಿದ್ದಾರೆ.

ಡಾ.ರಾಜ್​ ನಿಧನರಾದ ಸಂದರ್ಭದಲ್ಲಿ ಸಂಭವಿಸಿದ ಕಹಿ ಟನೆ ಅಳುಕು ಮನದಲ್ಲಿಟ್ಟುಕೊಂಡು ಸರ್ಕಾರ ಅತ್ಯಂತ ಎಚ್ಚರಿಕೆಯಿಟ್ಟರೆ, ಡಾ.ರಾಜ್​ ಕುಟುಂಬದ ಸದಸ್ಯರ ಸ್ಥಿತಪ್ರಜ್ಞೆ ನಡೆ, ಪ್ರೀತಿಯಿಂದ ಕಳುಹಿಸಿ ಕೊಡೋಣವೆಂದು ವಿನಯಪೂರ್ವಕವಾಗಿ ಕೇಳಿದ ಮನವಿ ಪರಿಣಾಮಬೀರಿತು.

ದೊಡ್ಮನೆಯ ದೊಡ್ಡ ಗುಣ

ಅಗಲಿದ ಮೇರುನಟ ಪುನೀತ್​ ರಾಜಕುಮಾರ್​ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆ ಸುವ್ಯವಸ್ಥಿತ, ಶಾಂತಿಯುತವಾಗಿ ನಡೆಸಿಕೊಟ್ಟಿದ್ದಕ್ಕಾಗಿ ಸರ್ಕಾರಕ್ಕೆ ನಾಯಕ ನಟ ಶಿವರಾಜಕುಮಾರ್​ ಕೃತತೆಗಳನ್ನು ಸಲ್ಲಿಸುವ ಮೂಲಕ ದೊಡ್ಮನೆಯವರ ದೊಡ್ಡ ಗುಣ ತೋರಿಸಿಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುಣಗಾನ ಮಾಡಿದರು. ವಿಧಾನಸೌಧದಲ್ಲಿ ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಈ ವ್ಯವಸ್ಥೆ ನಾನು ಮಾಡಿದೆ, ಸರ್ಕಾರ ಅಥವಾ ಅಧಿಕಾರಿಗಳು ಮಾಡಿದ್ದಾರೆ ಎಂದಲ್ಲ. ಸರ್ಕಾರ ತನ್ನ ಕರ್ತವ್ಯ ನಿರ್ವಹಿಸಿದೆ ಎಂದರು.

ಸಂಸತಿ ಎತ್ತಿ ಹಿಡಿದರು

ಕುಟುಂಬದ ಕುಡಿಯನ್ನು ಕಳೆದುಕೊಂಡ ದು@ಖ, ನೋವಿನಲ್ಲೂ ಡಾ.ರಾಜಕುಮಾರ್​ ಕುಟುಂಬದ ಪ್ರತಿಯೊಬ್ಬ ಸದಸ್ಯರು ಸರ್ಕಾರದ ಜತೆಗೆ ಕೈಜೋಡಿಸಿದರು. ನೆಚ್ಚಿನ ನಾಯಕ ನಟ, ಮಾನವೀಯ ಮೌಲ್ಯಗಳಿಗೆ ಪ್ರತಿಕವಾಗಿದ್ದ ಪುನೀತ್​ ರಾಜಕುಮಾರ್​ ನನ್ನು ಕಳೆದುಕೊಂಡ ಲಾಂತರ ಅಭಿಮಾನಿಗಳು ಹಾಗೂ ಜನ&ಸಾಮಾನ್ಯರು ಮೂರು ದಿನಗಳ ಕಾಲ ಸಂಯಮದಿಂದ ವರ್ತಿಸಿ, ಅಂತಿಮ ದರ್ಶನ ಮಾಡಿಕೊಂಡರು. ಅಂತ್ಯ ಕ್ರಿಯೆಗೂ ಸಹಕರಿಸಿ ನಾಡಿನ ಸಂಸತಿಯನ್ನು ಎತ್ತಿ ಹಿಡಿದರು ಎಂದು ಬೊಮ್ಮಾಯಿ ಕೃತತೆ ಸಲ್ಲಿಸಿದರು. ಸುವ್ಯವಸ್ಥಿತವಾಗಿ ನೆರವೇರಲು ಎಲ್ಲ ಅನುಕೂಲತೆಗಳನ್ನು ಕಲ್ಪಿಸಿ, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್​, ಕಂದಾಯ ಇಲಾಖೆಗಳು, ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ಹಗಲಿರುಳು ಶ್ರಮಿಸಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

