Samantha Sobhita Controversy
- ನಾಗಚೈತನ್ಯ ಪತ್ನಿ ಶೋಭಿತಾ 'ಅಪೂರ್ಣ' ಹೇಳಿಕೆಗೆ ಸಮಂತಾ ಪರೋಕ್ಷವಾಗಿ ಕೌಂಟರ್
- ಮತ್ತೊಬ್ಬರ ಅನುಪಸ್ಥಿತಿಯಲ್ಲಿ ಶೂನ್ಯ ಎಂದಿದ್ದ ಶೋಭಿತಾ ಧೂಳಿಪಾಲ
- 'ಮಹಿಳೆಯರು ಪರಿಪೂರ್ಣರಾಗದಿದ್ದಾಗ ನಿರೀಕ್ಷೆಗಳು ಹೆಚ್ಚಾಗತ್ತೆ ಎಂದ ಸಮಂತಾ ರುತ್ ಪ್ರಭು
Samantha Sobhita Controversy :ಮಾ ಇಂಟಿ ಬಂಗಾರಂ' ಸಕ್ಸಸ್ ಮೀಟ್ನಲ್ಲಿ ನಟಿ ಸಮಂತಾ ರುತ್ ಪ್ರಭು ಕೊಟ್ಟಿರುವ ಹೇಳಿಕೆಯೊಂದು ಚರ್ಚೆಗೆ ಗ್ರಾಸವಾಗಿದೆ. ಸಂಬಂಧಗಳ ಕುರಿತು ಹಾಗೂ ಹೆಣ್ಣಿನ ಪರಿಪೂರ್ಣತೆ ಬಗ್ಗೆ ಮಾತನಾಡಿರುವುದು ನಟಿ ಶ್ವೇತಾ ಧೂಳಿಪಾಲಗೆ ಪರೋಕ್ಷವಾಗಿ ಕೊಟ್ಟಿರುವ ಕೌಂಟರ್ ಎನ್ನಲಾಗುತ್ತಿದೆ.
ಸಮಂತಾ ಹೇಳಿದ್ದಿಷ್ಟು
'ಕೆಲವೊಮ್ಮೆ ಸಂಬಂಧಗಳು ಜಟಿಲವಾಗಿರುತ್ತದೆ. ನಮ್ಮ ನಿಯಂತ್ರಣದಲ್ಲಿ ಇರೋದಿಲ್ಲ. ಅದನ್ನು ನಿಭಾಯಿಸಲು, ಸಂಬಂಧವನ್ನು ಪಾರದರ್ಶಕತೆಯಿಂದ, ಸುಖವಾಗಿ ಇಟ್ಟುಕೊಳ್ಳಲು ಇಬ್ಬರ ಸಹಕಾರ ಅಗತ್ಯವಿರುತ್ತದೆ ಎಂದರು. ಮುಂದುವರೆದು, ನನಗನಿಸಿದ್ದು ಏನೆಂದರೆ, ಮಹಿಳೆಯರಾದ ನಾವು ನಮ್ಮ ಮೇಲೆ ನಾವು ನಂಬಿಕೆಯನ್ನು ಇಟ್ಟುಕೊಳ್ಳಬೇಕು. ನಾವು ಪರಿಪೂರ್ಣರಾಗಿರಬೇಕೇ ಹೊರೆತು ಮತ್ಯಾರೋ ನಮ್ಮ ಬದುಕಿಗೆ ಬಂದು ಅವರಿಂದ
ಸಂಪೂರ್ಣಗೊಳ್ಳುತ್ತದೆ ಎಂದು ಕಾಯುತ್ತಾ ಕೂರುವುದು ಸರಿಯಲ್ಲ. ಹಾಗೇನಾದರೂ ಕಾದರೆ ನಮ್ಮ ಮುಂದಿರುವ ವ್ಯಕ್ತಿಯ ಮೇಲೆ ನಿರೀಕ್ಷೆಗಳೇ ಹೆಚ್ಚಾಗುತ್ತಾ ಹೋಗುತ್ತದೆ' ಎಂದು ಮಾತನಾಡಿದರು.
