ಸಿನಿವಾಣಿ

‘ಮೈನೆ ಪ್ಯಾರ್ ಕಿಯಾ’ಗೆ ಟ್ವಿಸ್ಟ್ ಕೊಟ್ಟ ಸಲ್ಮಾನ್ ... ಕರೊನಾ ಜಾಗೃತಿ ಮೂಡಿಸಿದ ಸಲ್ಲು ಭಾಯ್

ಲಾಕ್‌ಡೌನ್‌ನಿಂದ ತಮ್ಮ ಪನ್ವೇಲ್‌ನ ಫಾರ್ಮ್‌ಹೌಸ್‌ನಲ್ಲಿ ಬಂಧಿಯಾಗಿರುವ ಸಲ್ಮಾನ್ ಖಾನ್, ಅಲ್ಲಿಂದಲೇ ಸಿನಿಮಾ ಕಾರ್ಮಿಕರಿಗೆ ಸಹಾಯ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಕರೊನಾ ವಿರುದ್ಧ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇತ್ತೀಚೆಗೆ ಸಲ್ಮಾನ್, ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಒಂದು ವೀಡಿಯೋ ಶೇರ್ ಮಾಡಿದ್ದಾರೆ. ತಮ್ಮದೇ ಜನಪ್ರಿಯ ಚಿತ್ರ ‘ಮೈನೆ ಪ್ಯಾರ್ ಕಿಯಾ’ದ ಜನಪ್ರಿಯ ದೃಶ್ಯವೊಂದನ್ನು ತೆಗೆದುಕೊಂಡು, ಅದಕ್ಕೊಂದು ಹೊಸ ಟ್ವಿಸ್ಟ್ ಕೊಟ್ಟು ಕರೊನಾ ಕುರಿತು ಜಾಗೃತಿ ಮೂಡಿಸಿದ್ದಾರೆ.

‘ಮೈನೆ ಪ್ಯಾರ್ ಕಿಯಾ’ದ ಜನಪ್ರಿಯ ದೃಶ್ಯವೊಂದು ನಿಮಗೆ ನೆನಪಿರಬಹುದು. ಆ ದೃಶ್ಯದಲ್ಲಿ, ಕನ್ನಡಿಯೊಂದರ ಮೇಲೆ ಭಾಗ್ಯಶ್ರೀ ತಮ್ಮ ತುಟಿಗಳ ಅಚ್ಚನ್ನು ಬಿಟ್ಟು ಹೋಗಿರುತ್ತಾರೆ. ಸಲ್ಮಾನ್ ಬಂದು ಆ ತುಟಿಗಳ ಅಚ್ಚಿಗೆ ಚುಂಬಿಸುತ್ತಾರೆ. ಇದಕ್ಕೆ ಹೊಸ ಟ್ವಿಸ್ಟ್ ಕೊಟ್ಟಿರುವ ಸಲ್ಮಾನ್ ಖಾನ್, ಆ ಕಿಸ್ ಮಾರ್ಕ್‌ಗೆ ಮುತ್ತಿಡುವ ಬದಲು ಸ್ಯಾನಿಟೈಸರ್​ ಸ್ಪ್ರೇ ಮಾಡಿ ಒರೆಸುತ್ತಾರೆ. ಸಲ್ಮಾನ್ ಕೊಟ್ಟಿರುವ ಈ ಟ್ವಿಸ್ಟ್‌ಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ಸಲ್ಮಾನ್ ಈಸ್ಟರ್‌ಗೆ ಶುಭ ಕೋರುವುದರ ಜತೆಗೆ, ಸ್ಟೇ ಸ್ಟ್ರಾಂಗ್ ಎಂದು ಅಭಿಮಾನಿಗಳಿಗೆ ಸಂದೇಶ ಸಹ ಕೊಟ್ಟಿದ್ದಾರೆ.