ಪುನೀತ್​ ಬಂದಾಗ ರಾಯರ ವೀಣೆ ಅಲುಗಾಡಿದ್ದು ಆಕಸ್ಮಿಕ

ರಾಯಚೂರು: ಶ್ರೀ ರಾವೇಂದ್ರಸ್ವಾಮಿಗಳ ವರ್ಧಂತಿ ಉತ್ಸವ ಸಂದರ್ಭ ಮಂತ್ರಾಲಯಕ್ಕೆ ನಟ ಪುನೀತ್​ ರಾಜಕುಮಾರ್​ ಆಗಮಿಸಿದ್ದಾಗ ರಾಯರ ವೀಣೆ ಅಲುಗಾಡಿದ್ದು ಆಕಸ್ಮಿಕ. ಅವರ ಸಾವಿಗೂ ಮತ್ತು ವೀಣೆ ಅಲುಗಾಡಿದ್ದಕ್ಕೂ ಸಂಬಂಧವಿಲ್ಲ ಎಂದು ಮಂತ್ರಾಲಯ ಶ್ರೀ ರಾವೇಂದ್ರಸ್ವಾಮಿ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಹೇಳಿದ್ದಾರೆ. 2020ರ ಮಾ.2ರಂದು ಜರುಗಿದ ರಾಯರ ವರ್ಧಂತಿ ಉತ್ಸವ ಸಂದರ್ಭ ಶ್ರೀಮಠದ ಪ್ರಾಕಾರದಲ್ಲಿ ಅನುಗ್ರಹ ಪ್ರಶಸ್ತಿ ಸ್ವೀಕರಿಸಿ ಪುನೀತ್​ ಮಾತನಾಡುವಾಗ ಉಯ್ಯಾಲ ಮಂಟಪದಲ್ಲಿನ ಉತ್ಸವ ಮೂರ್ತಿ ಪ್ರಹ್ಲಾದರಾಜ ಮೂರ್ತಿಯ ಮುಂದಿಟ್ಟಿದ್ದ ವೀಣೆ ಅಲುಗಾಡಿ ಬೀಳುವಂತಾದಾಗ ಸಿಬ್ಬಂದಿ ಹಿಡಿದು ನಿಲ್ಲಿಸಿದ್ದರು. ಈ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದ್ದು, ಪುನೀತ್​ ರಾಯರ ಪರಮಭಕ್ತರಾಗಿದ್ದರು. ಅಣ್ಣಂದಿರ ಜತೆಗೆ ಬಂದು ಸಂಗೀತ ಸೇವೆ ಮಾಡುವುದಾಗಿ ಹೇಳಿದ್ದರು. ಅದಾದ ನಂತರದಲ್ಲಿ ಪ್ರಸಕ್ತ ವರ್ಷದ ಏ.5ರಂದು ಮಂತ್ರಾಲಯಕ್ಕೆ ಆಗಮಿಸಿ ರಾಯರ ದರ್ಶನ ಪಡೆದಿದ್ದರು ಎಂದಿರುವ ಶ್ರೀಗಳು, ಕೆಲ ದಿನಗಳ ನಂತರ ಬೆಂಗಳೂರಿಗೆ ತೆರಳಿ, ಪುನೀತ್​ ಕುಟುಂಬಸ್ಥರಿಗೆ ಸಾಂತ್ವನ ಹೇಳಲಾಗುವುದು. ಪುನೀತ್​ ರಾಯರ ಪಾದ ಸೇರಿದ್ದು, ಅವರ ಸಾವಿಗೆ ನಾನಾ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದ್ದಾರೆ.

