ಬಾಲಿವುಡ್ ನಟ ಇತ್ತೀಚಿನ ದಿನಗಳಲ್ಲಿ ಪದೇಪದೇ ಮನೆಯಿಂದ ಹೊರಬರುತ್ತಲೇ ಇರುತ್ತಾರಂತೆ. ಅದಕ್ಕೆ ಸರಿಯಾಗಿ, ಅವರು ಮಗನನ್ನು ಕರೆದುಕೊಂಡು ರಸ್ತೆಯಲ್ಲಿ ಅಡ್ಡಾಡುವ ಫೋಟೋಗಳು ಇತ್ತೀಚೆಗೆ ಸಾಕಷ್ಟು ಜನಪ್ರಿಯವಾಗಿದೆ.
ಎಲ್ಲಾ ಸರಿ, ಸೈಫ್ ಅಲಿ ಖಾನ್ ಅವರು ಪದೇಪದೇ ಮನೆಯಿಂದ ಹರಬರುವುದೇಕೆ? ಎಂಬಂತಹ ಪ್ರಶ್ನೆಗಳು ಬರುವುದು ಸಹಜ. ಇದುವರೆಗೂ ಈ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಈಗ ಕೊನೆಗೂ ಉತ್ತರ ಸಿಕ್ಕಿದೆ.
ಸೈಫ್ ಅಲಿ ಖಾನ್ ತಮ್ಮ ಮನೆ ಬದಲಾಯಿಸುತ್ತಿದ್ದಾರಂತೆ. ಈಗಿರುವ ಅಪಾರ್ಟ್ಮೆಂಟ್ನ ಎದುರಿಗೆ ಇನ್ನೊಂದು ಅಪಾರ್ಟ್ಮೆಂಟ್ನಲ್ಲಿ ಮನೆ ತೆಗೆದುಕೊಂಡಿದ್ದಾರಂತೆ. ಆ ಮನೆಯ ರಿನೋವೇಶನ್ ನಡೆಯುತ್ತಿರುವುದರಿಂದ, ಆಗಾಗಿ ಹೋಗಿ ಕೆಲಸಗಳು ಸರಿಯಾ ನಡೆಯುತ್ತಿವೆಯಾ, ಇಲ್ಲವಾ ಎಂಬುದನ್ನು ನೋಡಿಕೊಂಡು ಬರುತ್ತಿರುತ್ತಾರಂತೆ.
ಹಾಗೆ ಹೋದಾಗಲೆಲ್ಲಾ, ಅವರ ಮನೆಯ ಎದುರಿಗಿರುವ ಪಾಪಾರಾಝಿಗಳು ಫೋಟೋ ತೆಗೆಯುತ್ತಲೇ ಇರುವುದರಿಂದ ಅದು ದೊಡ್ಡ ಸುದ್ದಿಯಾಗಿದೆ. 'ಮನೆಯಲ್ಲಿ ಬೇಸರ ಎಂಬ ಕಾರಣಕ್ಕೆ ಪದೇಪದೇ ಮನೆಯಿಂದ ಬರುತ್ತಿಲ್ಲ. ಹೊಸ ಮನೆಯ ಕೆಲಸಗಳನ್ನು ಆಗಾಗ ನೋಡುವುದಕ್ಕೆ ಹೊರಬರುತ್ತಿರುತ್ತೇನೆ. ಆಗಾಗ ಮಗನನ್ನು ಹೆಗಲ ಮೇಲೆ ಕೂಡಿಸಿಕೊಂಡು ಹೋಗಿ, ಹೊಸ ಮನೆಯ ಕೆಲಸಗಳನ್ನು ತೋರಿಸುತ್ತೇನೆ' ಎಂದು ಸೈಫ್, ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ 'ತಾನಾಜಿ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸೈಫ್, ಇತ್ತೀಚಿನ ದಿನಗಳಲ್ಲಿ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರಂತೆ. ಕರೊನಾ ಹಾವಳಿ ಸ್ವಲ್ಪ ತಹಬದಿಗೆ ಬಂದ ನಂತರ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರಂತೆ. ಮೊದಲಿಗೆ 'ಬಂಟಿ ಔರ್ ಬಬ್ಲಿ' ಸೀಕ್ವೆಲ್ನ ಚಿತ್ರೀಕರಣವನ್ನು ಅವರು ಮೊದಲು ಮುಗಿಸಲು ಯೋಚಿಸಿದ್ದು, ಆ ನಂತರ 'ಭೂತ್ ಪೊಲೀಸ್' ಎಂಬ ಚಿತ್ರದಲ್ಲಿ ನಟಿಸುತ್ತಾರಂತೆ.