Samantha visit Tirupati ahead of Maa Inti Bangaaram release 
ಸಿನಿವಾಣಿ

'ಮಾ ಇಂಟಿ ಬಂಗಾರಂ' ರಿಲೀಸ್​​ಗೂ ಮುನ್ನ ಸ್ಯಾಮ್​ ಟೆಂಪಲ್​ ರನ್​; ಪತಿ, ಸಿನಿ ತಂಡದ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ..Samantha

ಪ್ರಮುಖ ಮುಖ್ಯಾಂಶಗಳು

  • ಮಾ ಇಂಟಿ ಬಂಗಾರಂ ಸಿನಿಮಾ ರಿಲೀಸ್​​ಗೂ ಮುನ್ನ ಸಮಂತಾ ಟೆಂಪಲ್​ ರನ್​
  • ತಿರುಮಲ ತಿರುಪತಿಯ ದೇವರ ದರ್ಶನ ಪಡೆದು ಕೊಂಡ ಸಿನಿಮಾ ತಂಡ
  • ರಾಜ್​ ನಿಡಿಮೋರು ಕೈ ಹಿಡಿದು ದೇವರ ದರ್ಶನ ಪಡೆದುಕೊಂಡ ಸಮಂತಾ ರುತ್​ ಪ್ರಭು
Samantha visit Tirupati ahead of Maa Inti Bangaaram release: ಬೆಳ್ಳಿ ತೆರೆಯ ಮೇಲೆ ಮಾ ಇಂಟಿ ಬಂಗಾರಂ ಸಿನಿಮಾ ರಿಲೀಸ್​​ ಆಗಲು ಸಜ್ಜಾಗಿದೆ. ಟ್ರೈಲರ್​ ಮೂಲಕವೇ ಸಿನಿಮಾಗೆ ಸಖತ್​​ ರೆಸ್ಪಾನ್ಸ್​ ಸಿಕ್ಕಿರುವ ಈ ಸಿನಿಮಾ ಯಶಸ್ಸಿಗಾಗಿ ನಟಿ ಸಮಂತಾ ಮತ್ತು ಚಿತ್ರ ತಂಡ ಟೆಂಪಲ್​ ರನ್​ ನಡೆಸುತ್ತಿದೆ.
ಹೌದು, ನಟಿ ಸಮಂತಾ ರುತ್​ ಪ್ರಭು ಅವರು ಪ್ರಚಾರದ ಬ್ಯುಸಿಯಾಗಿದ್ದಾರೆ. ಇದರ ಭಾಗವಾಗಿ ಬುಧವಾರ ತಮಿಳುನಾಡಿನ ಸಿಎಂ ಜೋಸೆಫ್ ವಿಜಯ್​ ಅವರನ್ನು ಭೇಟಿಯಾಗಿ ಮಾತನಾಡಿದ್ದರು. ಸದ್ಯ ಅವರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಂಡಿರುವ ವಿಡಿಯೋಗಳು ವೈರಲ್ ಆಗಿವೆ.