ಇಬ್ಬರು ಅಭಿಮಾನಿಗಳ ಸಾವು

ಪುನೀತ್​ ರಾಜಕುಮಾರ್​ ಸಾವಿನ ಆಘಾತದಿಂದ ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದ ಕೆ.ಎಂ.ರಾಜೇಶ್​(50), ಕಲಬುರಗಿಯ ಸುಂದರ ನಗರದ ಶ್ರೀಕಾಂತ ಅಷ್ಟಗಿ (32) ಮೃತಪಟ್ಟಿದ್ದಾರೆ.

ಅಪ್ಪು ಹೆಸರಿನಲ್ಲಿ ಪ್ರಶಸ್ತಿ ನೀಡಲು ಸರ್ಕಾರ ಚಿಂತನೆ

ಪುನೀತ್​ ರಾಜ್​ಕುಮಾರ್​ ಅವರ ಹೆಸರಿನಲ್ಲಿ ಪ್ರಶಸ್ತಿಯೊಂದನ್ನು ನೀಡಲು ಸರ್ಕಾರ ಚಿಂತನೆ ನಡೆಸಿದೆ. ಪುನೀತ್​ ಅವರ ಅಪಾರ ಜನಪ್ರಿಯತೆಯನ್ನು ಮನಗಂಡಿರುವ ಸರ್ಕಾರ, ಅವರ ಹೆಸರಿನಲ್ಲಿ ಚಿತ್ರರಂಗದವರೊಬ್ಬರಿಗೆ ಪ್ರತಿ ವರ್ಷ ಪ್ರಶಸ್ತಿಯನ್ನು ನೀಡಬೇಕು ಎನ್ನುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದು, ಮುಖ್ಯಮಂತ್ರಿಗಳ ಜೊತೆಯಲ್ಲಿ ಚರ್ಚೆ ಮಾಡಿದ ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ. ಪ್ರಶಸ್ತಿ ಸ್ಥಾಪನೆ ಬಗ್ಗೆ ಅವರೂ ಕೂಡ ಆಸಕ್ತಿ ಹೊಂದಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಈಗಾಗಲೇ ಡಾ.ರಾಜ್​ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಪುನೀತ್​ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪನೆ ಮಾಡಿದರೆ, ಆ ಕುಟುಂಬದ ಇಬ್ಬರ ಹೆಸರಿನಲ್ಲಿ ಪ್ರಶಸ್ತಿ ನೀಡಿದಂತಾಗುತ್ತದೆ.

ಪುನೀತ್​ಗೆ ಕೈದಿಗಳ ಶ್ರದ್ಧಾಂಜಲಿ

ನಟ ಪುನೀತ್​ ರಾಜ್​ಕುಮಾರ್​ ದೈವಾಧೀನರಾದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಅವರಿಗೆ ಮೇಣದ ಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಿದರು. ಭಾನುವಾರ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ವತಿಯಿಂದ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪುನೀತ್​ ಭಾವಚಿತ್ರಕ್ಕೆ ಕೈದಿಗಳು ಶ್ರದ್ದಾಂಜಲಿ ಸಲ್ಲಿಸಿದರು.

ನಮ್ಮ ನಕ್ಷತ್ರವಿಗ ಆಕಾಶದ ಪಾಲಾಗಿದೆ...

