Producer Recalls about Salman Khan Hair Injections 
ಸಿನಿವಾಣಿ

'ಕೂದಲಿಗೆ ಇಂಜೆಕ್ಷನ್​ ತಗೊಳ್ತಾ ಬಿರಿಯಾನಿ ತಿಂತಿದ್ರು'; ಸಲ್ಮಾನ್​ ಖಾನ್​ ಯಂಗ್​ ಲುಕ್ ಹಿಂದಿನ ರಹಸ್ಯ ಬಿಚ್ಚಿಟ್ಟ ನಿರ್ಮಾಪಕ.. Salman Khan

ಪ್ರಮುಖ ಮುಖ್ಯಾಂಶಗಳು

  • ಪ್ಲೇಟ್ಲೆಟ್-ರಿಚ್ ಪ್ಲಾಸ್ಮಾ ಟ್ರೀಟ್​ಮೆಂಟ್​ಗೆ ಒಳಗಾದ ಸಲ್ಮಾನ್​ ಖಾನ್ ಬಗ್ಗೆ ನಿರ್ಮಾಪಕ ಶೈಲೇಂದ್ರ ಸಿಂಗ್ ಮಾತು.
  • ಕನ್ನಡಿ ನೋಡ್ತಾ ಊಟ ಮಾಡುವುದು ಬಾಲಿವುಡ್​ ನಟ ಸಲ್ಮಾನ್​ ಖಾನ್ ಅಭ್ಯಾಸವಂತೆ.
  • ಸ್ಟಾರ್ ಹೀರೋ ಆಗಿಯೇ ಉಳಿದುಕೊಳ್ಳಲು ಬೆಲೆ ತೆರಬೇಕಾಗುತ್ತೆ ಎಂದು ಹೇರ್​ ಟ್ರೀಟ್​ಮೆಂಟ್ ಮಾಡಿಸಿಕೊಂಡಿದ್ದ ಸಲ್ಮಾನ್​.
Producer Recalls about Salman Khan Hair Injections: ಸಲ್ಮಾನ್​ ಖಾನ್​ ಒಬ್ಬರು ಬಾಲಿವುಡ್​​​​ನ ಎವರ್​ಗ್ರೀನ್​ ನಟ, ಶಾರುಖ್​ ಖಾನ್​, ಹೃತಿಕ್​ ರೋಷನ್​ನಂತೆ ಈ ನಟನಿಗೆ ತನ್ನದೇ ಆದ ಫ್ಯಾನ್​ ಬೇಸ್​​ ಇಂದಿಗೂ ಇದೆ. ಅವರ ದೇಹದ ಫಿಟ್​ನೆಸ್​, ಯಂಗ್​ ಆಗಿ ಕಾಣಿಸುವ ವಿಧಾನ, ಸ್ಟೈಲಿಶ್​ನೆಸ್​​, ನಗು, ಅಸ್ಸಾಂ ಪ್ರವಾಹ ಎನ್ನುತ್ತಲೇ ಸಂತ್ರಸ್ತರಿಗೆ ಆಹಾರ ಕಿಟ್ ಕಳುಹಿಸಿ​ ಕೊಟ್ಟ ತಾಯಿಯಂತಹ ಸ್ವಭಾವ, ಸಿಜೆಪಿ ಪರ ನಿಂತಿದ್ದು ಇವೆಲ್ಲವು ಅವರ ಮೇಲಿನ ಪ್ರೇಮವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡತ್ತೆ.
ಇತ್ತೀಚೆಗೆ ಸಲ್ಮಾನ್​ ಖಾನ್​ ಅವರ ಕೆಲವೊಂದು ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡಿದ್ದವು. ಆ ಬಗ್ಗೆ ಮತ್ತು ನಟನ ಸ್ವಭಾವ ಹೇಗಿತ್ತು, ಯೌವನದ ಹಿಂದಿರುವ ಅಸಲಿ ಸತ್ಯ ಏನು ಎನ್ನುವ ಬಗ್ಗೆ ಅಚ್ಚರಿ ವಿಚಾರಗಳನ್ನು ಪಾಡ್​ಕಾಸ್ಟ್​ವೊಂದರಲ್ಲಿ ನಿರ್ಮಾಪಕ ಶೈಲೇಂದ್ರ ಸಿಂಗ್​ ಬಿಚ್ಚಿಟ್ಟಿದ್ದಾರೆ.

