ಸಿನಿವಾಣಿ

ಬೇಗ ಚೇತರಿಸಿಕೊಳ್ಳಿ ಸರ್​, ಇಂತಿ ನಿಮ್ಮ ದಿಲ್​ ದಿವಾನಾ ಹೀರೋ ಪ್ರೇಮ್​...

ಮುಂಬೈ: ಎಸ್​ಪಿ ಬಾಲಸುಬ್ರಮಣ್ಯಂ ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಇಡೀ ಭಾರತೀಯ ಚಿತ್ರರಂಗ ಅವರ ಚೇತರಿಕೆಗಾಗಿ ಪ್ರಾರ್ಥಿಸುತ್ತಿದೆ. ಚೆನ್ನೈನಲ್ಲಿನ ಎಂಜಿಎಂ ಆಸ್ಪತ್ರೆಗೆ ಈಗಷ್ಟೇ ಕಮಲ್​ ಹಾಸನ್​ ಭೇಟಿ ನೀಡಿ ಎಸ್​ಪಿಬಿ ಸ್ಥಿತಿಗತಿ ವಿಚಾರಿಸಿದ್ದಾರೆ. ಇದೀಗ ಬಾಲಿವುಡ್​ ನಟ ಸಲ್ಮಾನ್​ ಖಾನ್​ ನೆಚ್ಚಿನ ಗಾಯಕನ ಚೇತರಿಕೆಗಾಗಿ ಪ್ರಾರ್ಥಿಸಿದ್ದಾರೆ.

ಸಲ್ಮಾನ್​ ಖಾನ್​ ಅವರ ಬಹುತೇಕ ಸಿನಿಮಾಗಳಿಗೆ ಎಸ್​ಪಿಬಿ ಧ್ವನಿ ನೀಡಿದ್ದಾರೆ. ‘ಬಾಲಸುಬ್ರಮಣ್ಯಂ ಸರ್​, ನನ್ನ ಹೃದಯಾಂತರಾಳದಿಂದ ನಿಮ್ಮ ಚೇತರಿಕೆಗಾಗಿ ನಾನು ಪ್ರಾರ್ಥಿಸುತ್ತಿದ್ದೇನೆ. ಆದಷ್ಟು ಬೇಗ ಗುಣಮುಖರಾಗಿ ಬನ್ನಿ. ನನ್ನ ಎಲ್ಲ ಸಿನಿಮಾಗಳ ಹಾಡುಗಳಿಗೆ ಧ್ವನಿಯಾಗಿದ್ದಕ್ಕೆ ಧನ್ಯವಾದ. ನಿಮ್ಮ ಪ್ರೀತಿಯ ದಿಲ್​ ದಿವಾನಾ ಹೀರೋ ಪ್ರೇಮ್​, ಲವ್​ ಯೂ ಸರ್​..’ ಎಂದು ಟ್ವೀಟ್​ ಮಾಡಿದ್ದಾರೆ.

ಎಸ್​ಪಿಬಿ ಆಸ್ಪತ್ರೆಗೆ ದಾಖಲಾಗಿ ಒಂದು ತಿಂಗಳ ಮೇಲಾಯಿತು. ಕರೊನಾ ನೆಗೆಟಿವ್​ ಬಂದಿದ್ದರೂ ಶ್ವಾಸಕೋಶ ಸಮಸ್ಯೆಯಿಂದ ಅವರು ಬಳಲುತ್ತಿದ್ದಾರೆ. ಈ ಮಧ್ಯೆ ಸ್ವಲ್ಪ ಚೇತರಿಸಿಕೊಂಡಿದ್ದ ಗಾಯಕನ ಆರೋಗ್ಯ ಇಂದು ಮತ್ತೆ ಹದಗೆಟ್ಟಿದೆ. ಇತ್ತ ಅಭಿಮಾನಿ ವಲಯದಲ್ಲಿಯೂ ಆತಂಕ ಮನೆ ಮಾಡಿದ್ದು, ಅವರ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದಾರೆ. (ಏಜೆನ್ಸೀಸ್​)