ಪುನೀತ್​ ರಾಜಕುಮಾರ್​ ನಿಧನಕ್ಕೆ ಪತ್ರದ ಮೂಲಕ ಕಂಬನಿ ಮಿಡಿದಿದ್ದ ಸುದೀಪ್​, ಭಾನುವಾರ ಇನ್ನೊಂದು ಭಾವುಕ ಪತ್ರವನ್ನು ಬರೆದಿದ್ದಾರೆ. ಈ ಪತ್ರದ ಮೂಲಕ ಪುನೀತ್​ಗೆ ಅಂತಿಮ ವಿದಾಯ ಹೇಳಿದ್ದಾರೆ. "ಪುನೀತ್​ ಅವರನ್ನು ನತೆಯಿಂದ ಬೀಳ್ಕೊಡುವಲ್ಲಿ ಎಲ್ಲರೂ ಮಹತ್ವದ ಪಾತ್ರ ವಹಿಸಿದ್ದಾರೆ. ಈಗ ಎಲ್ಲವೂ ಮುಗಿದು ಹೋಗಿದೆ. ನಾವೆಲ್ಲರೂ ಸಹಜಸ್ಥಿತಿಗೆ ಬರುವುದಕ್ಕೆ, ಪುನೀತ್​ ಇನ್ನಿಲ್ಲ ಎಂಬ ಶಾಕ್​ನಿಂದ ಹೊರಬರುವುದಕ್ಕೆ ಸಮಯ ಬೇಕಾಗುತ್ತದೆ. ಈ ದಿನ ನನ್ನ ಜೀವನದ ಒಂದು ಅದ್ಭುತವಾದ ಅಧ್ಯಾಯವೊಂದು ಮುಗಿದಂತಾಗಿದೆ. ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ, ಅವರ ಮಕ್ಕಳು ಎಷ್ಟು ಆಘಾತಗೊಂಡಿರಬಹುದು, ಹಿರಿಯರು ಎಷ್ಟು ದಿಗ್ಭ್ರಮೆಗೊಂಡಿರಬಹುದು ಎಂದು ಯೋಚಿಸುತ್ತಿದ್ದೆ. ಪುನೀತ್​ ಎಲ್ಲರಿಂದ ಪ್ರೀತಿಸಲ್ಪಟ್ಟವರು. ಜನರ ಆಶೀರ್ವಾದ ಅವರ ಮೇಲಿತ್ತು. ಇಂದು ಅವರನ್ನು ತಂದೆ&ತಾಯಿಯ ಹತ್ತಿರವೇ ಅಂತ್ಯಕ್ರಿಯೆ ಮಾಡಿದಾಗ, ಒಂದು ಯೋಚನೆ ಬಂತು. ಪುನೀತ್​ ರಾಯಲ್​ ಆಗಿ ಹುಟ್ಟಿದವರು. ರಾಯಲ್​ ಆಗಿಯೇ ಬೆಳೆದರು ಮತ್ತು ಹಾಗೆಯೇ ಹೊರಟುಹೋದರು. ನಮ್ಮ ನಕ್ಷತ್ರವಿಗ ಆಕಾಶದ ಪಾಲಾಗಿದೆ. ರಾತ್ರಿ ಹೊತ್ತು ಆಕಾಶ ನೋಡಿದಾಗ, ಪುನೀತ್​ ಇನ್ನಷ್ಟು ಪ್ರಕಾಶಮಾನವಾಗಿ ಹೊಳೆಯುವುದನ್ನು ನೋಡಬಹುದು. ಹೋಗಿ ಬಾ ಗೆಳೆಯ' ಎಂದು ವಿದಾಯ ಸಲ್ಲಿಸಿದ್ದಾರೆ.

ದಯವಿಟ್ಟು ಆತ್ಮಹತ್ಯೆ ಮಾಡಿಕೊಳ್ಳಬೇಡಿ ...