'ಬೇರೆಯವರು ನಮ್ಮ ಜೀವನವನ್ನು ಫುಲ್ಫಿಲ್ ಮಾಡಲಿ ಎಂದು ಕಾಯುವ ಪ್ರವೃತ್ತಿ ಉತ್ತಮ ಸಂಬಂಧ ಬೆಳೆಸಲು ಖಂಡಿತ ಒಳೆಯದಲ್ಲ. ಕಾಲ ಬಂದಾಗ ನಮಗೆ ಹೊಂದಿಕೆಯಾಗುವ ಸರಿಯಾದ ವ್ಯಕ್ತಿ ಸಿಗುತ್ತಾರೆ. ಅಲ್ಲಿಯವರೆಗೂ ಕಾಯಬೇಕು ಅಷ್ಟೇ' ಎಂದು ಹೇಳಿದರು.
ಸಂಬಂಧದ ಬಗ್ಗೆ ಶೋಭಿತಾ ಹೇಳಿದ್ದೇನು?
'ನನಗೆ ಅನಿಸಿದ್ದು ಏನೆಂದರೆ, ಮನುಷ್ಯ ಜೀವಿ ಒಂಟಿಯಾಗಿದ್ದಾಗ ಅಪೂರ್ಣನಾಗಿರುತ್ತಾನೆ. ಮತ್ತೊಬ್ಬ ವ್ಯಕ್ತಿ ನಮ್ಮ ಜೀವನಕ್ಕೆ ಪ್ರವೇಶಿಸಿದಾಗ ನಾವು ಸಂಪೂರ್ಣಗೊಳ್ಳುತ್ತೇನೆ ಎನ್ನುವುದನ್ನು ನಾನು ನಂಬಿದ್ದೇನೆ. ಅವರ ಅನುಪಸ್ಥಿತಿಯಲ್ಲಿ ನಾನು ಅಪೂರ್ಣಳು' ಎಂದು ನಾಗಚೈತನ್ಯ ಜೊತೆಗಿನ ಮದುವೆ ವೇಳೆ ನಡೆದ ಶೂಟಿಂಗ್ನಲ್ಲಿ ಮಾತನಾಡಿದ್ದರು.
ಈ ಶೂನ್ಯ, ಅಪೂರ್ಣವಾದಕ್ಕೆ ಸಮಂತಾ ಅವರು ಪರೋಕ್ಷವಾಗಿ ಕೊಟ್ಟ ಕೌಂಟರ್, ಮಹಿಳೆ ಎಂದಿಗೂ ಯಾರೋ ಬಂದು ಜೀವನವನ್ನು ಪೂರ್ಣಗೊಳಿಸುತ್ತಾರೆ ಎಂದು ಕಾಯಕೂಡದು,. ಮಹಿಳೆಯರು ತಾವೇ ಪರಿಪೂರ್ಣರಾಗಿರಬೇಕು ಎಂದು ಮಾ ಇಂಟಿ ಬಂಗಾರಂ ಕಾರ್ಯಕ್ರಮದಲ್ಲಿ ತಿಳಿಸಿದರು.
ನಾಗಚೈತನ್ಯ-ಶೋಭಿತಾ, ಸ್ಯಾಮ್ -ರಾಜ್ ಮದುವೆ
ಸಮಂತಾ ಮತ್ತು ನಾಗಚೈತನ್ಯ ಮಧ್ಯೆ ಪ್ರೀತಿ ಇತ್ತು. ಇಬ್ಬರು ಮದುವೆಯಾಗಿ ನಾಲ್ಕು ವರ್ಷ ಜೀವನ ನಡೆಸಿದ ನಂತರ 2021ರಲ್ಲಿ ಅಧಿಕೃತವಾಗಿ ಡಿವೋರ್ಸ್ ಪಡೆದುಕೊಂಡರು. 2024ರಲ್ಲಿ ಶೋಭಿತಾ ಧೂಳಿಪಾಲರೊಂದಿಗೆ ನಾಗಚೈತನ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಸಮಂತಾ ಸಹ ಕಳೆದ ವರ್ಷ ಡಿಸೆಂಬರ್ನಲ್ಲಿ ಫ್ಯಾಮಿಲಿ ಮ್ಯಾನ್ ವೆಬ್ಸೀರಿಸ್ ಖ್ಯಾತಿಯ ರಾಜ್ ನಿಡಿಮೂರುನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಹಿಂದೆ ರಾಜ್ನಿಡಿಮೂರುಗೆ ಮದುವೆಯಾಗಿತ್ತು 2022ರಲ್ಲಿ ಪತ್ನಿಗೆ ಡಿವೋರ್ಸ್ ಕೊಟ್ಟಿದ್ದರು ಎನ್ನಲಾಗಿದೆ, (ಏಜೆನ್ಸೀಸ್).