ಸಿನಿವಾಣಿ

ಸಿನಿಮಾಗಳು ನಷ್ಟವಾಗುವುದು ನನಗೆ ಇಷ್ಟವಿಲ್ಲ, ದಕ್ಷಿಣದ ಸಿನಿಮಾಗಳೇ ಬೆಸ್ಟ್​ ಎಂದ ಸಲ್ಲು!

ಮುಂಬೈ: ಸದ್ಯ ಭಾರತೀಯ ಚಿತ್ರರಂಗದಲ್ಲಿ ದಕ್ಷಿಣ ಭಾರತದ ಸಿನಿಮಾಗಳ ಹವಾ ಜೋರಾಗಿಯೇ ಇದೆ. ಇದನ್ನು ಸ್ವತಃ ಬಾಲಿವುಡ್​ ಕೂಡ ಒಪ್ಪಿಕೊಂಡಿದೆ.

ಒಂದು ಕಾಲದಲ್ಲಿ ಬಾಲಿವುಡ್​​ ಮಾತ್ರವೇ ಭಾರತದ ಸಿನಿಮಾಗಳು ಎಂಬಂತೆ ಬಿಂಬಿಸಲಾಗಿತ್ತು, ಇದೀಗ ಕಾಲ ಹಾಗೂ ಜನರ ಅಭಿರುಚಿಯೂ ಬದಲಾಗಿದ್ದು, ಸದ್ಯ ಭಾರತೀಯ ಚಿತ್ರರಂಗದಲ್ಲಿ ದಕ್ಷಿಣ ಸಿನಿಮಾಗಳ ಪಾರುಪತ್ಯ ಆರಂಭವಾಗಿದೆ.

ಸುದೀಪ್​ ನಟನೆಯ ವಿಕ್ರಾಂತ್​ ರೋಣ ಕನ್ನಡ ಸಿನಿಮಾ ಇದೀಗ ಭಾರೀ ಸದ್ದು ಮಾಡುತ್ತಿದೆ. ಕೆಜಿಎಫ್​ ಬಳಿಕ ನಿರೀಕ್ಷೆ ಮೂಡಿಸಿರುವ ಈ ಚಿತ್ರ ಸದ್ಯದಲ್ಲೇ ಬಹುಭಾಷೆಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

ಇನ್ನು ಪ್ರಚಾರ ಕೈಗೊಂಡಿರುವ ನಟ ಸುದೀಪ್​​ ಮುಂಬೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್ ಕೂಡ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಸಲ್ಮಾನ್​ ಖಾನ್​, ದಕ್ಷಿಣ ಭಾರತದ ಸಿನಿಮಾವನ್ನು ಮತ್ತೆ ಹಾಡಿಹೊಗಳಿದ್ದಾರೆ. ನನಗೆ ಸಿನಿಮಾಗಳು ನಷ್ಟ ಅನುಭವಿಸುವುದು ಹಿಡಿಸುವುದಿಲ್ಲ, ಹಾಗೆ ದಕ್ಷಿಣ ಭಾರತದ ಸಿನಿಮಾಗಳು ಕೂಡ ಉತ್ತಮ ಪ್ರದರ್ಶನವನ್ನು ನೀಡುತ್ತಿವೆ ಎಂದಿದ್ದಾರೆ. (ಏಜೆನ್ಸೀಸ್​)