Samantha Pregnancy Confirmation 
ಸಿನಿವಾಣಿ

'ಸಾರಿ ನಾನು ಮತ್ತೊಂದು ಸಣ್ಣ ಬ್ರೇಕ್ ತೆಗೆದುಕೊಳ್ತೇನೆ'; ಪ್ರೆಗ್ನೆನ್ಸಿ ಗಾಸಿಪ್ಸ್​​ ಬೆನ್ನಲ್ಲೇ ಮೆಟರ್ನಿಟಿ ಲೀವ್ ಬಗ್ಗೆ ಸಮಂತಾ​ ಮಾತು..Samantha

ಪ್ರಮುಖ ಮುಖ್ಯಾಂಶಗಳು

  • ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಸಮಂತಾ ಹಾಗೂ ರಾಜ್​ ನಿಡಿಮೂರು ದಂಪತಿ
  • 'ಮಾ ಇಂಟಿ ಬಂಗಾರಂ' ಚಿತ್ರದ ಸಕ್ಸಸ್ ಮೀಟ್‌ನಲ್ಲಿ ಪ್ರೆಗ್ನಿಸಿ ವಿಚಾರ ಖಚಿತಪಡಿಸಿದ ಸಮಂತಾ
  • ಹೆರಿಗೆ ರಜೆ ಪಡೆದು, ಸಿನಿಮಾಕ್ಕೆ ಸಣ್ಣ ಗ್ಯಾಪ್​​ ನೀಡುವ ಬಗ್ಗೆ ಮಾಹಿತಿ ಹಂಚಿಕೊಂಡ ಸಮಂತಾ
Samantha Pregnancy Confirmation:  'ಮಾ ಇಂಟಿ ಬಂಗಾರಂ'ಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಸಿಗುತ್ತಿದೆ. ಬಾಕ್ಸ್​​ ಆಫೀಸ್​ನಲ್ಲಿ ಉತ್ತಮ ಗಳಿಕೆ ಕಾಣುತ್ತಿರುವ ಹೊತ್ತಲ್ಲೇ, ಗುಡ್ ನ್ಯೂಸ್​​ವೊಂದನ್ನು  ಸಮಂತಾ ಅವರು ತಮ್ಮ ಫ್ಯಾನ್ಸ್​​ಗೆ ಕೊಟ್ಟಿದ್ದಾರೆ. 'ಮಾ ಇಂಟಿ ಬಂಗಾರಂ' ಸಕ್ಸಸ್​ ಮೀಟ್​ನಲ್ಲಿ ತಾವು ಗರ್ಭಿಣಿ ಎಂಬ ವಿಷಯವನ್ನು ಅಧಿಕೃತವಾಗಿ ಹೇಳಿಕೊಂಡಿರುವ  ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಹೈದರಾಬಾದ್‌ನಲ್ಲಿ ಬುಧವಾರ ನಡೆದ 'ಮಾ ಇಂಟಿ ಬಂಗಾರಂ' ಚಿತ್ರದ ಯಶಸ್ಸಿನ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ವಾರಿ ನಾನು ಮತ್ತೊಂದು ಗ್ಯಾಪ್​ ಕೊಡ್ತಿದ್ದೇನೆ. ಈಗ ನಾನು ಮೆಟರ್ನಿಟಿ ರಜೆ ತೆಗೆದುಕೊಳ್ಳಬೇಕಾಗಿದೆ ಎಂದು ಹೇಳುವ ಮೂಲಕ ತಮ್ಮ ಪ್ರೆಗ್ನೆನ್ಸಿ  ಊಹಾಪೋಹಕ್ಕೆ ಬ್ರೇಕ್​ ಹಾಕಿದ್ದಾರೆ.
ಸ್ವಾರಿ ಗಾಯ್ಸ್​....
ಮಾ ಇಂಟಿ ಬಂಗಾರಂ ಪ್ರೆಸ್​​​ ಮೀಟ್​ನಲ್ಲಿ ಪತ್ರಕರ್ತರೊಬ್ಬರು, ಈ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಸಿನಿಮಾ ಮಾಡಿ ಮತ್ತೆ ಗ್ಯಾಪ್​ ಬೇಡ ಎಂದು ಮನವಿ ಮಾಡಿಕೊಂಡರು ಆಗ ಮಾತನಾಡಿದ ಸಮಂತಾ, 'ಸ್ವಾರಿ ಗಾಯ್ಸ್​​ ಸಿನಿಮಾದಿಂದ ನಾನು ಮತ್ತೊಂದು ಸಣ್ಣ  ವಿರಾಮವನ್ನು ತೆಗೆದುಕೊಳ್ಳುತ್ತಿದ್ದೇನೆ. ಅದಾದ ನಂತರ ಮತ್ತೆ ಮರಳಿ ಬರುತ್ತೇನೆ. ಮುಂದುವರೆದು, ನಿಜ ನಾನು ಮೆಟರ್ನಿಟಿ ಲೀವ್​(ಮಾತೃತ್ವ ರಜೆ) ಪಡೆದುಕೊಳ್ಳುತ್ತಿದ್ದೇನೆ. ನಾನು ತುಂಬಾನೆ ಸಂತೋಷವಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. 
ಮಾ ಇಂಟಿ ಬಂಗಾರಂ ಸಕ್ಸಸ್​ ಮೀಟ್​​ ಕಾರ್ಯಕ್ರಮದಲ್ಲಿ ಸಮಂತಾ ಅವರ ಪತಿ ರಾಜ್ ನಿಡಿಮೋರು, ಚಿತ್ರದ ನಿರ್ದೇಶಕಿ ಬಿ.ವಿ. ನಂದಿನಿ ರೆಡ್ಡಿ, ಶ್ರೀಮುಖಿ ಮತ್ತು ಶ್ರೀನಿವಾಸ್ ಗವಿರೆಡ್ಡಿ ಉಪಸ್ಥಿತರಿದ್ದರು. ಸಮಂತಾ ಅವರು ಈ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್ ವೇಳೆಗೆ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