"ದಯವಿಟ್ಟು ಆತ್ಮಹತ್ಯೆ ಮಾಡಿಕೊಳ್ಳ ಬೇಡಿ. ನಿಮ್ಮ ಸಂಸಾರದ ಬಗ್ಗೆ ಒಮ್ಮೆ ಯೋಚನೆ ಮಾಡಿ. ಅಪು$್ಪ ಇದ್ದಿದ್ದರೆ ಖಂಡಿತಾ ಇದನ್ನು ಇಷ್ಟಪಡುತ್ತಿರಲಿಲ್ಲ. ಆ ರೀತಿಯ ನಿರ್ಧಾರಕ್ಕೆ ಬರಬೇಡಿ. ನಿಮ್ಮ ಅಗತ್ಯ ನಿಮ್ಮ ಕುಟುಂಬಕ್ಕಿದೆ. ಅಭಿಮಾನ ಇರಲಿ. ಹಾಗಂತ ಹಾಗೆಲ್ಲ ಮಾಡಿಕೊಳ್ಳಬಾರದು' ಎಂದು ಶಿವರಾಜಕುಮಾರ್​ ಮನವಿ ಮಾಡಿದ್ದಾರೆ. "ನನ್ನ ಮಗುವನ್ನೇ ಕಳೆದುಕೊಂಡುಬಿಟ್ಟೆ ಎಂದೆನಿಸುತ್ತಿದೆ. ತುಂಬಾನೇ ನೋವಾಯ್ತು. ಕುಟುಂಬದವರಾಗಿ ಅವನ ಆಸೆ&ಆಕಾಂೆಗಳನ್ನು ಈಡೇರಿಸುವುದಕ್ಕೆ ಪ್ರಯತ್ನ ಮಾಡುತ್ತೇವೆ' ಎಂದರು.

ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ

ಸ್ಯಾಂಡಲ್​ವುಡ್​ ಪವರ್​ ಸ್ಟಾರ್​ ಪುನೀತ್​ ರಾಜಕುಮಾರ್​ ಪಾರ್ಥೀವ ಶರೀರದ ಅಂತಿಮ ದರ್ಶನದ ಬಂದೋಬಸ್ತ್​ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿರುವ ಪೊಲೀಸ್​ ಸಿಬ್ಬಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 48 ಗಂಟೆಗಳಿಗೂ ಹೆಚ್ಚಿನ ಕಾಲ ಸಾರ್ವಜನಿಕರೊಂದಿಗೆ ಶಾಂತಿಯುತವಾಗಿ ವರ್ತಿಸಿ ಯಾವುದೇ ಅಹಿತಕರ ಟನೆಗೆ ಆಸ್ಪದ ನೀಡದಂತೆ ಪೊಲೀಸರು ಕರ್ತವ್ಯ ನಿರ್ವಹಿಸಿದ್ದಾರೆ. ಯಾವುದೇ ಕರ್ತವ್ಯಲೋಪವಾಗದಂತೆ ಭದ್ರತೆ ನಿರ್ವಹಿಸಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ.

ಕಣ್ಣೀರ ವಿದಾಯ

ಪವರ್​ ಸ್ಟಾರ್​ ಪುನೀತ್​ ರಾಜಕುಮಾರ್​ ಪಾರ್ಥೀವ ಶರೀರದ ಅಂತಿಮ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಅಭಿಮಾನಿಗಳು ಹೃದಯಸ್ಪರ್ಶಿಯಾಗಿ ಬೀಳ್ಕೊಟ್ಟರು. ಬೆಳಗ್ಗೆ 5 ಗಂಟೆಗೆ ಕಂಠೀರವ ಕ್ರೀಡಾಂಗಣದಿಂದ ಹೂವಿನಿಂದ ಅಲಂಕೃತಗೊಂಡ ತೆರೆದ ವಾಹನದಲ್ಲಿ ಪುನೀತ್​ ರಾಜ್​ಕುಮಾರ್​ ಪಾರ್ಥಿವ ಶರೀರದ ಅಂತಿಮ ಯಾತ್ರೆ ಆರಂಭವಾಯಿತು.