ಸೂಪರ್​ ಸ್ಟಾರ್​​ ತಲೆ ಬೋಳಾಗುತ್ತಿದೆ

ಸನ್‌ಬರ್ನ್ ಫೆಸ್ಟಿವಲ್‌ನ ಸಹ-ಸಂಸ್ಥಾಪಕ ಹಾಗೂ ನಿರ್ಮಾಪಕ ಶೈಲೇಂದ್ರ ಸಿಂಗ್​ ಹೇಳಿದ್ದು ಹೀಗೆ, ವರ್ಷಗಳ ಹಿಂದೆ ಸಲ್ಮಾನ್​ ಖಾನ್​ ಅವರು ಮನೆಯಲ್ಲಿ ಗೆಟ್​​ ಟುಗೆದರ್​ ಪಾರ್ಟಿ ಇತ್ತು. ಸಾಕಷ್ಟು ಜನ ಇದ್ದರು. ಈ ವೇಳೆ ಅವರ ಸೆಲಬ್ರೆಟಿ ಮ್ಯಾನೇಜರ್​ ರೇಷ್ಮಾ ಶೆಟ್ಟಿ. ಸೂಪರ್​ ಸ್ಟಾರ್​​ ತಲೆ ಬೋಳಾಗುತ್ತಿದೆ ಎಂದು ಹೇಳಿದ್ದರು. ಇದರಿಂದ ಚಿಂತೆಗೊಳಗಾದ ಸಲ್ಮಾನ್​, ಹೇರ್​ ಟ್ರೇಟ್​ಮೆಂಟ್​ಗಾಗಿ ಹುಡುಕಾಟ ಶುರು ಮಾಡಿದ್ದರು.

ಕನ್ನಡಿ ನೋಡ್ತಾ ಊಟ ಮಾಡ್ತಿದ್ದ ಸಲ್ಮಾನ್​

ಆ ದಿನಗಳಲ್ಲಿ ನಾವು ಸೋಮವಾರ ರಾತ್ರಿ ಪಾರ್ಟಿ ಮಾಡುತ್ತಿದ್ದೆವು. ಅವರು ಡೈನಿಂಗ್ ಟೇಬಲ್‌ನಲ್ಲಿ ಕುಳಿತುಕೊಂಡು ಊಟ ಮಾಡುತ್ತಾ, ಕನ್ನಡಿಯಲ್ಲೇ ತಮ್ಮನ್ನು ತಾವೇ ನೋಡಿಕೊಳ್ಳುತ್ತಿದ್ದರು. ಅವರಿಗೆ ಆ ಪ್ರಕ್ರಿಯೆ ತುಂಬಾನೆ ಖುಷಿ ಕೊಡತ್ತೆ. ಅಡುಗೆಮನೆಯಲ್ಲಿ ಒಂದು ಸಣ್ಣ ಮೇಜಿನ ಮುಂದೆ ಕನ್ನಡಿಯಿದೆ, ಹಾಗಾಗಿ ನೀವು ಅವರ ಪಕ್ಕದಲ್ಲೇ ಕುಳಿತಿದ್ದರೂ ಸಹ, ವಾಸ್ತವವಾಗಿ ನೀವು ಕನ್ನಡಿಯ ಮೂಲಕವೇ ಮಾತನಾಡುತ್ತಿರುತ್ತೀರಿ ಎಂದು ಶೈಲೇಂದ್ರ ಹೇಳಿದರು.
ಇಬ್ಬರ ನಡುವಿನ ಸಂಭಾಷಣೆ ಮುಂದುವರಿದಿರುವಾಗಲೇ, ವೈದ್ಯಕೀಯ ಉಪಕರಣಗಳನ್ನು ಹಿಡಿದುಕೊಂಡು ವ್ಯಕ್ತಿಯೊಬ್ಬ ರೂಮ್‌ಗೆ ಪ್ರವೇಶಿಸಿ, ಕೈಗೆ ಗ್ಲೌಸ್ ಧರಿಸಿ ಸಲ್ಮಾನ್ ಅವರ ತಲೆಗೆ ಇಂಜೆಕ್ಷನ್ ನೀಡಲು ಶುರು ಮಾಡಿದಾಗ, ಏನಿದು ವಿಚಿತ್ರ ಎಂದು ಆತಂಕಕ್ಕೆ ಒಳಗಾದೆ ಎಂದು ಶೈಲೇಂದ್ರ ವಿವರಿಸಿದರು.

