ಸಿನಿವಾಣಿ

ಬಿಹಾರದಲ್ಲಿ ಸಲ್ಮಾನ್ ಸಿನಿಮಾ ಬ್ಯಾನ್​? ಸಿಡಿದೆದ್ದ ಸುಶಾಂತ್​ ಅಭಿಮಾನಿಗಳು

ನವದೆಹಲಿ: ಸುಶಾಂತ್ ಸಿಂಗ್ ರಜಪೂತ್ ಸಾವಿನ ಬೆನ್ನಲ್ಲೇ ಬಾಲಿವುಡ್​ನಲ್ಲಿ ನೆಪೋಟಿಸಂ ಗಾಳಿ ಜೋರಾಗಿಯೇ ಬೀಸುತ್ತಿದೆ. ಸ್ಟಾರ್ ನಟ, ನಿರ್ವಪಕರಂತೂ ಇದರಿಂದ ತತ್ತರಿಸಿ ಹೋಗಿದ್ದಾರೆ.

ಅದ್ಯಾವ ಮಟ್ಟಿಗೆ ಎಂದರೆ, ಜಾಲತಾಣಗಳಲ್ಲಿ ಸಿನಿಮಾ ಬ್ಯಾನ್​ಗೆ ಅಭಿಯಾನವನ್ನೇ ಶುರು ಮಾಡಿದ್ದಾರೆ. ಆ ಪೈಕಿ ಇದೀಗ ಸಲ್ಮಾನ್ ಖಾನ್, ಆಲಿಯಾ ಭಟ್ ಮತ್ತು ನಿರ್ವಪಕ ಕರಣ್ ಜೋಹರ್​ಗೆ ಬ್ಯಾನ್ ಬಿಸಿ ತಟ್ಟಿದೆ.

ಬಿಹಾರದಲ್ಲಿ ಈ ಮೂವರ ಸಿನಿಮಾಗಳನ್ನು ಬ್ಯಾನ್ ಮಾಡಲು ಸುಶಾಂತ್ ಅಭಿಮಾನಿಗಳು ಕರೆಕೊಟ್ಟಿದ್ದು, ಈ ಸ್ಟಾರ್​ಗಳ ಫೋಟೋಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಾಲಿವುಡ್​ನಲ್ಲಿ ಸಲ್ಮಾನ್ ಮತ್ತು ಕರಣ್ ನೆಪೋಟಿಸಂ (ಸ್ವಜನಪಕ್ಷಪಾತ) ಪೋಷಿಸುತ್ತಿದ್ದಾರೆ ಎಂಬ ಆರೋಪದಡಿ, ಇತ್ತೀಚೆಗಷ್ಟೇ ಒಟ್ಟಾರೆ 8 ಮಂದಿ ವಿರುದ್ಧ ಬಿಹಾರದ ಮುಜಾಫರ್​ಪುರ ಕೋರ್ಟ್ ನಲ್ಲಿ ದೂರು ದಾಖಲಾಗಿತ್ತು. -ಏಜೆನ್ಸೀಸ್