ವದಂತಿಗೆ ಬ್ರೇಕ್​​

ಮಾ ಇಂಟಿ ಬಂಗಾರಂ ಸಕ್ಸಸ್​ ಮೀಟ್​ನಲ್ಲಿ ಸಮಂತಾ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದ ವಿಡಿಯೋಗಳು ವೈರಲ್ ಆಗಿದ್ದವು. ಆ ವೀಡಿಯೊಗಳಲ್ಲಿ ಸಮಂತಾ ತೆಳು ಬಣ್ಣದ ಟಿ-ಶರ್ಟ್ ಧರಿಸಿದ್ದು, ಅವರ ಬೇಬಿ ಬಂಪ್ ಸ್ಪಷ್ಟವಾಗಿ ಕಾಣುತ್ತಿರುವುದನ್ನು ಕಂಡು ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದರು.  ಸಮಂತಾ ಪ್ರೆಗ್ನೆಂಟ್​ ಎನ್ನುವ ವಿಚಾರ ಹರಿದಾಡಿತ್ತು. ಸದ್ಯ ಈ ಎಲ್ಲ  ವದಂತಿಗೆ ಅಧಿಕೃತವಾಗಿ ನಟಿ ಸಮಂತಾ ತೆರೆ ಎಳೆದಿದ್ದಾರೆ.

ನಂದಿನಿ ರೆಡ್ಡಿ ಹೇಳಿದ್ದೇನು?

ಕೆಲವು ದಿನಗಳ ಹಿಂದಷ್ಟೇ ಚಿತ್ರದ ನಿರ್ದೇಶಕಿ ನಂದಿನಿ ರೆಡ್ಡಿ ಕೂಡ ಸಮಂತಾ ಗರ್ಭಿಣಿಯಾಗಿರುವ ವಿಷಯವನ್ನು ಮಾಧ್ಯಮಗಳ ಮುಂದೆ ಖಾತ್ರಿಪಡಿಸಿದ್ದರು. 'ನಮ್ಮ 'ಮಾ ಇಂಟಿ ಬಂಗಾರಂ' ಸಿನಿಮಾ ದೊಡ್ಡ ಯಶಸ್ಸು ಕಂಡಿರುವ ಈ ಸುಂದರ ಸಮಯದಲ್ಲಿಯೇ ಸಮಂತಾ ಅವರ ಪ್ರೆಗ್ನೆನ್ಸಿ ಸುದ್ದಿ ಬಂದಿರುವುದು ಮತ್ತಷ್ಟು ಸಂತಸ ತಂದಿದೆ,' ಎಂದು ಅವರು ಹೇಳಿದ್ದರು.

 'ಮಾ ಇಂಟಿ ಬಂಗಾರಂ'ಗೆ ಗುಡ್​ ರೆಸ್ಪಾನ್ಸ್

2023 ರ 'ಖುಷಿ' ಚಿತ್ರದ ನಂತರ ಸಮಂತಾ ಅವರು ದೊಡ್ಡ ಪರದೆಗೆ ಕಂಬ್ಯಾಕ್ ಮಾಡಿರುವ ಚಿತ್ರ 'ಮಾ ಇಂಟಿ ಬಂಗಾರಂ'. ಈ ಚಿತ್ರವು ಪ್ರಸ್ತುತ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಾಣುತ್ತಿದೆ. ಇಲ್ಲಿಯವರೆಗೂ ಸಿನಿಮಾ 50 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಸಮಂತಾ ಅವರ ಅದ್ಭುತ ನಟನೆ ಮತ್ತು ಪ್ರೆಸೆಂಟೇಶನ್ ಚಿತ್ರವನ್ನು ಯಶಸ್ಸಿನತ್ತ ಮುನ್ನಡೆಸಿದೆ, (ಏಜೆನ್ಸೀಸ್).