- ಸಲ್ಮಾನ್ ಖಾನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರಹಸ್ಯ ಪೋಸ್ಟ್ ಇದೀಗ ಎಲ್ಲೆಡೆ ಸಂಚಲನ ಮೂಡಿಸಿದೆ
- ಪೋಸ್ಟ್‌ನಲ್ಲಿ ತಾವೊಬ್ಬಂಟಿ ಎಂಬ ಅರ್ಥ ಬರುವಂತೆ ಬರೆದುಕೊಂಡಿರುವುದು ಈಗ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ
- ಒಂಟಿತನ ಎಂದರೆ ಅದು ನಮ್ಮ ಆಯ್ಕೆ. ಯಾರೂ ನಿಮ್ಮೊಂದಿಗೆ ಇರಲು ಬಯಸದಿದ್ದಾಗ ಕಾಡುವುದು ನಿಜವಾದ ಒಂಟಿತನ
ಮುಂಬೈ: ಇತ್ತೀಚಿಗೆ ಬಾಲಿವುಡ್‌ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman Khan) ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಒಂದು ರಹಸ್ಯ ಪೋಸ್ಟ್ ಇದೀಗ ಎಲ್ಲೆಡೆ ಸಂಚಲನ ಮೂಡಿಸುತ್ತಿದೆ. ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವ ಆಗಿರುವ ನಟ ಸಲ್ಮಾನ್, ತಮ್ಮ ಪೋಸ್ಟ್‌ನಲ್ಲಿ ತಾವೊಬ್ಬಂಟಿ ಎಂಬ ಅರ್ಥ ಬರುವಂತೆ ಬರೆದುಕೊಂಡಿರುವುದು ಈಗ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮತ್ತು ಆತಂಕವನ್ನು ಉಂಟುಮಾಡಿದೆ.
ಒಂಟಿತನದ ಬಗ್ಗೆ ಸಲ್ಮಾನ್ ಖಾನ್ ಅವರ ನಿಗೂಢ ಪೋಸ್ಟ್!
ಸಲ್ಮಾನ್ಖಾನ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಭಾನುವಾರ (ಮೇ 17), ಒಬ್ಬಂಟಿಯಾಗಿರುವುದು (Alone) ಮತ್ತು ಒಂಟಿತನದ (Lonely) ಚಿಂತನಶೀಲ ಶೀರ್ಷಿಕೆಯೊಂದಿಗೆ ಪೋಸ್ಟ್ ಹಂಚಿಕೊಂಡಿದ್ದಾರೆ.
ನಾನು ನನ್ನಿಂದ, ನಿಮ್ಮಿಂದ ಒಬ್ಬಂಟಿಯಾಗಿರಲು 2 ಮಾರ್ಗಗಳು - ಒಬ್ಬಂಟಿ(Alone) ಮತ್ತು ಒಂಟಿತನ (Lonely). ಒಂಟಿತನ ಎಂದರೆ ಅದು ನಮ್ಮ 'ಆಯ್ಕೆ' (Choice) ಆಗಿರುತ್ತದೆ. ಆದರೆ, ಯಾರೂ ನಿಮ್ಮೊಂದಿಗೆ ಇರಲು ಬಯಸದಿದ್ದಾಗ ಕಾಡುವುದು ನಿಜವಾದ ಒಂಟಿತನ... ನೀವು ಏನು ಮಾಡಬೇಕೆಂದು ಲೆಕ್ಕಾಚಾರ ಮಾಡಿದರೆ ಸಾಕು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅಭಿಮಾನಿಗಳು ಮಾತ್ರವಲ್ಲದೇ, ಹಳೆಯ ನಟಿ ಸ್ನೇಹಾ ಉಲ್ಲಾಲ್ ಕೂಡಾ ಪ್ರತಿಕ್ರಿಯಿಸಿ, "ಉಫ್ಫ್ ಅದೀ, ಲಕ್ಕಿ ಸಮಯದಲ್ಲಿ ನೀವು ಇದನ್ನೆಲ್ಲಾ ಏಕೆ ಮಾಡಲಿಲ್ಲ?" ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು ಲಕ್ಷಾಂತರ ಜನರು ನಿಮ್ಮೊಂದಿಗೆ ಇರಲು ಬಯಸಿದಾಗ ಅದೇಗೆ ಒಂಟಿಯಾಗಿದ್ದೀರಿ ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬ ಬಳಕೆದಾರ ಒಂಟಿಯಾಗಿರುವುದು ಶಾಂತಿಯುತವಾಗಿರಬಹುದು, ಆದರೆ ಒಂಟಿತನವು ನಿಧಾನವಾಗಿ ವ್ಯಕ್ತಿಯನ್ನು ಒಳಗಿನಿಂದ ಮುರಿಯುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.
ಬಾಲಿವುಡ್‌ನ ಅತ್ಯಂತ ಪ್ರಭಾವಶಾಲಿ ಮತ್ತು ಜನಪ್ರಿಯ ನಟರಲ್ಲಿ ಸಲ್ಮಾನ್ ಖಾನ್ ಕೂಡಾ ಒಬ್ಬರು. ಹಮ್ ಆಪ್ಕೆ ಹೈ ಕೌನ್, ದಬಾಂಗ್, ಬಜರಂಗಿ ಭಾಯಿಜಾನ್ ಮತ್ತು ಟೈಗರ್ ಸರಣಿಯಂತಹ ಹಲವಾರು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ಆದಾಗ್ಯೂ, ನಟ ತಮ್ಮ ಮುಂಬರುವ ಚಿತ್ರಗಳಾದ ಸಿಕಂದರ್, ಕಿಕ್ 2 ಮತ್ತು ಟೈಗರ್ ವರ್ಸಸ್ ಪಠಾಣ್ ಚಿತ್ರಗಳಲ್ಲಿ ನಟಿಸುತ್ತಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ (ಏಜೆನ್ಸೀಸ್).