ಮುಂಬೈ: ಕರೊನಾದಿಂದ ಭಾರತೀಯ ಚಿತ್ರರಂಗವೇ ಸಂಕಷ್ಟಕ್ಕೆ ಸಿಲುಕಿದೆ. ಇಂಥ ಸಂದರ್ಭದಲ್ಲಿ ಸಾಕಷ್ಟು ಸ್ಟಾರ್ ಸಿನಿಮಾ ಕಲಾವಿದರು, ತಮ್ಮ ಕೈಲಾದ ಸೇವೆಯನ್ನು ಮಾಡುತ್ತಿದ್ದಾರೆ. ದಿನಸಿ ರೂಪದಲ್ಲಿ, ಹಣದ ರೂಪದಲ್ಲಿ ಹೀಗೆ ಒಂದಿಲ್ಲೊಂದು ರೂಪದಲ್ಲಿ ಸಹಾಯ ಮಾಡುತ್ತಿದ್ದಾರೆ. ಅದೇ ರೀತಿ ಇದೀಗ ಸಲ್ಮಾನ್ ಖಾನ್, ಸಾಹಸ ಕಲಾವಿದರ ಬೆನ್ನಿಗೆ ನಿಂತಿದ್ದಾರೆ.
ಇದನ್ನೂ ಓದಿ: ಬಾಲಿವುಡ್ನಲ್ಲಿ ಇನ್ನೊಂದು ‘ಪ್ರೇಮ್ ಕಹಾನಿ’ …
ಹೌದು, ಸ್ಟಂಟ್ ಕಲಾವಿದರ ಅಸೋಸಿಯೇಷನ್ ವತಿಯಿಂದ ಎಲ್ಲರ ಮಾಹಿತಿ ಮತ್ತು ಬ್ಯಾಂಕ್ ಖಾತೆಯ ವಿವರವನ್ನು ಪಡೆದುಕೊಂಡಿರುವ ಸಲ್ಮಾನ್ ಖಾನ್, ಹಣದ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಸಲ್ಮಾನ್ ಅವರ ಈ ಕಾರ್ಯಕ್ಕೆ ನೆಟ್ಫ್ಲಿಕ್ಸ್ ಇಂಡಿಯಾ ಸಹ ಮುಂದೆ ಬಂದಿದ್ದು, ಒಟ್ಟಿಗೆ ಹಣಕಾಸಿನ ನೆರವನ್ನು ನೀಡಲಿದ್ದಾರೆ.