ಊಟ ಮಾಡ್ತಾ ಇಂಜೆಕ್ಷನ್ ಚುಚ್ಚಿಸಿಕೊಂಡಿದ್ರು

ಮುಂದುವರೆದು, ಸಲ್ಮಾನ್​​​ ಬಿರಿಯಾನಿ ತಿನ್ನುತ್ತಿದ್ದರು. ಸಲ್ಮಾನ್​ಗೆ ಊಟ ಅಂದ್ರೆ ಎಷ್ಟು ಇಷ್ಟ ಎಂದು ಎಲ್ಲರಿಗೂ ಗೊತ್ತೆ ಇದೆ. ವಿಶೇಷವಾಗಿ ಸ್ವಲ್ಪ ಕುಡಿದ ನಂತರ. ಹಠಾತ್ತನೆ, ವಿಚಿತ್ರವಾಗಿ ಕಾಣುವ ಆ ವ್ಯಕ್ತಿ ಒಳಗೆ ಬರುತ್ತಾನೆ. ಗ್ಲೌಸ್ ಹಾಕಿಕೊಳ್ಳುತ್ತಾನೆ, ಸೂಜಿಯನ್ನು ಹೊರತೆಗೆದು ಅವರ ತಲೆಗೆ ಇಂಜೆಕ್ಷನ್ ಕೊಡಲು ಪ್ರಾರಂಭಿಸುತ್ತಾನೆ. ನಾನು ಕನ್ನಡಿಯ ಮೂಲಕ ಇದೆಲ್ಲವನ್ನೂ ನೋಡುತ್ತಾ, ಇಲ್ಲಿ ಏನು ನಡೀತಿದೆ ಭಗವಂತನೇ?' ಎಂದುಕೊಂಡೆ ಎಂದು ಹೇಳಿದರು.
ಈ ಎಲ್ಲ ವಿದ್ಯಾಮಾನ ಕಂಡು ಕುತೂಹಲದಿಂದ ಏನಾಗ್ತಿದೆ ಇಲ್ಲಿ ಎಂದು ಕೇಳಿದೆ ಆಗ ಸ್ಟಾರ್ ಹೀರೋ ಆಗಿಯೇ ಉಳಿದುಕೊಳ್ಳಲು ಬೆಲೆ ತೆರಬೇಕಾಗುತ್ತದೆ ಬ್ರೋ ಎಂದು ಸಲ್ಮಾನ್​ ಖಾನ್​ ಹೇಳಿ ಚಿಕಿತ್ಸೆ ಮುಂದುವರೆಯುವವರೆಗೂ ಊಟ ಮಾಡೋದನ್ನು ಮುಂದುವರೆಸಿದ್ರು ಎಂದು ಶೈಲೇಂದ್ರ ಮೈ ನಡುಗಿಸುವ ಘಟನೆ ಬಗ್ಗೆ ಮಾಹಿತಿ ಬಿಚ್ಚಿಟ್ಟರು.