ಸೈರನ್​ ಮೊಳಗುತ್ತಿದ್ದ ಹಲವಾರು ಪೊಲೀಸ್​ ವಾಹನಗಳ ಮಧ್ಯದಲ್ಲಿ ಅಂತಿಮ ಯಾತ್ರೆಯ ವಾಹನ ಸಾಗಿತ್ತು. ಸಾಕಷ್ಟು ಅಭಿಮಾನಿಗಳು ಮೆರವಣಿಗೆಯಲ್ಲಿ ಭಾಗಿಯಾದರು. ಮಾರ್ಗದುದ್ದಕ್ಕೂ ಸಾವಿರಾರು ಜನ ಕೈ ಮುಗಿದು ನೆಚ್ಚಿನ ನಟನ ಪಾರ್ಥೀವ ಶರೀರ ಕಂಡು ಕಣ್ಣೀರು ಹಾಕಿದರು. ಕೆಲವೆಡೆ ವಾಹನದ ಮೇಲೆ ಹೂ ಚೆಲ್ಲಿದರೆ, ಮತ್ತೆ ಕೆಲ ಕಡೆಗಳಲ್ಲಿ ಅಪು$್ಪ, ಅಪು$್ಪ ಎಂಬ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಪೊಲೀಸ್​ ಬಿಗಿ ಭದ್ರತೆಯೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಕೊಂಚ ವೇಗವಾಗಿ ಹಾದು ಹೋದ ಅಂತಿಮ ಯಾತ್ರೆಯು ಬೆಳಗ್ಗೆ 5.55ರಲ್ಲಿ ಕಂಠೀರವ ಸ್ಟುಡಿಯೋ ತಲುಪಿತು. ಅಂತಿಮ ಯಾತ್ರೆಯ ವೇಳೆ ಅಭಿಮಾನಿಗಳು ಕೊನೆಯದಾಗಿ ನೆಚ್ಚಿನ ನಟನ ಅಂತಿಮ ದರ್ಶನ ಪಡೆಯಬೇಕೆಂದು ಕಂಠೀರವ ಕ್ರೀಡಾಂಗಣದತ್ತ ಜಮಾಯಿಸಿದರೂ ಪೊಲೀಸರು ಪ್ರವೇಶ ಕಲ್ಪಿಸಲಿಲ್ಲ. ಆ ವೇಳೆ ಪೊಲೀಸರು ಮತ್ತು ಅಭಿಮಾನಿಗಳ ನಡುವೆ ನೂಕು ನುಗ್ಗಲು ಉಂಟಾಯಿತು. ನಿರಾಸೆಯಿಂದ ಅಭಿಮಾನಿಗಳು ಹಿಂತಿರುಗಿದರು. ಸಾರ್ವಜನಿಕರ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿತ್ತು.

ಭಾರತೀಯ ಚಿತ್ರರಂಗದ ಹೆಮ್ಮೆ ...

ಪುನೀತ್​ ರಾಜಕುಮಾರ್​ ನಿಧನಕ್ಕೆ ಬರೀ ಕನ್ನಡ ಚಿತ್ರರಂಗವಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗವೇ ಕಂಬನಿ ಮಿಡಿದಿದೆ. ಶನಿವಾರ ಹೈದರಾಬಾದ್​ನಲ್ಲಿ "ಪುಷ್ಪಕ ವಿಮಾನಂ' ಚಿತ್ರದ ಟ್ರೇಲರ್​ ಲಾಂಚ್​ ವೇಳೆ ಅಲ್ಲು ಅರ್ಜುನ್​ ಮತ್ತು ವಿಜಯ್​ ಇಬ್ಬರೂ, ಪುನೀತ್​ ಅವರನ್ನು ನೆನೆದರು. ಈ ಸಂದರ್ಭದಲ್ಲಿ ಮಾತನಾಡಿದ ಅಲ್ಲು ಅರ್ಜುನ್​, "ಪುನೀತ್​ ದೊಡ್ಡ ಸೂಪರ್​ಸ್ಟಾರ್​ ಆಗಿದ್ದವರು. ಕನ್ನಡ ಚಿತ್ರರಂಗಕ್ಕಾಗಿ ಸಾಕಷ್ಟು ದುಡಿದಿದ್ದರು. ದಣ ಭಾರತದಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದ ಹೆಮ್ಮೆ ಅವರು' ಎಂದು ಹೇಳಿದರು. ವಿಜಯ್​ ದೇವರಕೊಂಡ ಮಾತನಾಡಿ, "ನಾನು ಒಬ್ಬ ನಟನಾಗಿ ಹೇಳುತ್ತಿಲ್ಲ. ಒಬ್ಬ ಸ್ನೇಹಿತನಾಗಿ ಹೇಳುತ್ತಿದ್ದೇನೆ. ಇರುವಷ್ಟು ದಿನ ಸಂತೋಷವಾಗಿರಿ. ಎಲ್ಲರನ್ನೂ ಪ್ರೀತಿಸಿ. ನಿಮ್ಮ ಕುಟುಂಬದವರನ್ನು, ಬಂಧು&ಮಿತ್ರರನ್ನು ಪ್ರೀತಿಸಿ, ಸಹಕಾರ ನೀಡಿ. ಜೀವನ ತುಂಬಾ ಅನಿರೀತ' ಎಂದರು. ಇನ್ನು, "ಮಂಜಿ ರೋಜುಚಲ್ಲಾಯ್​' ಚಿತ್ರದ ಟ್ರೇಲರ್​ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ ಗೋಪಿಚಂದ್​, "ಬರೀ ಕನ್ನಡ ಚಿತ್ರರಂಗವಷ್ಟೇ ಅಲ್ಲ, ಇಡೀ ದೇಶ ಒಬ್ಬ ಒಳ್ಳೆಯ ವ್ಯಕ್ತಿಯನ್ನು ಕಳೆದುಕೊಂಡಿದೆ' ಎಂದು ನೊಂದು ನುಡಿದರು.