ತಿಮ್ಮಪ್ಪನ ದರ್ಶನ

ಇಂದು(ಜೂ.18) ಮಾ ಇಂಟಿ ಬಂಗಾರಂ ಸಿನಿಮಾ ರಿಲೀಸ್​ಗೂ ಮುನ್ನ ತಿರುಮಲ ತಿರುಪತಿಯ ದರ್ಶನ ಪಡೆದುಕೊಂಡಿದ್ದಾರೆ. ಅವರು ನಿರ್ದೇಶಕ ರಾಜ್​ ನಿಡಿಮೋರು, ಮಾ ಇಂಟಿ ಬಂಗಾರಂ ಸಿನಿಮಾದ ನಿರ್ದೇಶಕಿ ನಂದಿನಿ ರೆಡ್ಡಿ, ಸಮಂತಾ, ನಟಿ ಶ್ರೀ ಮುಖಿ ಕಾಣಿಸಿಕೊಂಡಿದ್ದಾರೆ.
ಸಿನಿಮಾ ಕತೆ ಏನು?
ನಂದಿನಿ ರೆಡ್ಡಿ ಅವರು ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಸಮಂತಾ ಅವರನ್ನು ಒಳ್ಳೆಯ ಫೈಟರ್​ ಆಗಿ ತೋರಿಸಿದ್ದಾರೆ. ಮೊದಲು ಈ ಸಿನಿಮಾ ಸ್ಪೈ ಕತೆಯನ್ನಾಧರಿಸಿದ್ದು ಎನ್ನಲಾಗಿತ್ತು. ಆದರೆ, ನಿರ್ದೇಶಕಿ ಸ್ಪಷ್ಟನೆ ಕೊಟ್ಟಿದ್ದು, ಇದು ಒಬ್ಬ ಮಹಿಳೆ ತನ್ನ ಕುಟುಂಬ ಎಂದು ಬಂದಾಗ ಎಷ್ಟೆಲ್ಲ ರಕ್ಷಣೆಗೆ ನಿಲ್ಲುತ್ತಾಳೆ ಎನ್ನುವುದು ಕತೆಯಹಂದರ ಎನ್ನಲಾಗಿದೆ.
ಇದೊಂದು ಸಸ್ಪೆನ್ಸ್​ ಥ್ರಿಲ್ಲರ್​, ಕಾಮಿಡಿ ಎಂಟರ್​ಟೇನ್​ಮೆಂಟ್​ ಸಿನಿಮಾವಾಗಿದೆ. ಕಥಾ ನಾಯಕಿ ತನ್ನ ಹಿಂದಿನ ದಿನಗಳ ರಹಸ್ಯವನ್ನು ಬಚ್ಚಿಟ್ಟು, ಹೊಸಜೀವನವನ್ನು ಆರಂಭಿಸುತ್ತಾರೆ. ಸಾಧಾರಣ ಗೃಹಿಣಿಯಾಗಿ ಬದುಕುವ ಹೊತ್ತಲ್ಲಿ ಎದುರಾಗುವ ಸವಾಲು, ಕುಟುಂಬದ ರಕ್ಷಣೆ ಹೇಗೆ ಮಾಡುತ್ತಾಳೆ ಎನ್ನುವುದು ಇದರ ಕತೆಯಾಗಿದೆ.

ಯಾರೆಲ್ಲ ಸಿನಿಮಾದಲ್ಲಿದ್ದಾರೆ

ಸಿನಿಮಾದಲ್ಲಿ ಸಮಂತಾ ಅವರು ನಟಿಸಿದ್ದಾರೆ. ನಾಯಕ ಕನ್ನಡದ ದೂದ್​ಪೇಡ ದಿಗಂತ್​ ಅವರು ನಟಿಸಿದ್ದಾರೆ. ಗೌತಮಿ, ಶ್ರೀಮುಖಿ, ಗುಲ್ಶನ್​ ದೇವಯ್ಯ ಸೇರಿದಂತೆ ಹೆಸರಾಂತ ನಟರು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಸಿನಿಮಾ ರಿಲೀಸ್​​ಗೂ ಮುನ್ನವೇ ಮಲಯಾಳಮ ನಟಿ ಪಾರ್ವತಿ ಸೇರಿದಂತೆ ಟಾಲಿವುಡ್​, ಕಾಲಿವುಡ್​ ನಟ ನಟಿಯರು ಶುಭಾಷಯ ಕೋರಿದ್ದಾರೆ.
ಸಾಯಿಪಲ್ಲವಿ ಮೊದಲ ಆಯ್ಕೆ
ಈ ಸಿನಿಮಾವನ್ನು ಸಾಯಿಪಲ್ಲವಿ ಅವರನ್ನು ಮನಸ್ಸಿನಲ್ಲಿಟ್ಟುಕೊಂಡು ಕತೆ ಬರೆಯಲಾಗಿತ್ತು. ಆದರೆ, ಕಾರಣಾಣತರಗಳಿಂದ ಸಿನಿಮಾದಲ್ಲಿ ಸಾಯಿಪಲ್ಲವಿ ನಟಿಸಲಾಗಲಿಲ್ಲ ಎಂದು ಸಮಂತಾ ಅವರು ಹೇಳಿಕೊಂಡಿದ್ದರು. ಇದನ್ನು ಉಲ್ಲೇಖಿಸಿ ಸಾಯಿಪಲ್ಲವಿ ಅವರು ಪೋಸ್ಟ್​ ಹಂಚಿಕೊಂಡಿದ್ದರು ಶೀಘ್ರದಲ್ಲೇ ಒಟ್ಟಾಗಿ ಕೆಲಸ ಮಾಡೋಣ ಎಂದಿದ್ದರು. ಓ ಬೇಬಿ ಸಿನಿಮಾದ ನಂತರ ನಂದಿನಿ ರೆಡ್ಡಿಯವರ ಜೊತೆಗೆ ಸಮಂತಾ ಕೆಲಸ ಮಾಡಿರುವ ಎರಡನೇ ಸಿನಿಮಾ ಇದಾಗಿದೆ,(ಏಜೆನ್ಸೀಸ್).