ಪ್ಲೇಟ್ಲೆಟ್-ರಿಚ್ ಪ್ಲಾಸ್ಮಾ ಅಂದು ಕಾನೂನು ಬಾಹಿರ

ಸಲ್ಮಾನ್ ಪ್ಲೇಟ್ಲೆಟ್-ರಿಚ್ ಪ್ಲಾಸ್ಮಾ (PRP) ಥೆರಪಿಗೆ ಒಳಗಾಗುತ್ತಿದ್ದಾರೆ ಎಂಬುದು ತಿಳಿಯಿತು. ಇದು ವ್ಯಕ್ತಿಯ ಸ್ವಂತ ರಕ್ತದಿಂದ ಪಡೆಯಲಾದ ಪ್ಲಾಸ್ಮಾವನ್ನು ಬಳಸಿ ಕೂದಲು ಮರುಸ್ಥಾಪನೆಗಾಗಿ ಸಾಮಾನ್ಯವಾಗಿ ಬಳಸುವ ಚಿಕಿತ್ಸೆಯಾಗಿದೆ. ಅವರು ನಿಮ್ಮ ರಕ್ತವನ್ನು ತೆಗೆದುಕೊಳ್ಳುತ್ತಾರೆ. ಅದನ್ನು ಲ್ಯಾಬ್‌ನಲ್ಲಿ ಬಲಪಡಿಸುತ್ತಾರೆ. ಆ ಸಮಯದಲ್ಲಿ ಅದು ಕಾನೂನುಬಾಹಿರವಾಗಿತ್ತು" ಎಂದರು.
ಈ ಚಿಕಿತ್ಸೆಗೆ ಈಗ ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳು ಒಳಗಾಗುತ್ತಿದ್ದಾರೆ ಎಂದು ಹೇಳಿಕೊಂಡ ನಿರ್ಮಾಪಕರು, ಆಗ ನನಗೆ ಅದು ಏನೆಂದು ತಿಳಿದಿರಲಿಲ್ಲ. ಈಗ ಪ್ರತಿಯೊಬ್ಬರೂ ಇದನ್ನು ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ - ಹೃತಿಕ್ ಸೇರಿದಂತೆ ಹಲವು ನಟರು ಮಾಡಿಸಿಕೊಳ್ಳುತ್ತಾರೆ. ನೀವು ವಯಸ್ಸಾದಂತೆ ಮತ್ತು ನಿಮ್ಮ ಕೂದಲು ತೆಳುವಾಗಲು ಪ್ರಾರಂಭಿಸಿದಾಗ, ನೀವು ಈ ರೀತಿಯ ಕೆಲಸಗಳನ್ನು ಮಾಡಲೇಬೇಕು ಎಂದರು ಶೈಲೇಂದ್ರ.

ಪ್ಲೇಟ್ಲೆಟ್-ರಿಚ್ ಪ್ಲಾಸ್ಮಾ ಎಂದರೆ ಏನು?

ದುರಸ್ತಿ ಅಂಗವನ್ನು ಉತ್ತೇಜಿಸಲು, ರಕ್ತವನ್ನು ಗುಣಪಡಿಸಲು ಈ ಟ್ರೀಟ್​ಮೆಂಟ್​ ಬಳಕೆಯಾಗುತ್ತದೆ. ರೋಗಿಯ ರಕ್ತದಿಂದಲೇ ತಯಾರಿಸಲಾಗುವ ವಿಶೇಷ ದ್ರವ. ಇದು ಗಾಯ ಗುಣಪಡಿಸಲು ಕೂದಲು ಬೆಳವಣಿಗೆ, ಚರ್ಮ ಕಾಂತಿ ಹೆಚ್ಚಿಸಲು ಸಹಾಯಮಾಡುತ್ತದೆ. ರೋಗಿಯ ದೇಹದಿಂದ ರಕ್ತ ಪಡೆದು, ಇದರಲ್ಲಿನ ಪ್ಲೇಟ್ಲೆಟ್​ಗಳನ್ನು ಬೇರ್ಪಡಿಸಿ ಇಂಜೆಕ್ಷನ್​ ಆಗಿ ಸಿದ್ಧಪಡಿಸಲಾಗುತ್ತದೆ. ಇದನ್ನು ಬೇಕಾದ ಜಾಗಕ್ಕೆ ಇಂಜೆಕ್ಟ್​ ಮಾಡಲಾಗುತ್ತದೆ, (ಏಜೆನ್ಸೀಸ್).