ಮಂಗಳವಾರದ ನಂತರ ಸಾರ್ವಜನಿಕರಿಗೆ ದರ್ಶನ

"ಕುಟುಂಬದವರು ಮಂಗಳವಾರ, ಹಾಲು&ತುಪ್ಪ ಕಾರ್ಯಕ್ರಮ ನೆರವೇರಿಸಿದ ನಂತರ, ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು' ಎಂದು ಹಿರಿಯ ನಟ ಹಾಗೂ ಪುನೀತ್​ ಅವರ ಸಹೋದರ ರಾವೇಂದ್ರ ರಾಜಕುಮಾರ್​ ತಿಳಿಸಿದ್ದಾರೆ. "ಮಂಗಳವಾರ ಹಾಲು&ತುಪ್ಪ ಕಾರ್ಯಕ್ರಮವಿರುತ್ತದೆ. ಅದರ ನಂತರ ಜನರಿಗೆ ದರ್ಶನದ ಅವಕಾಶ ಮಾಡಿಕೊಡಲಾಗುತ್ತದೆ. ದರ್ಶನಕ್ಕೆ ಮೂರು ದಿನಗಳ ಕಾಲ ಅವಕಾಶ ಕಲ್ಪಿಸಿರುವುದಕ್ಕೆ ಯಾರೂ ಬೇಸರಿಸಿಕೊಳ್ಳಬಾರದು. ಹಾಗೆ ಮಾಡುತ್ತಿರುವುದಕ್ಕೂ ಕಾರಣವಿದೆ. ಅಪ್ಪಾಜಿ ಅಂತ್ಯಕ್ರಿಯೆ ನಡೆದ ಮೇಲೆ, ನಾವು ಬರುವುದಕ್ಕಿಂತ ಮುನ್ನ ಹಲವರು ಬಂದು ಹಾಲು&ತುಪ್ಪ ಹಾಕಿದ್ದರು. ಇನ್ನೂ ಕೆಲವರು ಮಣ್ಣು ತೋಡಿದ್ದರು. ಅಂಥದ್ದಕ್ಕೆಲ್ಲ ಅವಕಾಶ ಆಗಬಾರದು. ಹಾಗಾಗಿ, ನಾವು ಮೊದಲು ಕಾರ್ಯ ಮಾಡಿದ ಮೇಲೆ ಜನರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಮೇಲಾಗಿ ಮಳೆ ಬಂದರೆ ಕಷ್ಟ ಆಗುತ್ತದೆ. ಹಾಗಾಗಿ, ಅಲ್ಲಿ ಒಂದಿಷ್ಟು ವ್ಯವಸ್ಥೆಗಳನ್ನು ಮಾಡಿ ಅವಕಾಶ ಮಾಡಿಕೊಡುತ್ತೇವೆ' ಎಂದು ರಾವೇಂದ್ರ ರಾಜಕುಮಾರ್​ ಹೇಳಿದರು.