ಸಿನಿವಾಣಿ

ಸಮಂತಾ ಸೂಸೈಡ್ ಬಾಂಬರ್...!

mcbhadrashetti

ಮನೋಜ್ ಬಾಜ್​ಪೇಯಿ ಅಭಿನಯದ ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್​ಸರಣಿಯು ಫೆಬ್ರವರಿ 12ರಂದು ಅಮೆಜಾನ್ ಪ್ರೈಮ್​ನಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಮುಂದೂಡಲಾಯ್ತು. ಇಂದು ಈ ವೆಬ್​ಸರಣಿಯ ಟ್ರೇಲರ್ ಬಿಡುಗಡೆಯಾಗುತ್ತಿದ್ದು, ಜೂನ್​ನಲ್ಲಿ ಸೀಸನ್ 2 ಹೊರಬರಲಿದೆ. ‘ದಿ ಫ್ಯಾಮಿಲಿ ಮ್ಯಾನ್’ನ ಎರಡನೆಯ ಸೀಸನ್​ನ ಹೈಲೈಟ್ ಎಂದರೆ ಅದು ನಟಿ ಸಮಂತಾ ಎಂದು ಹೇಳಲಾಗುತ್ತಿದೆ.

ಇದೇ ಮೊದಲ ಬಾರಿಗೆ ಅವರು ನೆಗೆಟಿವ್ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮೂಲಗಳ ಪ್ರಕಾರ ಸಮಂತಾ ಈ ವೆಬ್​ಸರಣಿಯಲ್ಲಿ ಸೂಸೈಡ್ ಬಾಂಬರ್ ಆಗಿ ಕಾಣಿಸಿಕೊಂಡಿದ್ದಾರಂತೆ. ಮೊದಲ ಸೀಸನ್ ನೋಡಿದವರಿಗೆ, ಮನೋಜ್ ಬಾಜ್​ಪೇಯಿ ಈ ವೆಬ್​ಸರಣಿಯಲ್ಲಿ ಭಯೋತ್ಪಾದಕರನ್ನು ಸದೆಬಡಿಯುವ ನ್ಯಾಷನಲ್ ಇನ್ವೆಸ್ಟಿಗೇಟಿವ್ ಏಜೆನ್ಸಿಯ ಏಜೆಂಟ್ ಆಗಿ ನಟಿಸಿದ್ದಾರೆ. ‘ದಿ ಫ್ಯಾಮಿಲಿ ಮ್ಯಾನ್’ ಸರಣಿಯನ್ನು ರಾಜ್ ಮತ್ತು ಡಿಕೆ ನಿರ್ದೇಶಿಸಿದ್ದಾರೆ. -ಏಜೆನ್ಸೀಸ್